‘ಏಕ್ ಲವ್ ಯಾ’ ನಲ್ಲಿ ರಚ್ಚು ಸಖತ್ ಹಾಟ್ : ವೈರಲ್ ಆಯ್ತು ಲಿಪ್ ಲಾಕ್ ಸೀನ್

0

ಸ್ಯಾಂಡಲ್ ವುಡ್ ನ ನಿರೀಕ್ಷಿತ ಸಿನಿಮಾ‘ಏಕ್​ ಲವ್​ ಯಾ’ಟೀಸರ್​ ಬಿಡುಗಡೆಯಾಗಿದೆ. ಪ್ರೇಮಿಗಳ ದಿನದಂದೇ ಚಿತ್ರದ ಮೊದಲ ಟೀಸರ್ ರಿಲೀಸ್ ಮಾಡಿದ್ದಾರೆ ನಿರ್ದೇಶಕ ಪ್ರೇಮ್.

ಏಕ್ ಲವ್ ಯಾ ಸಿನಿಮಾ ಮೂಲಕ ನಟಿ ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಅವರನ್ನು ತೆರೆ ಮೇಲೆ ತರೋದಕ್ಕೆ ಹೊರಟಿದ್ದಾರೆ ನಿರ್ದೇಶಕ ಪ್ರೇಮ್.

ಪ್ರೇಮಿಗಳ ದಿನದಂದು ರಿಲೀಸ್ ಆಗಿರೋ ಟೀಸರ್ ಯೂಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಟೀಸರ್ ನಲ್ಲಿ ನಟ ರಾಣಾ ಹಾಗೂ ನಟಿ ರಚಿತಾ ರಾಮ್ ಮೈಚಳಿ ಬಿಟ್ಟು ನಟಿಸಿದ್ದಾರೆ.

ಅದ್ರಲ್ಲೂ ರಚಿತಾ ರಾಮ್ ಲಿಪ್ ಲಾಕ್ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ. ಏಕ್ ಲವ್ ಯಾ ಸಿನಿಮಾದ ಮೂಲಕ ಪ್ರೀತಿ, ಲವ್ ಫೇಲ್ಯೂರ್, ಲಿಪ್ ಕಿಸ್, ಆ್ಯಕ್ಷನ್ ಜೊತೆಗೆ ಪ್ರೇಮ ಅನ್ನೊ ಎರಡಕ್ಷರಕ್ಕೆ ಹೊಸ ಅರ್ಥ ನೀಡಲು ಹೊರಟಿದ್ದಾರೆ ನಿರ್ದೇಶಕ ಜೋಗಿ ಪ್ರೇಮ್.

ಏಕ್​ ಲವ್​ ಯಾ ಚಿತ್ರದಲ್ಲಿ ರಾಣಾಗೆ ನಾಯಕಿಯಾಗಿ ರಚಿತಾ ರಾಮ್ ಜೊತೆಗೆ ಕೊಡಗಿನ ಯುವ ನಟಿ ರೀಷ್ಮಾ ಕಾಣಿಸಿಕೊಂಡಿದ್ದಾರೆ.

ಶೀರ್ಷಿಕೆಯ ಮೂಲಕವೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿರೋ ಏಕ್ ಲವ್ ಯಾ ಸಿನಿಮಾದ ಟೀಸರ್ ಇನ್ನಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.


ಟೀಸರ್ ನ ಮೊದಲ ದೃಶ್ಯದಲ್ಲಿಯೇ ರಚಿತಾ ರಾಮ್ ರಾಣಾ ಜೊತೆಗೆ ಸಿಗರೇಟ್ ಸೇದುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಭಿನ್ನ ಹೆಸರಿನ ಸಿನಿಮಾ ಮೂಲಕ ಜೋಗಿ ಪ್ರೇಮ್ ತನ್ನ ಬಾಮೈದನನ್ನ ವಿಭಿನ್ನವಾಗಿಯೇ ಸಿನಿಮಾರಂಗಕ್ಕೆ ಪರಿಚಯಿಸೋದಕ್ಕೆ ಹೊರಟಿದ್ದಾರೆ.

ರಕ್ಷಿತಾ ಪ್ರೇಮ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಜೋಗಿ. ಕರಿಯ, ಎಕ್ಸ್ ಕ್ಯೂಸ್ ಮಿ, ಜೋಗಯ್ಯ ನಂತಹ ಮ್ಯೂಸಿಕಲ್ ಹಿಟ್ ಸಿನಿಮಾಗಳನ್ನು ನೀಡಿದ್ದ ಜೋಗಿ ಏಕ್ ಲವ್ ಯಾ ಸಿನಿಮಾವನ್ನು ಕೂಡ ಅದೇ ರೀತಿಯಲ್ಲಿ ಪ್ಲಾನ್ ಮಾಡಿದಂತಿದೆ. ಯಾಕೆಂದ್ರ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯಲ್ಲಿ ಸಿನಿಮಾ ಮೂಡಿಬರಲಿದೆ.

ಏಕ್ ಲವ್ ಯಾ ಸಿನಿಮಾದ ಟೀಸರ್…

Leave A Reply

Your email address will not be published.