Go First Crisis : ಗೋ ಫಸ್ಟ್‌ ಏರ್‌ಲೈನ್‌ಗೆ ಮತ್ತೆ ಸಂಕಷ್ಟ, ವೇತನ ವಿಳಂಬ 500 ನೌಕರರು ರಾಜೀನಾಮೆ

ನವದೆಹಲಿ: ದೇಶೀಯ ವಿಮಾನಯಾನ ಸಂಸ್ಥೆ ವಿಮಾನಯಾನ ಸೇವೆ ಆರಂಭಿಸಲು ಸಿದ್ದತೆ ನಡೆಸುತ್ತಿರುವ ವೇಳೆಯಲ್ಲಿ ಗೋ ಫಸ್ಟ್‌ ಏರ್‌ಲೈನ್‌ಗೆ (Go First Crisis) ಮತ್ತೊಂದು ಸಂಕಷ್ಟ ಎದುರಾಗಿದೆ. ವರದಿಗಳ ಪ್ರಕಾರ, ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ 500ಕ್ಕೂ ಅಧಿಕ ನೌಕರರು ರಾಜೀನಾಮೆ ಸಲ್ಲಿಸಿ ಬೇರೊಂದು ವಿಮಾನಯಾನ ಸಂಸ್ಥೆಯನ್ನು ಸೇರ್ಪಡೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಮೇ 2023 ರಿಂದ ವಿಮಾನಯಾನ ಸಂಸ್ಥೆಯು ಉದ್ಯೋಗಿಗಳಿಗೆ ಪಾವತಿಸಿಲ್ಲ. ಜೊತೆಗೆ ವಿಮಾನಯಾನ ಸೇವೆ ಪುನರರಾಂಭಕ್ಕೆ ಹಲವು ಸಮಯ ತೆಗೆದುಕೊಳ್ಳುತ್ತಿರುವುದು ಉದ್ಯೋಗಗಳು ಸಂಸ್ಥೆಯನ್ನು ತೊರೆಯಲು ಕಾರಣ ಎಂದು ಇಂಡಿಯಾ ಡಾಟ್‌ ಕಾಂ ವರದಿ ಮಾಡಿದೆ.

600 ಗೋ ಫಸ್ಟ್ ಪೈಲಟ್‌ಗಳ ಪೈಕಿ 500 ಕ್ಕೂ ಹೆಚ್ಚು ಮಂದಿ ಏರ್‌ ಇಂಡಿಯಾ ಹಾಗೂ ಇಂಡಿಯೋ ಏರ್‌ಲೈನ್ಸ್‌ ಸಂಸ್ಥೆಯನ್ನು ಸೇರಿಕೊಂಡಿದ್ದರು. ಇದರಿಂದಾಗಿ ಗೋಫಸ್ಟ್‌ನಲ್ಲಿ ಇದೀಗ ಕೇವಲ 100 ಪೈಲಟ್‌ ಗಳು ಮಾತ್ರವೇ ಉಳಿದುಕೊಂಡಿದ್ದಾರೆ. ಕೇವಲ ಫೈಲೆಟ್‌ಗಳು ಮಾತ್ರವಲ್ಲದೇ ಜುಲೈನಿಂದ ಗೋ ಫರ್ಸ್ಟ್ ಕ್ಯಾಬಿನ್ ಸಿಬ್ಬಂದಿ ಮತ್ತು ಏರ್‌ಕ್ರಾಫ್ಟ್ ನಿರ್ವಹಣಾ ಎಂಜಿನಿಯರ್‌ಗಳು ಸೇರಿದಂತೆ ಒಟ್ಟು 1,200 ಉದ್ಯೋಗಿಗಳನ್ನು ಸಂಬಳ ಪಾವತಿಸದ ಹಿನ್ನೆಲೆ ಸಂಸ್ಥೆಯನ್ನು ತೊರೆದಿದ್ದಾರೆ.

ಜುಲೈ 10 ರಂದು ವಿಮಾನಯಾನ ಸಂಸ್ಥೆಯನ್ನು ಖರೀದಿಸಲು ಇತರ ಸಂಸ್ಥೆಗಳು ಮುಂದೆ ಬಂದಾಗ 4,200 ಉದ್ಯೋಗಿಗಳಿದ್ದರು. ಆದರೆ ಇದೀಗ ಉದ್ಯೋಗಿಗಳ ಸಂಖ್ಯೆ 3,000ಕ್ಕೆ ಇಳಿಕೆ ಕಂಡಿದೆ. ಅದ್ರಲ್ಲೂ ಸೆಪ್ಟೆಂಬರ್ ಮಧ್ಯದ ವೇಳೆಗೆ ಉದ್ಯೋಗಿಗಳ ಸಂಖ್ಯೆ 2,400 ಅಥವಾ 2,500 ಕ್ಕೆ ಇಳಿಯುವ ನಿರೀಕ್ಷೆಯಿದೆ. ಏಕೆಂದರೆ 500 ರಿಂದ 600 ಕ್ಕೂ ಹೆಚ್ಚು ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಹಲವರು ನೋಟಿಸ್‌ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಪರಿಸ್ಥಿತಿ ಇದೇ ರೀತಿ ಮುಂದುವರಿಕೆಯಾದ್ರೆ ಇನ್ನಷ್ಟು ಮಂದಿ ಸಂಸ್ಥೆಯನ್ನು ತೊರೆಯುವ ಸಾಧ್ಯತೆಯಿದೆ.

ಇನ್ನು ವಿಮಾನಯಾನ ಸೇವೆಯನ್ನ ಗೋಫಸ್ಟ್‌ ಮತ್ತೆ ಆರಂಭಿಸಲು ಮಧ್ಯಂತರ ನಿಧಿಯಾಗಿ ರೂ 450 ಕೋಟಿಗಳನ್ನು ತುಂಬ ಬೇಕಾಗಿದೆ. ಆದರೆ ವಿಮಾನ ಬಾಡಿಗೆದಾರರ ವಿಚಾರದಲ್ಲಿ ದೆಹಲಿ ಹೈಕೋರ್ಟ್‌ ತೀರ್ಪಿಗಾಗಿ ಕಾಯಲಾಗುತ್ತಿದೆ. ಇನ್ನು ಹಲವು ಷರತ್ತುಗಳೊಂದಿಗೆ 15 ವಿಮಾನಗಳು ಮತ್ತು 114 ದೈನಂದಿನ ವಿಮಾನಗಳೊಂದಿಗೆ ಕಾರ್ಯಾಚರಣೆಯನ್ನು ಪುನರಾರಂಭಿಸುವ ಗೋ ಫಸ್ಟ್‌ನ ಯೋಜನೆಗೆ ನಾಗರಿಕ ವಿಮಾನಯಾನ ನಿಯಂತ್ರಕ ಡಿಜಿಸಿಎ ಅನುಮೋದನೆ ನೀಡಲಾಗಿದೆ ಎಂದು ಈ ಹಿಂದೆಯೇ ತಿಳಿಸಿತ್ತು. ಇದನ್ನೂ ಓದಿ : Railway Tickets Booking‌ : ಹಬ್ಬಕ್ಕಾಗಿ ರೈಲ್ವೆ ಟಿಕೆಟ್‌ ಮುಂಗಡವಾಗಿ ಖರೀದಿಸಬೇಕೇ ? ಇಲ್ಲಿದೆ ಸಲಹೆ

ಇದನ್ನೂ ಓದಿ : IndiGo airlines : ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ : ಓರ್ವ ಪ್ರಯಾಣಿಕ ಸಾವು

ಗೋ ಫಸ್ಟ್‌ ವಿಮಾನಯಾನ ಸಂಸ್ಥೆಯು ಮೇ 3, 2023 ರಂದು ವಿಮಾನ ಹಾರಾಟದ ಕಾರ್ಯಾಚರಣೆಯನ್ನು ನಿಲ್ಲಿಸಿತು. ವಿಮಾನಯಾನ ಸಂಸ್ಥೆಯು ವಿಮಾನಗಳ ರದ್ದತಿಯನ್ನು ಆಗಸ್ಟ್ 21 ರವರೆಗೆ ವಿಸ್ತರಿಸಿದೆ. ಆದರೆ, ಪೂರ್ಣ ಮರುಪಾವತಿಯನ್ನು ಮೂಲ ಪಾವತಿ ವಿಧಾನಕ್ಕೆ ನೀಡಲಾಗುತ್ತದೆ ಎಂದು ಈ ಹಿಂದೆ ಸೂಚಿಸಿದ್ದ ಮರುಪಾವತಿಯ ಬಗ್ಗೆ ಏರ್‌ಲೈನ್ ಏನನ್ನೂ ಉಲ್ಲೇಖಿಸಲಿಲ್ಲ.

Go First Crisis: Go First Airline is in trouble again, salary delay, 500 employees resign

Comments are closed.