- ವಂದನಾ ಕೊಮ್ಮುಂಜೆ
ಬಾಲಿವುಡ್ ನ ದಿವಾ ದೀಪಿಕಾ ಪಡುಕೋಣೆ ಸಧ್ಯ ಸಖತ್ ಬ್ಯುಸಿ ನಟಿ . ಹಾಟ್ ಹುಡುಗಿಯಾಗಿ ಕಾಣಿಸಿಕೊಳ್ಳೊ ದೀಪಿಕಾ ತುಂಬಾನೇ ಎಮೋಷನಲ್. ಇದಕ್ಕೆ ಸಾಕ್ಷಿ ಅವರು ಇತ್ತೀಚೆಗೆ ನೀಡಿದ ಸಂದರ್ಶನ. ಹೌದು ಪ್ರೀತಿ ವಿಚಾರದಲ್ಲಿ ತಾನು ಮೋಸ ಹೋಗಿ ಖಿನ್ನತೆಗೆ ಒಳಗಾಗಿದ್ದೆ ಅನ್ನೋದನ್ನು ದೀಪಿಕಾ ಹೇಳಿಕೊಂಡಿದ್ದಾರೆ

ರಣಬೀರ್ ಕಪೂರ್ ಹೆಸರನ್ನು ಪ್ರಸ್ತಾಪಿಸದೇ ತನ್ನ ಮಾಜಿ ಪ್ರೇಮಿ ರಣಬೀರ್ ಹಾಗೂ ತನ್ನ ನಡುವಿನ ಪ್ರೇಮ ಕಥೆಯನ್ನು ದೀಪಿಕಾ ಬಿಚ್ಚಿಟ್ಟಿದ್ದಾರೆ.

ಒಂದು ಕಾಲದಲ್ಲಿ ಸೂಪರ್ ಜೋಡಿ ಎನಿಸಿಕೋಡಿದ್ದ ಈ ಜೋಡಿ, ಸಡನ್ ಆಗಿ ಬೇರೆಯಾಗಿತ್ತು. ಇದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿತ್ತು. ಇದಕ್ಕೆ ಸ್ವತಹ ದೀಪಿಕಾನೇ ಉತ್ತರ ನೀಡಿದ್ದಾರೆ .

ತಮ್ಮ ನೋವಿನ ಕಥೆ ಹೇಳಿಕೊಂಡಿರೋ ಡಿಪ್ಪಿ “ಆತ ನನಗೆ ಮೋಸ ಮಾಡಿದ್ದ. ಮೊದಲ ಬಾರಿಗೆ ನಮ್ಮ ನಡುವೆ ಭಿನ್ನಾಭಿಪ್ರಾಯ ಉಂಟಾದಾಗ ತಿದ್ದಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದೆ.

ಈ ಸಂಬಂಧಕ್ಕಾಗಿ ಬಹಳಷ್ಟು ತ್ಯಾಗನೂ ಮಾಡಿದ್ದೆ. ಆದ್ರೆ ಆತ, ಆತನ ಹವ್ಯಾಸ ಹಾಗು ಆತನ ಸಂಬಂಧಗಳೇ ನಮ್ಮ ಪ್ರೀತಿಗೆ ಮುಳುವಾಯಿತು.”ಎಂದಿದ್ದಾರೆ.

ಎರಡನೇ ಅವಕಾಶ ನೀಡಿದ್ದೆ
ಇಷ್ಟೆಲ್ಲಾ ಆದರೂ ನಾನು ಆತನಿಗೆ ಎರಡನೇ ಅವಕಾಶ ನೀಡೋ ದಡ್ಡ ಕೆಲಸ ಮಾಡಿದ್ದೆ . ಯಾಕೆಂದರೆ ಆತ ತಪ್ಪಾಯಿತು ನನ್ನು ಬಿಟ್ಟು ಹೋಗಬೇಡ ಅಂತ ಕೈಕಾಲು ಹಿಡಿದಿದ್ದ. ಆತ ಸರಿ ಹೋಗಲಾರ ಅಂತ ಗೊತ್ತಿದ್ರು ಆತನನ್ನು ಪ್ರೀತಿಸಿದೆ. ಆದರೆ ಆತ ನನ್ನೆದುರೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದಿದ್ದ”

ಸೆಕ್ಸ್ ಅನ್ನೋದು ದೈಹಿಕ ಅಲ್ಲ ಭಾವನಾತ್ಮಕ ವಿಚಾರ
ಸೆಕ್ಸ್ ಅನ್ನೋದು ನನ್ನ ಪಾಲಿಗೆ ಕೇವಲ ದೈಹಿಕ ವಿಚಾರವಲ್ಲ, ಬದಲಿಗೆ ಭಾವನಾತ್ಮಕ ವಿಚಾರ. ನಾನು ಪ್ರೀತಿಯಲ್ಲಿದ್ದಾಗ ಯಾರಿಗೂ ಮೋಸ ಮಾಡಿಲ್ಲ. ಮೋಸ ಮಾಡೋದೆ ಆದ್ರೆ ಆ ಸಂಬಂಧದಲ್ಲಿ ನಾನು ಯಾಕೆ ಇರುತ್ತೇನೆ?.

ಅಂತ ಪ್ರಶ್ನಿಸಿದ್ದಾರೆ ಡಿಪ್ಪಿ. ಸಂಬಂಧದಲ್ಲಿ ನಾನು ತುಂಬಾ ನೀಡಿದೇನೆ. ಆದ್ರೆ ದ್ರೋಹ ಎನ್ನುವುದು ನಂಬಿಕೆಯನ್ನು ಮುರಿಯುತ್ತದೆ. ಗೌರವವನ್ನು ದೂರ ಮಾಡುತ್ತೆ ಅಂತ ನೋವಿನಿಂದ ಹೇಳಿಕೊಂಡಿದಾರೆ.

ತನ್ನ ಹಾಗೂ ರಣಬೀರ್ ಸಂಬಧಧ ಮುಗಿದ ಅಧ್ಯಾಯ ಎಂದಿರುವ ಡಿಪ್ಪಿ. ಸದ್ಯ ಪತಿ ರಣವೀರ್ ಸಿಂಗ್ ಜೊತೆ ಹ್ಯಾಪಿ ಆಗಿದ್ದಾರೆ.

ಮತ್ತೊಂದೆಡೆ ಪ್ಲೇ ಬಾಯ್ ರಣಬೀರ್ ಕೂಡಾ ಅಲಿಯಾ ಭಟ್ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಮಾತು ಬಿ ಟೌನ್ ನಲ್ಲಿ ಸುಳಿದಾಡ್ತಿದೆ.