PM-Kisan Samman Nidhi : ರೈತರಿಗೆ ಸಂತಸದ ಸುದ್ದಿ, ಪ್ರಧಾನಮಂತ್ರಿ ಕಿಸಾನ್ ಯೋಜನೆ 17ನೇ ಕಂತು ಬಿಡುಗಡೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

Pradhan Mantri Kisan Yojana 17th installment : ಭಾರತ ಕೋಟ್ಯಾಂತರ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮೋದಿ ಅವರು ಕಿಸಾನ್‌ ಸಮ್ಮಾನ್‌ ಯೋಜನೆಯ 17ನೇ ಕಂತನ್ನು ಬಿಡುಗಡೆಗೊಳಿಸಿದ್ದಾರೆ.

Pradhan Mantri Kisan Yojana 17th installment : ಭಾರತ ಕೋಟ್ಯಾಂತರ ರೈತರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi )  ಅವರು ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮೋದಿ ಅವರು ಕಿಸಾನ್‌ ಸಮ್ಮಾನ್‌ ಯೋಜನೆಯ (PM-Kisan Samman Nidhi) 17ನೇ ಕಂತನ್ನು ಬಿಡುಗಡೆಗೊಳಿಸಿದ್ದಾರೆ. ಈ ಮೂಲಕ ದೇಶದ 9.26 ಕೋಟಿ ರೈತರಿಗೆ ಅನುಕೂಲವಾಗಲಿದೆ.

PM-Kisan Samman Nidhi 17th installment Updates Good news for farmers from PM Narendra Modi government
Image Credit to Original Source

ವಾರಣಾಸಿಯಲ್ಲಿ ಇಂದು ನಡೆದ ಕಿಸಾನ್ ಸಮ್ಮಾನ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17 ನೇ ಕಂತು ಬಿಡುಗಡೆಗೊಳಿಸಿದ್ದಾರೆ. ನರೇಂದ್ರ ಮೋದಿ ಅವರು ಡಿಬಿಟಿ ಮೂಲಕ ದೇಶದ 9.26 ಕೋಟಿ ರೈತರ ಖಾತೆಗಳಿಗೆ ಒಟ್ಟು 20 ಸಾವಿರ ಕೋಟಿ ರೂ. ಹಣವನ್ನು ಜಮೆ ಮಾಡಿಸಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 16 ನೇ ಕಂತು ಫೆಬ್ರವರಿ 28 ರಂದು ಬಿಡುಗಡೆಗೊಂಡಿತ್ತು.

ಇದನ್ನೂ ಓದಿ : ರುಚಿ ರುಚಿ ಅಡುಗೆ ಮಾಡುವ ಮಹಿಳೆಯರಿಗೆ ಸರಕಾರದಿಂದ ಸಿಗಲಿದೆ 50 ಸಾವಿರ ರೂಪಾಯಿ

ದೇಶದ ಅನ್ನದಾತರು ಇದೀಗ 17 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದರು. ಆದರೆ ರೈತರ ಕಾಯುವಿಕೆಗೆ ಪ್ರಧಾನಿ ಮೋದಿ ಅವರು ತೆರೆ ಎಳೆದಿದ್ದಾರೆ. ರೈತರು ತಮ್ಮ ಖಾತೆಗಳಿಗೆ ಹಣ ಜಮೆ ಆಗಿದೆಯೇ ಇಲ್ಲವೇ ಎಂದು ಚೆಕ್‌ ಮಾಡಬಹುದಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17ನೇ ಕಂತಿನ ಹಣ ನಿಮ್ಮ ಖಾತೆಗೆ ಜಮೆ ಆಗಿದ್ದರೆ ನಿಮಗೆ ಮೊಬೈಲ್‌ಗೆ ಸಂದೇಶ ರವಾನೆ ಆಗುತ್ತದೆ.

PM-Kisan Samman Nidhi 17th installment Updates Good news for farmers from PM Narendra Modi government
Image Credit to Original Source

ಒಂದೊಮ್ಮೆ ನಿಮ್ಮ ಮೊಬೈಲ್ ಸಂಖ್ಯೆಗೆ ಸಂದೇಶ ಬರದಿದ್ದರೆ. ನೀವು ಎಟಿಎಂಗೆ ತೆರಳಿ ಬ್ಯಾಲೆನ್ಸ್‌ ಚೆಕ್‌ (Balance Check)  ಮಾಡಬಹುದಾಗಿದೆ. 17ನೇ ಕಂತಿನ ಹಣ ಖಾತೆಗೆ ವರ್ಗಾವಣೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಎಟಿಎಂ ಯಂತ್ರದಿಂದ ಮಿನಿ ಸ್ಟೇಟ್‌ಮೆಂಟ್ (ATM ministatement) ಪಡೆಯುವ ಮೂಲಕ ಪತ್ತೆ ಹಚ್ಚಬಹುದಾಗಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ 11ನೇ ಕಂತು : ರಾಜ್ಯ ಸರಕಾರದಿಂದ ಭರ್ಜರಿ ಗುಡ್‌ನ್ಯೂಸ್‌

ಎಟಿಎಂ ಕಾರ್ಡ್‌ (ATM Card) ಹೊಂದಿಲ್ಲದೇ ಇದ್ದವರು ಬ್ಯಾಂಕ್‌ ಶಾಖೆಗೆ ತೆರಳಿ ಪಾಸ್‌ಬುಕ್‌ (Passbook ) ಎಂಟ್ರಿ ಮಾಡಿಸಿದ್ರೆ, ನಿಮ್ಮ ಖಾತೆಗೆ ಪಿಎಂ ಕಿಸಾನ್‌ ಯೋಜನೆಯ ಹಣ ಜಮೆ ಆಗಿದೆಯೇ ಅನ್ನೋ ಮಾಹಿತಿ ಲಭ್ಯವಾಗಲಿದೆ. ಒಂದೊಮ್ಮೆ ನಿಮ್ಮ ಖಾತೆಗೆ ಪಿಎಂ ಕಿಸಾನ್‌ ಯೋಜನೆಯ 17 ನೇ ಕಂತಿನ ಹಣ ಬಾರದೇ ಇದ್ದಲ್ಲಿ, ನೀವು ಎಎಪಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ವೆಬ್‌ಸೈಟ್ https://www.pmkisan.gov.in/Contacts.aspx ಗೆ ಭೇಟಿ ನೀಡುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ 80 ಸಾವಿರ ಅರ್ಜಿ ತಿರಸ್ಕಾರ :ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ರೆ ಮಾತ್ರ ಸಿಗುತ್ತೆ ಹಣ

PM-Kisan Samman Nidhi Good news for farmers, Prime Minister Narendra Modi released the 17th installment of Pradhan Mantri Kisan Yojana

Comments are closed.