ಯುನ್ನಾನ್ : ಕೊರೊನಾ ವೈರಸ್ ವಿಶ್ವವನ್ನೇ ನಡುಗಿಸುತ್ತಿರೋ ಬೆನ್ನಲ್ಲೇ ಚೀನಾದಲ್ಲಿ ಮತ್ತೊಂದು ಹೊಸ ವೈರಸ್ ಪತ್ತೆಯಾಗಿದೆ. ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿ ಹಂಟಾ ಅನ್ನೋ ಹೊಸ ವೈರಸ್ ಪತ್ತೆಯಾಗಿದ್ದು, ಓರ್ವನನ್ನು ಬಲಿ ಪಡೆದಿದೆ. 32 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದೀಗ ಹೊಸ ವೈರಸ್ ವಿಶ್ವದಾದ್ಯಂತ ಆತಂಕವನ್ನು ಮೂಡಿಸಿದೆ.

ಚೀನಾದ ಹುಬೆ ಪ್ರಾಂತ್ಯದಲ್ಲಿ ಕೊರೊನಾ ಕಾರಣಿಸಿಕೊಂಡು ವಿಶ್ವದಾದ್ಯಂತ ತಲ್ಲಣವನ್ನು ಮೂಡಿಸಿದೆ. ಇದರ ಬೆನ್ನಲ್ಲೇ ಚೀನಾದಲ್ಲೀಗ ಹಂಟಾ ವೈರಸ್ ಪತ್ತೆಯಾಗಿದೆ. ಈ ಕುರಿತು ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಯುನ್ನಾನ್ ಪ್ರದೇಶದಲ್ಲಿ ಹಂಟಾ ವೈರಸ್ ಗೆ ತುತ್ತಾಗಿದ್ದ ವ್ಯಕ್ತಿ ಬಸ್ಸಿನಲ್ಲಿಯೇ ಸಾವನ್ನಪ್ಪಿದ್ದಾನೆ.

ಮಾತ್ರವಲ್ಲ 32 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಹಂಟಾ ವೈರಸ್ ಇಲಿಗಳಿಂದ ಹರಡುವ ವೈರಸ್ ಆಗಿದ್ದು, ಸಮಾಧಾನದ ಸಂಗತಿಯೆಂದ್ರೆ ಹಂಟಾ ವೈರಸ್ ಮನುಷ್ಯನಿಂದ ಮನುಷ್ಯರಿಗೆ ಹರಡೋದಿಲ್ಲಾ, ಬದಲಾಗಿ ಇಲಿಗಳ ಮೂಲ ಮೂತ್ರದಿಂದ ಮಾತ್ರವೇ ಹರಡುತ್ತದೆ ಎಂದು ಗ್ಲೋಬಲ್ ಟೈಮ್ಸ್ ತನ್ನ ಟ್ವೀಟ್ ನಲ್ಲಿ ತಿಳಿಸಿದೆ. ಹಂಟಾ ವೈರಸ್ ಸೋಂಕು ಚೀನಾ ಮತ್ತು ಅರ್ಜೆಂಟೀನಾದಲ್ಲಿ ಮಾತ್ರವೇ ಈ ರೋಗ ಕಾಣಿಸಿಕೊಂಡಿದೆ.