ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬಹು ಬೇಡಿಕೆಯ ನಟ ಹಾಗೂ ನಿರ್ದೇಶಕರಾಗಿ ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸದ್ಯ ಮುಂಬುರುವ ಸಿನಿಮಾ ಸಪ್ತ ಸಾಗರದಾಚೆ ಎಲ್ಲೋ (Sapta Sagaradaache Yello Movie) ಶೂಟಿಂಗ್ ಪೂರ್ಣಗೊಂಡಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ತಿಳಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಸಿನಿಪ್ರೇಕ್ಷಕರ ಗಮನವನ್ನು ಸೆಳೆದಿದೆ. ಕಳೆದ ವರ್ಷ ಬಿಡುಗಡೆಯಾದ ಚಾರ್ಲಿ 777 ಮೂಲಕ ಸಿನಿಪ್ರೇಕ್ಷರನ್ನು ರಂಜಿಸಿದ್ದಾರೆ. ಹಾಗೆಯೇ ಬಾಕ್ಸ್ ಆಫೀಸ್ ಉತ್ತಮ ಕಲೆಕ್ಷನ್‌ನ್ನು ಪಡೆಯುವ ಮೂಲಕ ಈ ಸಿನಿಮಾದಲ್ಲಿ ಯಶಸ್ಸನ್ನು ಕಂಡಿದ್ದಾರೆ. ಇದೀಗ ಮುಂದಿನ ಸಿನಿಮಾದ ಸಪ್ತ ಸಾಗರದಾಚೆ ಎಲ್ಲೋ ಚಿತ್ರೀಕರಣವನ್ನು ಮುಗಿಸಿದ್ದು, ಅದರ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ನಟ ರಕ್ಷಿತ್ ಶೆಟ್ಟಿ ತಮ್ಮ ಟ್ವಿಟರ್‌ನಲ್ಲಿ, “137 ಸೊಗಸಾದ ದಿನಗಳ ಚಿತ್ರೀಕರಣಕ್ಕೆ ಪೂರ್ಣವಿರಾಮ.. ಸಪ್ತ ಸಾಗರದಾಚೆ ಎಲ್ಲೋ ಯ ಅಲೆಗಳು ಥಿಯೇಟ್ರಿಕಲ್ ತೀರವನ್ನು ಹೊಡೆಯಲು ಸಿದ್ಧವಾದಾಗ, ಅದನ್ನು ವೀಕ್ಷಿಸಲು ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಇರುತ್ತೀರಿ ಎಂದು ನಾವು ಭಾವಿಸುತ್ತೇವೆ. ಸದ್ಯಕ್ಕೆ 137 ದಿನಗಳ ಚಿತ್ರೀಕರಣಕ್ಕೆ ಮುಕ್ತಾಯವಾಗಿದೆ ” ಎಂದು ಸುಂದರ ಕ್ಷಣಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಚಿತ್ರೀಕರಣದ ಮುಕ್ತಾಯದ ಕ್ಷಣಗಳನ್ನು ಸಿನಿತಂಡದ ಎಲ್ಲ ಸದಸ್ಯರು ಸಂಭ್ರಮಿಸುವುದನ್ನು ಕಾಣಬಹುದಾಗಿದೆ.
137 ಸೊಗಸಾದ ದಿನಗಳ ಚಿತ್ರೀಕರಣಕ್ಕೆ ಪೂರ್ಣವಿರಾಮ..
— Rakshit Shetty (@rakshitshetty) March 20, 2023
When the waves of #SSE is ready to hit the theatrical shores, we hope you’ll be there with your loved ones to watch it ☺️
For now, its a wrap to the 137 days of shoot ♥️pic.twitter.com/vHKsvB9BLQ
ಇದನ್ನೂ ಓದಿ : 60 ಪವನ್ ಚಿನ್ನಾಭರಣ ಕಳ್ಳತನ : ದೂರು ದಾಖಲಿಸಿದ ಐಶ್ವರ್ಯಾ ರಜನಿಕಾಂತ್
ಇದನ್ನೂ ಓದಿ : ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ನ್ನು ಕಬಳಿಸಿದ ಕಬ್ಜ ಸಿನಿಮಾ
ಇದನ್ನೂ ಓದಿ : ಮಾರ್ಚ್ 22 ರಂದು “ಕಾಟೇರ” ಸಿನಿಮಾದ ನಾಯಕಿ ಪಾತ್ರದ ಪೋಸ್ಟರ್ ರಿವೀಲ್
ನಟ ರಕ್ಷಿತ ಶೆಟ್ಟಿ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಹೇಮಂತ್ ರಾವ್ ನಿರ್ದೇಶನವಿದೆ. ಬೀರಬಲ್ ಸಿನಿಮಾದ ಖ್ಯಾತಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ 36 ಸೆಕೆಂಡ್ ಇರುವ ಟೀಸರ್‌ನ್ನು ಪ್ರೇಮಿಗಳ ದಿನದಂದು ಬಿಡುಗಡೆ ಮಾಡಲಾಗಿದೆ. ಟೀಸರ್ನಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಾತ್ರ ಕಾಣಿಸಿಕೊಂಡಿದ್ದಾರೆ. ಮನು-ಸುರಭಿ ಪ್ರೇಮ ಕಥೆಯ ಝಲಕ್ ಅನ್ನು ಟೀಸರ್ ನಲ್ಲಿ ಕಾಣಬಹುದಾಗಿದೆ. ಈಗಾಗಲೇ ಟೀಸರ್ ನೋಡಿದ ಪ್ರೇಕ್ಷಕರಿಗೆ ರಕ್ಷಿತ್ ಸಿನಿಮಾ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ.
Actor Rakshit Shetty starrer Sapta Sagaradaache Yello Movie has finished shooting.