ಶ್ವಾನದ ಜೊತೆಗಿನ ಭಾವನಾತ್ಮಕ ಸಿನಿಮಾ “ನಾನು ಮತ್ತು ಗುಂಡ”

0

ಸ್ಯಾಂಡಲ್ ವುಡ್ ನಲ್ಲಿ ಹೊಸತನದ ಸಿನಿಮಾಗಳು ಸಾಕಷ್ಟು ಸಿನಿಮಾಗಳು ತೆರೆ ಕಾಣುತ್ತಿವೆ. ಶ್ವಾನದ ಜೊತೆಗಿನ ಟ್ರೈಲರ್ ಹಾಗೂ ಇಂಪಾದ ಹಾಡುಗಳಿಂದ ಸದ್ದು ಮಾಡ್ತಿರೋ ನಾನು ಮತ್ತು ಗುಂಡ ಈ ವಾರ ಬಿಡುಗಡೆಯಾಗುತ್ತಿದೆ.

ಶಿವರಾಜ್ ಕೆ.ಆರ್ ಪೇಟೆ ಮತ್ತು ಗೋವಿಂದೇ ಗೌಡ್ರು ಮುಖ್ಯ ಭೂಮಿಕೆಯಲ್ಲಿ ಮೂಡಿಬಂದಿರೋ ಈ ಪ್ರಯೋಗಾತ್ಮಕ ಸಿನಿಮಾಕ್ಕೆ ಶ್ರೀನಿವಾಸ್ ತಿಮ್ಮಯ್ಯ ಆಕ್ಷನ್ ಕಟ್ ಹೇಳುತ್ತಿದ್ದಾರೆ, ಜೋಗಿ ಪ್ರೇಮ್ ಅವರ ಗಾಂಧಿಗಿರಿ ಡೈರೆಕ್ಟ್ ಮಾಡಿದ್ದ ರಘು ಹಾಸನ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಈ ಮೊದಲು ಮುಂಚೆ ನಾಯಿ ನನ್ ಮಗ ಅನ್ನೋ ಟೈಟಲ್ ಇಟ್ಟು ಸಿನಿಮಾ ಮಾಡೋದಕ್ಕೆ ಹೊರಟಿದ್ದ ಚಿತ್ರತಂಡ. ಹೆಸರು ಸರಿ ಹೋಗಲ್ಲ ಅಂತಾ ನಾನು ಮತ್ತು ಗುಂಡ ಅಂತ ಹೇಳಿ ಹೆಸರಿಟ್ಟಿದ್ದಾರೆ. ಶರತ್ ಚಕ್ರವರ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ಕಾರ್ತಿಕ್ ಶರ್ಮಾ ಸಂಗೀತ ಕಿವಿಗೆ ಮುದ ನೀಡುತ್ತಿದೆ. ಸಿನಿಮಾಕ್ಕೆ ರೋಹಿತ್ ರಮಣ ಸಾಹಿತ್ಯ ಅದ್ಬುತವಾಗಿದೆ.

ಸಿನಿಮಾದುದ್ದಕ್ಕೂ ಶ್ವಾನದ ಪಾತ್ರ ಪ್ರಮುಖವಾಗಿದ್ದು, ಡಬ್ಬಿಂಗ್ ಸಹ ಆ ಶ್ವಾನದ ಹತ್ರನೇ ಮಾಡ್ಸಿರೋದು ಇನ್ನೊಂದು ವಿಶೇಷ. ಆ ಶ್ವಾನದ ಹೆಸರು ಸಿಂಭ ಅಂತ ಇದ್ದು, ಈ ಸಿನಿಮಾಕ್ಕೂ ಮುಂಚೆ ಹಲವಾರು ಕಿರುಚಿತ್ರಗಳು ಮತ್ತು ಮಲಯಾಳಂ ಸಿನಿಮಾ ಬೆಂಗಳೂರು ಡೈರಿಸ್ ನಲ್ಲಿ ಪಾತ್ರಗಳನ್ನು ಮಾಡಿದೆ.

Leave A Reply

Your email address will not be published.