Bayaluseeme Movie : ಜವಾರಿ ಭಾಷೆಯ ಬಯಲುಸೀಮೆ ಸಿನಿಮಾ ಅಗಸ್ಟ್‌ 18ಕ್ಕೆ ರಿಲೀಸ್‌ : ಟ್ರೈಲರ್‌ ರಿಲೀಸ್‌ ಮಾಡಿದ ಅಭಿಷೇಕ್‌ ಅಂಬರೀಷ್‌

ಉತ್ತರ ಕರ್ನಾಟಕ ಶೈಲಿಯ ರಗಡ್ ಕಥೆ ಇರುವ ‘ಬಯಲುಸೀಮೆ’ ಸಿನಿಮಾದ (Bayaluseeme Movie) ಟ್ರೇಲರ್ ಬಿಡುಗಡೆಯಾಗಿದೆ. ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಟ್ರೇಲರ್ ಅನಾವರಣ ಮಾಡಿ ಸಿನಿತಂಡಕ್ಕೆ ಶುಭಾಶಯ ಕೋರಿದ್ದಾರೆ. 2 ನಿಮಿಷ 50 ಸೆಕೆಂಡ್ ಇರುವ ಟ್ರೇಲರ್ ಭಾರೀ ನಿರೀಕ್ಷೆ ಹೆಚ್ಚಿಸಿದೆ. ರೋಚಕ ತಿರುವುಗಳು, ಜವಾರಿ ಭಾಷೆಯ ಸಂಭಾಷಣೆ, ರಾಜಕೀಯ ಮೇಲಾಟದ ಸುತ್ತ ಕಥೆ ಸಾಗುತ್ತದೆ. ಈಗಾಗಲೇ ಹಾಡುಗಳ ಮೂಲಕ ಗಮನಸೆಳೆದಿರುವ ಬಯಲುಸೀಮೆ ಸಿನಿಬಳಗ ಟ್ರೇಲರ್ ಬಿಟ್ಟು ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

ವರುಣ್ ಕಟ್ಟಿಮನಿ ಸಿನಿಮಾಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು, ಸಂಯುಕ್ತ ಹೊರನಾಡು ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ನಟ ಆರ್ಮುಗಂ ರವಿಶಂಕರ್, ಖ್ಯಾತ ನಿರ್ದೇಶಕ ಟಿ.ಎಸ್ ನಾಗಾಭರಣ, ಯಶ್ ಶೆಟ್ಟಿ, ಭವಾನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಲಕ್ಷ್ಮೀ ನಾಡ ಗೌಡರ್, ಸಂತೋಷ್ ಉಪ್ಪಿನ್, ನಾಗರಾಜ ಭಟ್, ಮಹೇಶ್ ದೊಡ್ಡಕಲ್ನವರ್, ಪ್ರದೀಪ್ ರಾಜ್ ಸೇರಿದಂತೆ ಖ್ಯಾತ ಕಲಾವಿದರು ನಟಿಸಿದ್ದಾರೆ.

ಇದನ್ನೂ ಓದಿ : Shivarajkumar : ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಿ ಆಯ್ಕೆಗೊಂಡ ನಟ ಶಿವ ರಾಜ್‌ಕುಮಾರ್‌

ಇದನ್ನೂ ಓದಿ : Soujanya case : ಸೌಜನ್ಯ ಪ್ರಕರಣಕ್ಕೆ “ಭೀಮಬಲ”: ಧರ್ಮಸ್ಥಳಕ್ಕೆ‌ ಹೋಗಲ್ಲ ಎಂದ ದುನಿಯಾ ವಿಜಿ

ಉತ್ತರ ಕರ್ನಾಟಕ ಭಾಷೆಯ ಬಯಲುಸೀಮೆ ಸಿನಿಮಾ ಇದೇ 18ಕ್ಕೆ ತೆರೆಗೆ ಬರಲಿದೆ. ಗಾಯಿತ್ರಿ ದೇವಿ ಕ್ರಿಯೇಷನ್ಸ್ ಮತ್ತು ಪಿ ಆರ್ ಎಸ್ ಕ್ರಿಯೇಷನ್ಸ್ ಬ್ಯಾನರ್ ನಡಿ ಲಕ್ಷ್ಮಣ್ ಸಾ ಶಿಂಗ್ರಿ, ಶ್ರೀಧರ್ ಬಿದರಳ್ಳಿ, ರಶ್ಮೀ ವರುಣ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾವನ್ನು ಮುಂಬೈ, ಗಜೇಂದ್ರಗಡ, ಬೀಳಗಿ ಮುಂತಾದ ಕಡೆ ಶೂಟಿಂಗ್‌ ಮಾಡಲಾಗಿದ್ದು, ಸುಜಯ್ ಕುಮಾರ್ ಬಾವಿಕಟ್ಟಿ ಕ್ಯಾಮೆರಾವರ್ಕ್, ಮಾನಸಾ ಹೊಳ್ಳ ಸಂಗೀತ ನಿರ್ದೇಶನ, ಕಿರಣ್ ಕುಮಾರ್ ಸಂಕಲನ ಸಿನಿಮಾಕ್ಕಿದೆ.

Javari Language Bayaluseeme Movie Releasing On August 18 : Trailer Released By Abhishek Ambarish

Comments are closed.