ಗೃಹಲಕ್ಷ್ಮೀ ಯೋಜನೆಗೆ ಸರಕಾರದಿಂದ ಹೊಸ ರೂಲ್ಸ್‌: ಇನ್ಮುಂದೆ ಈ ಮಹಿಳೆಯರಿಗೆ ಸಿಗೋದೆ ಇಲ್ಲ ಹಣ

Gruha Lakshmi Scheme : ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ( Karnataka Government) ಜಾರಿಗೆ ಬರುತ್ತಿದ್ದಂತೆಯೇ ಗೃಹಲಕ್ಷ್ಮೀ ಯೋಜನೆಯನ್ನು (Gruha Lakshmi Yojane) ಜಾರಿಗೆ ತಂದಿತ್ತು. ರಾಜ್ಯದಲ್ಲಿನ ಎಲ್ಲಾ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಈಗಾಗಲೇ 11 ತಿಂಗಳುಗಳಿಂದ ಪ್ರತೀ ತಿಂಗಳು 2000 ರೂಪಾಯಿಯಂತೆ ಹಣವನ್ನು ಗೃಹಿಣಿಯರು ಪಡೆಯುತ್ತಿದ್ದಾರೆ

Gruha Lakshmi Scheme : ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ( Karnataka Government) ಜಾರಿಗೆ ಬರುತ್ತಿದ್ದಂತೆಯೇ ಗೃಹಲಕ್ಷ್ಮೀ ಯೋಜನೆಯನ್ನು (Gruha Lakshmi Yojane) ಜಾರಿಗೆ ತಂದಿತ್ತು. ರಾಜ್ಯದಲ್ಲಿನ ಎಲ್ಲಾ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಈಗಾಗಲೇ 11 ತಿಂಗಳುಗಳಿಂದ ಪ್ರತೀ ತಿಂಗಳು 2000 ರೂಪಾಯಿಯಂತೆ ಹಣವನ್ನು ಗೃಹಿಣಿಯರು ಪಡೆಯುತ್ತಿದ್ದಾರೆ. ಆದ್ರೀಗ ಸರಕಾರ ಹೊಸ ರೂಲ್ಸ್‌ ಜಾರಿ ಮಾಡಿದೆ.

Gruha Lakshmi Scheme Big Updates News in Kannada
Image Credit to Original Source

ಕರ್ನಾಟಕದ ಕಾಂಗ್ರೆಸ್‌ ಸರಕಾರ ಐದು ಗ್ಯಾರಂಟಿ ಯೋಜನೆ (Guarantee Scheme) ಗಳನ್ನು ಘೋಷಣೆ ಮಾಡಿತ್ತು. ಗೃಹಜ್ಯೋತಿ ಯೋಜನೆ (Gruha Jyothi Yojana) ಯ ಮೂಲಕ ರಾಜ್ಯದಲ್ಲಿನ ಅರ್ಹ ಕುಟುಂಬಗಳಿಗೆ ನಿಗದಿತ ಪ್ರಮಾಣದಲ್ಲಿ ಉಚಿತ ವಿದ್ಯುತ್‌ ನೀಡುತ್ತಿದ್ದು, ಗೃಹಲಕ್ಷ್ಮೀ ಯೋಜನೆಯ ಮೂಲಕ ಗೃಹಿಣಿಯರಿಗೆ 2000 ರೂಪಾಯಿ ಹಣವನ್ನು ಪ್ರತೀ ತಿಂಗಳು ನೀಡುತ್ತಿದೆ.ಇಷ್ಟೇ ಅಲ್ಲದೇ ಸರಕಾರಿ ಸಾಮಾನ್ಯ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.

ಇಷ್ಟೇ ಅಲ್ಲದೇ ಯುವಜನರಿಗಾಗಿ ವಿದ್ಯಾನಿಧಿ ( Vidhya Nidhi Yojana) ಯೋಜನೆ, ಅನ್ನಭಾಗ್ಯ ಯೋಜನೆ (Anna Bhaghya Yojana) ಯನ್ನೂ ಜಾರಿಗೆ ತಂದಿತ್ತು. ಆದ್ರೀಗ ಗೃಹಲಕ್ಷ್ಮೀ ಯೋಜನೆ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರಿಗೆ ವರದಾನವಾಗಿ ಪರಿಣಮಿಸಿತ್ತು. ಬ್ಯಾಂಕ್‌ ಖಾತೆಯನ್ನೇ ಹೊಂದಿರದ ಲಕ್ಷಾಂತರ ಮಂದಿ ಮಹಿಳೆಯರು ಬ್ಯಾಂಕ್‌ಗಳಲ್ಲಿ ವ್ಯವಹಾರ ಮಾಡೋದಕ್ಕೆ ಸಾಧ್ಯವಾಗಿತ್ತು.

Gruha Lakshmi Scheme Big Updates News in Kannada
Image Credit to Original Source

ಇದನ್ನೂ ಓದಿ : 7ನೇ ವೇತನ ಆಯೋಗ ಜಾರಿ : ಸರಕಾರಿ ನೌಕರರಿಗೆ ಭರ್ಜರಿ ಗುಡ್‌ನ್ಯೂಸ್‌ ಕೊಟ್ಟ ಸಿಎಂ ಸಿದ್ದರಾಮಯ್ಯ

ಕಳೆದ 11 ತಿಂಗಳುಗಳಲ್ಲಿ ಬರೋಬ್ಬರಿ 22 ಸಾವಿರ ರೂಪಾಯಿ ಹಣವನ್ನು ಮಹಿಳೆಯರು ಪಡೆದುಕೊಂಡಿದ್ದರು. ಆದರೆ ಕೆಲವು ಮಹಿಳೆಯರಿಗೆ ಇನ್ಮುಂದೆ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಡೆಯೋದಕ್ಕೆ ಸಾಧ್ಯವಿಲ್ಲ. ಗೃಹಲಕ್ಷ್ಮೀ ಯೋಜನೆ ಜಾರಿಗೂ ಮೊದಲೇ ಸರಕಾರ ಯಾರಿಗೆಲ್ಲಾ ಈ ಯೋಜನೆಯ ಲಾಭ ಪಡೆಯಬಹುದು ಅನ್ನೋದನ್ನು ತಿಳಿಸಿತ್ತು. ಆದ್ರೂ ಕೂಡ ಜಿಎಎಸ್‌ಟಿ ಹಾಗೂ ಆದಾಯ ತೆರಿಗೆ ಪಾವತಿ ಮಾಡುವವರಿಗೆ ಈ ಯೋಜನೆಯ ಲಾಭ ಸಿಗೋದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿತ್ತು.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ 80 ಸಾವಿರ ಅರ್ಜಿ ತಿರಸ್ಕಾರ :ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ರೆ ಮಾತ್ರ ಸಿಗುತ್ತೆ ಹಣ

ಆದಾಯ ತೆರಿಗೆ ಪಾವತಿದಾರರು ಹಾಗೂ ಜಿಎಸ್‌ಟಿ ಪಾವತಿದಾರರು ಕೂಡ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆದರೆ ಸರಕಾರ ಇದೀಗ ಗೃಹಲಕ್ಷ್ಮೀ ಯೋಜನೆಯ ವಿಚಾರದಲ್ಲಿ ಕಠಿಣ ರೂಲ್ಸ್‌ ಜಾರಿ ಮಾಡಿದೆ. ಇನ್ಮುಂದೆ ಯಾವುದೇ ಕಾರಣಕ್ಕೂ ತೆರಿಗೆ ಪಾವತಿ ಮಾಡುವವರು ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯೋದಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ.

ಇದನ್ನೂ ಓದಿ : PM Awas Yojana : ಹೊಸ ಮನೆ ಕಟ್ಟಿಸುವವರಿಗೆ ಕೇಂದ್ರ ಸರಕಾರದಿಂದ ಸಿಗಲಿದೆ 30 ಲಕ್ಷ ರೂಪಾಯಿ

Gruha Lakshmi Scheme Big Updates News in Kannada

 

Comments are closed.