ಕೊಡಗಿನ ಬೆಡಗಿ, ನಟಿ ಹರ್ಷಿಕಾ ಪೂಣಚ್ಚ ದಂಪತಿ ತಮ್ಮ ಮನೆಯ ಹೊಸ ಅತಿಥಿಯ ನಿರೀಕ್ಷೆಯಲ್ಲಿದ್ದಾರೆ

ಹರ್ಷಿಕಾ ಪೂಣಚ್ಚ ಅವರು ಇದೀಗ ಎರಡನೇ ಮಗುವಿನ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದು, ಈ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ

ಭುವನ್ ಮತ್ತು ಹರ್ಷಿಕಾ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಈ ಸಿಹಿಸುದ್ದಿಯನ್ನು ಖಚಿತಪಡಿಸಿದ್ದಾರೆ

ಗುಡ್ ನ್ಯೂಸ್ ಕೇಳುತ್ತಿದ್ದಂತೆ, ಚಿತ್ರರಂಗದ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಕಮೆಂಟ್‌ಗಳ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ

ಹರ್ಷಿಕಾ ಪೂಣಚ್ಚ ಅವರು ಕರ್ನಾಟಕದ ಕೊಡಗಿನ ಗೌಡ ಸಾರಸ್ವತ/ ಕೊಡವ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದರು

2008 ರಲ್ಲಿ ತೆರೆಕಂಡ 'ಪಿಯುಸಿ ಕನ್ನಡ ಚಲನಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು

ಹರ್ಷಿಕಾ ಪೂಣಚ್ಚ ಈಗಾಗಲೇ ಹೆಣ್ಣುಮಗುವಿನ ತಾಯಿಯಾಗಿದ್ದು ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಬ್ಲಾಕ್‌ಬಸ್ಟರ್ ಹಿಟ್ 'ಜಾಕಿ' ಜನಪ್ರಿಯತೆ ತಂದುಕೊಟ್ಟಿತು 

ಕನ್ನಡ ಮಾತ್ರವಲ್ಲದೆ, ಇವರು ತೆಲುಗು, ಮಲಯಾಳಂ, ಕೊಂಕಣಿ ಹಾಗೂ ಭೋಜ್‌ಪುರಿ ಚಿತ್ರರಂಗದಲ್ಲೂ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ.