1,800 ಮಂದಿಯನ್ನು ಹೊತ್ತುತಂದ ಹಡಗು : ಚೀನಿ ಪ್ರವಾಸಿಗರಿಗೆ ಮಂಗಳೂರಲ್ಲಿ ಬಿತ್ತು ನಿಷೇಧ !

0

ಮಂಗಳೂರು : ಕರಾವಳಿಯಲ್ಲೀಗ ಕೊರೊನಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲಾಡಳಿತ ವೈರಸ್ ಸೋಂಕು ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ ಪ್ರವಾಸಕ್ಕೆಂದು ಹಡಗಿನ ಮೂಲಕ ಮಂಗಳೂರಿಗೆ ಬಂದಿದ್ದ ಚೀನಾ ಪ್ರವಾಸಿಗರಿಗೆ ಇದೀಗ ಪ್ರವೇಶ ನಿಷೇಧಿಸಲಾಗಿದೆ.


ಕೋಸ್ಟಾ ವಿಕ್ಟೋರಿಯಾ ಹಡಗಿನ ಮೂಲಕ ವಿದೇಶದಿಂದ ಸುಮಾರು 1800 ಮಂದಿ ಪ್ರವಾಸಿಗರು ಮಂಗಳೂರಿಗೆ ಬಂದಿದ್ರು. ಎನ್ಎಂಪಿಟಿ ಬಂದರಿನಲ್ಲಿ ಪ್ರವಾಸಿಗರಿಗೆ ಹಡಗಿನಿಂದ ಇಳಿಯಲು ಅನುಮತಿಯನ್ನು ನೀಡಲಾಗಿತ್ತು. ಆದ್ರೆ ಹಡಗಿನಲ್ಲಿದ್ದ ಮೂವರು ಚೀನಾ ಪ್ರವಾಸಿಗರಿಗೆ ಅನುಮತಿಯನ್ನು ನೀಡಲಾಗಿಲ್ಲ.

ಚೀನಾ ಪ್ರವಾಸಿಗರು ಮಂಗಳೂರಿಗೆ ಬಂದಿರೋ ಕುರಿತು ನವ ಮಂಗಳೂರು ಬಂದರು ಇಲಾಖೆಯ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಜಿಲ್ಲಾಧಿಕಾರಿ, ಆರೋಗ್ಯಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ್ದಾರೆ. ಚೀನಾ ಪ್ರವಾಸಿಗರು ನಗರ ಪ್ರವೇಶಿಸದಂತೆ ಕಟ್ಟುನಿಟ್ಟಿ ಕ್ರಮವಹಿಸುವಂತೆ ಜಿಲ್ಲಾಡಳಿತಕ್ಕೆ ಸಚಿವರು ಸೂಚನೆಯನ್ನು ನೀಡಿದ್ದಾರೆ.

Leave A Reply

Your email address will not be published.