ಮಂಗಳೂರು : ಕೊರೊನಾ ಮಹಾಮರಿ ಅಟ್ಟಹಾಸವನ್ನು ಮೆರೆಯುತ್ತಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ತಿಂಗಳ ಮಗುವಿಗೆ ಕೊರೊನಾ ಸೋಂಕು ತಗುಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕುಟುಂಬ ಕಳೆದೊಂದು ವಾರದ ಹಿಂದೆ ಕೇರಳದ ಕಾಸರಗೋಡಿಗೆ ತೆರಳಿದ್ದರು.

ನಂತರದ ಮನೆಗೆ ಬಂದಾಗ ಮಗುವಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಮಗುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ನಿನ್ನೆ ಮಗುವಿನ ಸ್ಕ್ವಾಬ್ ಮತ್ತು ರಕ್ತದ ಪರೀಕ್ಷೆಯನ್ನು ನಡೆಸಿದಾಗ ಮಗುವಿಗೆ ಕೊರೊನಾ ಇರೋದು ದೃಢಪಟ್ಟಿತ್ತು, ಆದರೆ ಇದೀಗ ಮತ್ತೆ ಆರೋಗ್ಯ ತಪಾಸಣೆಗೆ ಜಿಲ್ಲಾಡಳಿತ ಮುಂದಾಗಿದೆ.

ಇದೀಗ ಎರಡನೇ ಬಾರಿಗೆ ಸ್ಕ್ವಾಬ್ ಮತ್ತು ರಕ್ತದ ಮಾದರಿ ಮರು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಜಿಲ್ಲಾಡಳಿತ ಅಂತಿಮ ವರದಿಗಾಗಿ ಕಾಯುತ್ತಿದೆ. ಇದೀಗ ಮಗುವಿನ ಪೋಷಕರನ್ನು ಕೂಡ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. ಮಗುವಿಗೆ ಕೊರೊನಾ ದೃಢಪಟ್ಟಿರುವುದರಿಂದಾಗಿ ಸಜಿಪಮಡು ಗ್ರಾಮದಲ್ಲಿ ಹೋಮ್ ಕ್ವಾರಂಟೈನ್ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ.