ಮಂಗಳೂರು : ಕೊರೊನಾ ಭೀತಿಯಿಂದ ಕಂಗೆಟ್ಟಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಜಿಲ್ಲಾಡಳಿತ ಗುಡ್ ನ್ಯೂಸ್ ಕೊಟ್ಟಿದೆ. ಕಳೆದೊಂದು ವಾರದಿಂದಲೂ ಜಿಲ್ಲೆಯಲ್ಲಿ ಯಾವುದೇ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಅಲ್ಲದೇ ಕೊರೊನಾ ಪೀಡಿತವಾಗಿದ್ದ 10 ತಿಂಗಳ ಮಗು ಇದೀಗ ಸಂಪೂರ್ಣವಾಗಿ ಗುಣಮುಖವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸಜಿಪನಡು ಗ್ರಾಮದ ಹತ್ತು ತಿಂಗಳ ಮಗುವಿನ ಜೊತೆಗೆ ತಾಯಿ ಹಾಗೂ ಅಜ್ಜಿಗೂ ಶಂಕಿತ ಕೊರೊನಾ ಕಾಣಿಸಿಕೊಂಡಿತ್ತು.

ಆದರೆ ತಾಯಿ ಹಾಗೂ ಅಜ್ಜಿಗೆ ಕೊರೊನಾ ನೆಗೆಟಿವ್ ವರದಿ ಬಂದಿತ್ತು. ಇದೀಗ ಕೊರೋನಾ ಪೀಡಿತವಾಗಿದ್ದ ಮಗುವನ್ನು ಡಿಸ್ವಾರ್ಜ್ ಮಾಡಲಾಗಿದೆ.

ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 12 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 6 ಮಂದಿ ಗುಣಮುಖರಾದಂತಾಗಿದೆ. ಕಳೆದೊಂದು ವಾರದಿಂದ ಯಾವುದೇ ಪಾಸಿವಿಟ್ ಪ್ರಕರಣ ಪತ್ತೆಯಾಗದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಕೊಂಚ ನೆಮ್ಮದಿ ನೀಡಿದೆ.