ನವದೆಹಲಿ : ಬೈಕ್ ಕ್ರೇಜ್ ಇರೋದು ಜೀವನದಲ್ಲಿ ಒಮ್ಮೆಯಾದ್ರೂ ಬುಲೆಟ್ ಓಡಿಸಬೇಕು ಅನ್ನೋ ಕನಸು ಕಾಣ್ತಾರೆ. ಲಕ್ಷಾಂತರ ರೂಪಾಯಿ ಕೊಟ್ಟು ಬುಲೆಟ್ ಖರೀದಿಸಿ ಜಾಲಿ ರೈಡ್ ಮಾಡ್ತಾರೆ. ಆದ್ರೆ ಇನ್ಮುಂದೆ ಭಾರತದಲ್ಲಿ ಬುಲೆಟ್ ಓಡೋದಿಲ್ಲ.
ನಿಮಗೆ ಆಶ್ಚರ್ಯವೆನಿಸಿದ್ರು ಈ ಸುದ್ದಿ ನಿಜ. ಬುಲೆಟ್ ಬೈಕ್ ತಯಾರಿಕಾ ಸಂಸ್ಥೆಯಾಗಿರೊ ರಾಯಲ್ ಎನ್ ಫೀಲ್ಡ್ ಮಾರ್ಚ್ 31 ರಿಂದ ಮೂರು ಮಾದರಿಯ ಬುಲೆಟ್ ಬೈಕ್ ತಯಾರಿಕೆಯನ್ನು ಬಂದ್ ಮಾಡಲು ನಿರ್ಧರಿಸಿದೆ. ದೇಶದ ಮಹಾನಗರಗಳಲ್ಲಿ ಹೆಚ್ಚುತ್ತಿರುವ ಪರಿಸರ ಮಾಲಿನ್ಯದಿಂದ ಕೇಂದ್ರ ಸರಕಾರ ಎಚ್ಚೆತ್ತುಕೊಂಡಿದೆ. ಹೀಗಾಗಿಯೇ ದೇಶದಲ್ಲಿ ಬಿಎಸ್ -6 ಇಂಜಿನ್ ಹೊಂದಿರುವ ಬೈಕ್ ಗಳನ್ನು ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಮೋಟಾರ್ ಸೈಕಲ್ ತಯಾರಿಕಾ ಸಂಸ್ಥೆಗಳು ಬೈಕ್, ಸ್ಕೂಟರ್ ತಯಾರಿಕೆಯಲ್ಲಿ ಸಾಕಷ್ಟು ಮಾರ್ಪಾಡು ಮಾಡಿಕೊಂಡಿದ್ದವು. ಆದ್ರೆ ಬುಲೆಟ್ ತಯಾರಿಕಾ ಸಂಸ್ಥೆ ರಾಯಲ್ ಎನ್ ಫೀಲ್ಡ್ ಎಲ್ಲಾ ಮಾದರಿಯ ಬುಲೆಟ್ ಗಳನ್ನು ಬಿಎಸ್ -6 ಮಾದರಿಯಲ್ಲಿ ಪರಿವರ್ತಿಸೋ ಬದಲು ಮೂರು ಮಾದರಿಯ ಬುಲೆಟ್ ತಯಾರಿಕೆಯನ್ನು ನಿಲ್ಲಿಸಲು ಮುಂದಾಗಿದೆ.
ಪ್ರಮುಖವಾಗಿ ಕಳೆದ ವರ್ಷ ರಾಯಲ್ ಎನ್ ಫೀಲ್ಡ್ ಕಂಪೆನಿ ಬಿಡುಗಡೆ ಮಾಡಿದ್ದ ದುಬಾರಿ ಬೆಲೆಯ ಬುಲೆಟ್ 500, ಕ್ಲಾಸಿಕ್ 500 ಹಾಗೂ ಥಂಡರ್ ಬರ್ಡ್ 500 ಮಾದರಿ ಬೈಕಗಳ ಮಾರಾಟವನ್ನು ಸಂಸ್ಥೆ ಸ್ಥಗಿತಗೊಳಿಸಲಿದೆ. ಮಾರುಕಟ್ಟೆಯಲ್ಲಿ ಮೂರು ಮಾದರಿಯ ಬುಲೆಟ್ ಗಳು 2.5 ಲಕ್ಷ ರೂಪಾಯಿಗೆ ಬಿಕರಿಯಾಗುತ್ತಿದ್ದವು. ಇಷ್ಟೊಂದು ದುಬಾರಿ ಬೈಕ್ ಗಳಿಗೂ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯಿತ್ತು. ಇಷ್ಟೊಂದು ಬೇಡಿಕೆಯಿದ್ದರೂ ಕೂಡ ಮಾರ್ಚ್ 31ರ ನಂತರ ಭಾರತದಲ್ಲಿ ಈ ಮೂರು ಮಾದರಿಯ ಬುಲೆಟ್ ಗಳು ತಯಾರಿಯಾಗೋದಿಲ್ಲ. ಆದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬುಲೆಟ್ ತನ್ನ ಹವಾ ಮುಂದುವರಿಸಲಿದೆ. ಭಾರತದಲ್ಲಿ ಬುಲೆಟ್ ಉತ್ಪಾದನೆ ಸ್ಥಗಿತವಾದ್ರೂ ಕೂಡ ದುರಸ್ಥಿ ವ್ಯವಸ್ಥೆಯನ್ನು ಸಂಸ್ಥೆ ಮುಂದುವರಿಸಲಿದೆ. ಮಾರ್ಚ್ 31ರ ವರೆಗೆ ಸಂಸ್ಥೆ ಬಿಡುಗಡೆ ಮಾಡುವ ಎಲ್ಲಾ ಮಾದರಿಯ ಬುಲೆಟ್ ಗಳಿಗೆ ಅಗತ್ಯವಿರುವ ಬಿಡಿಭಾಗಗಳೂ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ಬುಲೆಟ್ ಪ್ರಿಯರಿಗೆ ಭಾರತದಲ್ಲಿ ಬುಲೆಟ್ ಸಂಪೂರ್ಣವಾಗಿ ಓಡೋದೇ ಇಲ್ಲಾ ಅನ್ನೋ ಆತಂಕ ಬೇಡ. ಯಾಕೆಂದ್ರೆ ಕಂಪೆನಿ ಮೂರು ಮಾದರಿಯ ಬುಲೆಟ್ ಉತ್ಪಾದನೆಯನ್ನು ಬಂದ್ ಮಾಡಿದರೂ ಕೂಡ, ಕೆಲ ದಿನಗಳ ಹಿಂದೆಯಷ್ಟೇ ಸಂಸ್ಥೆ ಬಿಡುಗಡೆ ಮಾಡಿದ್ದ ಬಿಎಸ್-6 ಮಾದರಿಯ ಹಿಮಾಲಯನ್ ಬಿಎಸ್-6 ಮತ್ತು ಕ್ಲಾಸಿಕ್ 350 ಮಾದರಿಯ ಬೈಕ್ ಭಾರತೀಯರಿಗೆ ಲಭ್ಯವಾಗಲಿದೆ ಎಂದು ಕಂಪೆನಿ ಹೇಳಿದೆ. ಬುಲೆಟ್ ಬಂದ್ ಆಗುತ್ತೆ ಅನ್ನೋ ಆತಂಕದಲ್ಲಿದ್ದ ಬುಲೆಟ್ ಪ್ರಿಯರಿಗೆ ಕ್ಲಾಸಿಕ್ 350 ಮಾದರಿಯ ಬುಲೆಟ್ ಮಾರಾಟ ಮುಂದುವರಿಸೋದಾಗಿ ಹೇಳಿರುವುದು ಕೊಂಚ ಸಮಾಧಾನವನ್ನು ತಂದಿದೆ.