ಮಳವಳ್ಳಿ ಜಾತ್ರೇಲಿ… ಮುದ್ದೆ ಮುದ್ದೆ ರಾಗಿ ಮುದ್ದೆ… ಹಾಡು ಸದ್ಯಕ್ಕೆ ಸಖತ್ ಫೇಮಸ್. ಕಳೆದ ವಾರ ಬಿಡುಗಡೆಯಾಗಿರೋ ಆನೆ ಬಲ ಪ್ರೇಕ್ಷಕರನ್ನ ತನ್ನತ್ತ ಸೆಳೆಯುತ್ತಿದೆ. ಸಿನಿಮಾದ ಗ್ರಾಮೀಣ ಸೊಗಡು, ಸಿನಿಮಾದ ಹಾಡುಗಳು, ಹಳ್ಳಿ ಸಂಸ್ಕೃತಿಯನ್ನು ಜನ ಮೆಚ್ಚಿಕೊಂಡಿದ್ದಾರೆ.

ಕಲಾ ನಿರ್ದೇಶಕ ಈಶ್ವರಿ ಕುಮಾರ್ ಮಗ ಸಾಗರ್ ನಾಯಕನಾಗಿ ನಟಿಸಿರೋ ಆನೆಬಲಕ್ಕೆ ರಕ್ಷಿತಾ ಜೋಡಿಯಾಗಿ ಅಭಿನಯಿಸಿದ್ದಾರೆ. ಜನತಾ ಟಾಕೀಸ್ ಪ್ರೊಡಕ್ಷನ್ ಅಡಿಯಲ್ಲಿ ಅಡಕಮಾರನಹಳ್ಳಿ ವೇಣುಗೋಪಾಲ್ ಬಂಡವಾಳ ಹೂಡಿರೋ ಈ ಸಿನಿಮಾಕ್ಕೆ ಸೂನಗನಹಳ್ಳಿ ರಾಜು ಆಕ್ಷನ್ ಕಟ್ ಹೇಳಿದ್ದಾರೆ. ಬಹುತೇಕ ಮಂಡ್ಯ, ಮದ್ದೂರು, ಮಳವಳ್ಳಿ ಮತ್ತು ಮೈಸೂರು ಭಾಗದಲ್ಲೇ ಚಿತ್ರೀಕರಣ ನಡೆದಿದ್ದು, ಅಲ್ಲಿನ ಸೊಗಡನ್ನು ಉತ್ತಮವಾಗಿ ಚಿತ್ರಿಸಿದ್ದು, ನೋಡುಗರಿಗೆ ಖುಷಿಕೊಡುತ್ತೆ.

ಮೈಸೂರು ಮಂಡ್ಯ ಭಾಗದ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಿನಿಮಾ ನೋಡಿ ಖುಷಿಯಾಗಿ ಮತ್ತೆ ಮತ್ತೆ ಸಿನಿಮಾ ನೋಡಲು ಥಿಯೇಟರ್ ಗಳತ್ತಾ ಮುಖಮಾಡುತಿದ್ದಾರೆ. ಪೂರ್ಣಚಂದ್ರ ಅವರ ಸಂಗೀತ ಚಿತ್ರದ ಮತ್ತೊಂದು ಹೈಲೈಟ್ ಗಳಲ್ಲಿ ಒಂದು. ಸಿನಿಮಾದಲ್ಲಿ ಹಿನ್ನಲೆ ಸಂಗೀತ ಅದಕ್ಕನುಗುಣವಾಗಿ ಇರೋ ಸೀನ್ ಗಳು ಚಿತ್ರವನ್ನ ಗೆಲುವಿನತ್ತಾ ಮುಖಮಾಡಿಸಿದೆ. ಸೂನಗನಹಳ್ಳಿ ರಾಜು ಅವರ ಕೆಲಸ ಸಿನಿಮಾದಲ್ಲಿ ಎದ್ದು ಕಾಣೋದಂತು ಗ್ಯಾರಂಟಿ. ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತಿದ್ದು, ಚಿತ್ರತಂಡ ಸಂತಸದಲ್ಲಿದೆ.