ಸೋಮವಾರ, ಜೂನ್ 16, 2025
HomekarnatakaBangalore Rain Record : ಸಿಲಿಕಾನ್ ಸಿಟಿಯಲ್ಲಿ ಮುಗಿಯದ ವರುಣಾರ್ಭಟ : ಐದು ವರ್ಷಗಳಲ್ಲೇ ದಾಖಲೆ ಮಳೆ

Bangalore Rain Record : ಸಿಲಿಕಾನ್ ಸಿಟಿಯಲ್ಲಿ ಮುಗಿಯದ ವರುಣಾರ್ಭಟ : ಐದು ವರ್ಷಗಳಲ್ಲೇ ದಾಖಲೆ ಮಳೆ

- Advertisement -

ಬೆಂಗಳೂರು : Bangalore Rain Record : ಚಳಿಗಾಲ ಸಮೀಪಿಸಿದ್ದರೂ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಇನ್ನೂ ವರುಣನ ಆರ್ಭಟ ಮುಂದುವರೆದಿದೆ. ವಾಯುಭಾರ ಕುಸಿತದ ಎಫೆಕ್ಟ್ ಬಳಿಕವೂ ನಗರದಲ್ಲಿ ಮಳೆ ಅಬ್ಬರ ಕಡಿಮೆಯಾಗಿಲ್ಲ. ಈ‌ ಮಧ್ಯೆ ತನ್ನ ವಿಭಿನ್ನ ಹವಾಮಾನದಿಂದಲೇ ಗಮನ ಸೆಳೆದ ಸಿಲಿಕಾನ್ ಸಿಟಿ ಈ ಭಾರಿ ದಾಖಲೆಯ ಮಳೆ‌ಪಡೆದಿದ್ದು, ಕಳೆದ ಐದು ವರ್ಷದಲ್ಲೇ ಇದು ದಾಖಲೆಯ ಮಳೆ ಬರೋಬ್ಬರಿ 170.6 ಸೆಂಟಿಮೀಟರ್ ಮಳೆ ಸುರಿದಿದೆ.

ಈ ಭಾರಿಯ ನೈರುತ್ಯ ಮಾನ್ಸೂನ್ ಬೆಂಗಳೂರು, ದಕ್ಷಿಣ ಒಳನಾಡು ಹಾಗೂ ಕರ್ನಾಟಕದ ಎಲ್ಲ ಭಾಗಕ್ಕೂ ಭರ್ಜರಿ ಮಳೆ ಸುರಿಸಿದೆ. ಈ ಪೈಕಿ ಬೆಂಗಳೂರಿನಲ್ಲಂತೂ ಬರೋಬ್ಬರಿ 170.6 ಸೆಂಟಿಮೀಟರ್ ಮಳೆಯಾಗಿದ್ದು, ಇದು ಕಳೆದ ಐದು ವರ್ಷದಲ್ಲಿ ಸುರಿದ ಭಾರಿ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಈ ವರ್ಷ ಬೆಂಗಳೂರು ನಗರ ವೀಕ್ಷಣಾಲಯದ ಅಳತೆಯ ಪ್ರಕಾರ ಶನಿವಾರದ ವರೆಗಿನ ದಾಖಲೆಯ ಪ್ರಕಾರ ಬೆಂಗಳೂರಿನಲ್ಲಿ 166 ಸೆಂಟಿಮೀಟರ್ ಮಳೆಯಾಗಿದೆ. ಬೆಂಗಳೂರಿನಲ್ಲಿ 2017 ರಲ್ಲಿ ವೀಕ್ಷಣಾಲಯದ ಅಳತೆ ಪ್ರಕಾರ 170 ಸೆಂಟಿಮೀಟರ್ ಮಳೆಯಾಗಿತ್ತು. ಅದರೆ ಈ ವರ್ಷದ ಮಳೆಯೂ ಈಗಾಗಲೇ ಈ ದಾಖಲೆ ಮುರಿದಿದೆ.

ಸದ್ಯ ಬೆಂಗಳೂರು 170.6 ಮಳೆಯೊಂದಿಗೆ ಐದು ವರ್ಷದ ಅತ್ಯಧಿಕ ಮಳೆ ಎಂಬ ದಾಖಲೆ ಬರೆದಿದ್ದರೇ, ಕರ್ನಾಟಕದ ಇತರ ಭಾಗಗಳು ಕೂಡ ಮಳೆಯಲ್ಲಿ ಹೊಸ ದಾಖಲೆ ಬರೆಯಲು ಮುಂದಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ ಅಕ್ಟೋಬರ್‌ 17 ರಂದು ಬೆಳಗ್ಗೆ 8.30 ರವರೆಗೆ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ. ಹೀಗಾಗಿ ನಗರದಲ್ಲಿ ಇನ್ನೂ ಮಳೆಯ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ. ಇನ್ನೂ ಬೆಂಗಳೂರಿನ ಎಚ್ ಎಎಲ್ ಭಾಗದಲ್ಲಿ ಈಗಾಗಲೇ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು, ಇನ್ನು ಎರಡು ದಿನಗಳ ಕಾಲ ಸುರಿಯಲಿರುವ ಭಾರಿ‌ ಮಳೆ ಇನ್ನಷ್ಟು ಅವಾಂತರ ಹೆಚ್ಚಿಸುವ ನಿರೀಕ್ಷೆ ಇದೆ.

ಬಿಬಿಎಂಪಿ ವ್ಯಾಪ್ತಿಯ ಮಹದೇವಪುರ ಹಾಗೂ ಆರ್. ಆರ್ ನಗರ ಭಾಗದಲ್ಲಿ ಹೆಚ್ಚಿನ ಮಳೆಯಾಗೋ ಸಾಧ್ಯತೆ ಇದ್ದು, ಜನರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಹೇಳಿದೆ. ಸದ್ಯ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಭಾರಿ ಮಳೆ ಸುರಿಯುವ ಮುನ್ಸೂಚನೆ ಇದೆ‌.

ಇದನ್ನೂ ಓದಿ : Idli ATM : ಎಟಿಎಂ ನಲ್ಲಿ ದುಡ್ಡಿನ ಬದಲು ಇಡ್ಲಿ, ವಡೆ : ಬೆಂಗಳೂರಲ್ಲಿ ಹೊಸ ತಂತ್ರಜ್ಞಾನ

ಇದನ್ನೂ ಓದಿ : Operation Demolishan : ಬೆಂಗಳೂರಲ್ಲಿ ಆಪರೇಶನ್‌ ಡೆಮೋಲಿಶನ್ : ಪೆಟ್ರೋಲ್ ಸುರಿದು ದಂಪತಿ ಆತ್ಮಹತ್ಯೆ ಯತ್ನ

Bangalore Rain Record In Last Fiver Years

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular