ನಟ ದರ್ಶನ್ ನನ್ನು ತುಂಬಾ ಪ್ರೀತಿಸುತ್ತೇನೆ, ಅಂದು ಅರೆಸ್ಟ್ ಆದಾಗ ಜೊತೆಯಲ್ಲಿದ್ದಿದ್ದು ಮರೆತು ಹೋಯ್ತಾ : ಜಗ್ಗೇಶ್

ನಟ ದರ್ಶನ್ ನನ್ನು ನಾನು ತುಂಬಾ ಪ್ರೀತಿಸುತ್ತೇನೆ. ಮುಂದೆಯೂ ಪ್ರೀತಿಸುತ್ತೇನೆ. ಅವನು ಕನ್ನಡದ ಹುಡುಗ. ಕಷ್ಟ ಕಾಲದಲ್ಲಿ ನಾನು ಜೊತೆಯಾಗಿದ್ದೀದ್ದು ನೆನಪೇ ಹೋಯ್ತಾ. ನನ್ನನ್ನು ಕರೆದು ಮಾತನಾಡೋದಕ್ಕೆ ಆಗಲಿಲ್ವಾ ಎಂದು ನಟ ಜಗ್ಗೇಶ್ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರೋಯಿನ್ ಮನೆಯಲ್ಲಿ ಸಣ್ಣ ವಿಚಾರಕ್ಕೆ ಪೊಲೀಸರು ದರ್ಶನ್ ನನ್ನು ಕಾಲಿಗೆ ಚಪ್ಪಲಿಯನ್ನೂ ಹಾಕೋದಕ್ಕೆ ಬಿಡದೆ ಅರೆಸ್ಟ್ ಮಾಡಿದಾಗ ಯಾರೂ ಜೊತೆಯಲ್ಲಿ ಇರಲಿಲ್ಲ. ಅಂದು ಜೊತೆಯಲ್ಲಿದ್ದಿದ್ದು ನಾನು ಮತ್ತು ಸಾರಾ ಗೋವಿಂದ್ ಮಾತ್ರ. ದರ್ಶನ್ ವಿಚಾರವಾಗಿ ನಾನು ಪೊಲೀಸರ ಬಳಿ ಕೂಗಾಡಿದ್ದೆ. ಗೃಹ ಸಚಿವರ ಜಗಳವಾಡಿದ್ದೆ. ಆಗ ಯಾರೂ ಇರಲಿಲ್ಲ. ಅವನು ಇಂದು ನೆನಪಿಡಬೇಕಿತ್ತು. ಅ ಪ್ರೀತಿ ದರ್ಶನ್ ಗೆ ನೆನಪು ಬರಲೇ ಇಲ್ವಾ ಎಂದಿದ್ದಾರೆ.

ದರ್ಶನ್ ನನ್ನು ಕನ್ನಡದ ರಜನಿಕಾಂತ್, ಸಲ್ಮಾನ್ ಖಾನ್ ಅಂತೆಲ್ಲಾ ಕೊಂಡಾಡಿದ್ದೆ. 100 ಕೋಟಿ ಬ್ಯುಸಿನೆಸ್ ಕೊಡ್ತಾನೆ ಅಂತಾ ಹಾಡಿ ಹೊಗಳಿದ್ದೆ. ಅದು ನೆನಪಿಗೆ ಬರಲಿಲ್ಲವೇ ? ದರ್ಶನ್ ನನ್ನನ್ನು ಕರೆದು ಮಾತನಾಡಬಹುದಿತ್ತು. ಇಂದು ತಂದೆ ತಾಯಿಯನ್ನೇ ನೋಡಿಕೊಳ್ಳದ ಸಮಾಜ. ಹಾಗಿರುವಾಗ ದೊಡ್ಡವರು ಚಿಕ್ಕವರು ಅಂತಾ ಯಾರೂ ನೊಡ್ತಾರೆ. ನನ್ನ ಉದ್ದೇಶ ಜಗಳವಾಡೋದಲ್ಲ ಎಂದರು.

ಸ್ನೇಹಿತರೊಬ್ಬರು ಹೇಳಿದ್ರು, ಜಗ್ಗೇಶ್ ಹಳೆಯ ಕಾಲದ ಚಿನ್ನ. ಅದನ್ನು ಡಬ್ಬದಲ್ಲಿ ಹಾಕಿ ಇಟ್ಟಿದ್ದರು. ಇದೀಗ ದರ್ಶನ್ ಅಭಿಮಾನಿಗಳು ಅದನ್ನು ತೆಗೆದು ಪಾಲಿಶ್ ಮಾಡಿ ತೋರಿಸಿದ್ರು. ಯಾವುದೇ ಕಾರಣಕ್ಕೂ ನಾನು ಅನ್ನ ಬೇಡಿ. ಯಾವುದೂ ಶಾಶ್ವತವಲ್ಲ. ಕಡೆಯ ವರೆಗೆ ಬರೋದು ನಿಮ್ಮ ಗುಣ ಮಾತ್ರ. ಅಂದು ನನ್ನೊಂದಿಗೆ ಬಂದು ಮಾತನಾಡಿದ ಹುಡುಗರು ದರ್ಶನ್ ಜೊತೆಯಲ್ಲಿಯೇ ಇರುವವರು. ತಾಳ್ಮೆಯಿಂದ ಮಾತನಾಡಬಹುದಿತ್ತು. ಕೆಲ ಮಾಧ್ಯಮಗಳು ಕೂಡ ಅದನ್ನು ದೊಡ್ಡದು ಮಾಡಿದವು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Comments are closed.