ಸೋಮವಾರ, ಜೂನ್ 23, 2025
HomeCinema70ರ ಮುದುಕನಾಗಿ ಚಿನ್ನಾರಿಮುತ್ತ : ಇಂದು ತೆರೆಗೆ ಬರುತ್ತೆ ಮಾಲ್ಗುಡಿ ಡೇಸ್

70ರ ಮುದುಕನಾಗಿ ಚಿನ್ನಾರಿಮುತ್ತ : ಇಂದು ತೆರೆಗೆ ಬರುತ್ತೆ ಮಾಲ್ಗುಡಿ ಡೇಸ್

- Advertisement -

ಮಾಲ್ಗುಡಿ ಡೇಸ್…. ಒಂದು ಕಾಲದಲ್ಲಿ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿತ್ತು. ಕರಾಟೆ ಕಿಂಗ್ ಶಂಕರ್ ನಾಗ್ ಮಾಲ್ಗುಡಿ ಡೇಸ್ ಹೆಸರಲ್ಲಿ ತಯಾರಿಸಿದ್ದ ಸೀರಿಯಲ್ ಅಂದಿನ ಕಾಲದಲ್ಲೇ ಜನಮೆಚ್ಚುಗೆಯನ್ನು ಪಡೆದಿತ್ತು. ಖ್ಯಾತ ಕಾದಂಬರಿಕಾರ ಆರ್.ಕೆ.ನಾರಾಯಣ್ ಅವರ ಮಾಲ್ಗುಡಿ ಡೇಸ್ ಅನ್ನೋ ಕಥೆಯನ್ನೇ ಶಂಕರ್ ನಾಗ್ ತೆರೆಮೇಲೆ ತಂದು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯ ರಸದೌತಣವನ್ನೇ ಉಣಬಡಿಸಿದ್ದರು. ಇದೀಗ ಇದೇ ಮಾಲ್ಗುಡಿ ಡೇಸ್ ಅನ್ನೋ ಸಿನಿಮಾವೊಂದು ಬಿಡುಗಡೆಗೆ ಸಿದ್ದವಾಗಿದೆ.

Mandya 5

ಸದ್ಯಕ್ಕೆ ಗಾಂಧಿನಗರದಲ್ಲಿ ಮಾಲ್ಗುಡಿ ಡೇಸ್ ನದ್ದೇ ಮಾತು. ಚಿನ್ನಾರಿ ಮುತ್ತನಾಗಿ, ನಿನಗಾಗಿ ಮೂಲಕ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ವಿಜಯ ರಾಘವೇಂದ್ರ ಮಾಲ್ಗುಡಿ ಡೇಸ್ ಸಿನಿಮಾ ಮೂಲಕ ಢಿಪರೆಂಟ್ ಲುಕ್ ನಲ್ಲಿ ಜನರ ಮುಂದೆ ಬರ್ತಿದ್ದಾರೆ. ಚಿತ್ರ ತಂಡ ಈಗಾಗಲೇ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದು, 70 ವರ್ಷದ ಮುದುಕನ ಗೆಟಪ್ ನಲ್ಲಿ ವಿಜಯ ರಾಘವೇಂದ್ರ ಕಾಣಿಸಿಕೊಂಡು ಪ್ರೇಕ್ಷಕರಿಗೆ ಕುತೂಹಲವನ್ನು ಹುಟ್ಟಿಸಿದ್ದಾರೆ.

Malgudi Days News

ಮಾಲ್ಗುಡಿ ಅನ್ನೋ ಊರಿನಲ್ಲಿ ವರ್ತಮಾನದಲ್ಲಿ ಲಕ್ಷ್ಮೀ ನಾರಾಯಣ ಮಾಲ್ಗುಡಿ ಅನ್ನೋ ಕಾಲ್ಪನಿಕ ವ್ಯಕ್ತಿಯ ಜೀವನ ಸ್ಟೋರಿಯನ್ನೇ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಲಕ್ಷ್ಮೀ ನಾರಾಯಣ ಮಾಲ್ಗುಡಿ ಅನ್ನೋ 70 ವರ್ಷ ಪ್ರಾಯದ ಹಿರಿಯ ಬರಹಗಾರ ಹಾಗೂ ಶಾಲಾ ವಿದ್ಯಾರ್ಥಿಯಾಗಿ ಎರಡು ಪಾತ್ರಗಳಲ್ಲಿಯೂ ವಿಜಯ್ ರಾಘವೇಂದ್ರ ಅಭಿನಯಿಸಿದ್ದಾರೆ. ಆದ್ರೆ ವಿಜಯ್ ರಾಘವೇಂದ್ರರ ಮುದುಕನ ಗೆಟಪ್ ಸ್ಯಾಂಡಲ್ ವುಡ್ ನಲ್ಲಿ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ, ಸಿನಿಮಾ ಫಸ್ಟ್ ಲುಕ್ ನಲ್ಲೇ ಸಖತ್ ಸೌಂಡ್ ಮಾಡುತ್ತಿದೆ.

Malgudi Days 1

ನಟ ವಿಜಯ ರಾಘವೇಂದ್ರಗೆ ಗ್ರೀಷ್ಮಾ ಶ್ರೀಧರ್ ಸಾಥ್ ಕೊಟ್ಟಿದ್ದಾರೆ. ರಾಗಣದಲ್ಲಿ ಬಿಗ್​ಬಾಸ್​ ಖ್ಯಾತಿಯ ಧನರಾಜ್​​, ಗೋಪಿನಾಥ್​​​ ಭಟ್​​ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಕಿಶೋರ್ ಮೂಡಬಿದ್ರೆ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಆ್ಯಕ್ಷನ್ ಕಟ್ ಹೇಳಿದ್ದಾರೆ. ಕೆ.ರತ್ನಾಕರ್ ಕಾಮತ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಉದಯ್ ಲೀಲಾ ಅವರ ಛಾಯಾಗ್ರಹಣದಲ್ಲಿ ಸಿನಿಮಾ ಅದ್ಬುತವಾಗಿ ಮೂಡಿಬಂದಿದೆ. ಪ್ರದೀಪ್ ನಾಯಕ್ ಸಂಕಲನದ ಜೊತೆಗೆ ಗಗನ್ ಖಡೇರಿಯಾ ಸಂಗೀತ ಪ್ರೇಕ್ಷಕರಿಗೆ ಇಂಪು ನೀಡುತ್ತಿದೆ. ಟ್ರೈಲರ್ ನಿಂದಲೇ ಸಾಕಷ್ಟು ಹವಾ ಸೃಷ್ಟಿಸಿರೋ ಮಾಲ್ಗುಡಿ ಡೇಸ್ ಫೆಬ್ರವರಿ 7ರಂದು ತೆರೆಗೆ ಬರ್ತಿದ್ದು, ಚಿತ್ರ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular