ವಿಶೇಷ ರಕ್ಷಾಬಂಧನ ಆಚರಿಸಿದ ಪಾರು ನಟಿ ಮೋಕ್ಷಿತಾ ಪೈ : ಪಾರು ಸಂಭ್ರಮಕ್ಕೆ ಅಭಿಮಾನಿಗಳ ಮೆಚ್ಚುಗೆ

ಮಂಗಳೂರು ಮೂಲದ ಮೋಕ್ಷಿತಾ ಪೈ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಮೋಕ್ಷಿತಾಗೆ ವಿಶೇಷ ಚೇತನ ಸಹೋದರನಿದ್ದಾನೆ. ಅಂದಾಜು 16-17 ವರ್ಷದ ಸಹೋದರನಿಗೆ ಬುದ್ಧಿ ಬೆಳವಣಿಗೆ ಆಗಿಲ್ಲ. ಇನ್ನು ಪುಟ್ಟ ಮಗುವಿನಂತೆ ಇರೋ ಆತನನ್ನು ಕುಟುಂಬಸ್ಥರೇ ಆರೈಕೆ ಮಾಡಬೇಕು. ಇದೀಗ ಮೋಕ್ಷಿತಾ ಪೈ ವಿಶೇಷ ರಕ್ಷಾಬಂಧನ ಆಚರಿಸಿದ್ದಾರೆ. Kannada Paaru Serial Actress Mokshita Pai Celebrates Special Rakshabandhan Celebration

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯಲ್ಲಿ ಮುದ್ದು ಮುದ್ದಾಗಿ ಮಿಂಚ್ತಿರೋ ಆ ನಟಿಮಣಿ ರಿಯಲ್ ಬದುಕಿನಲ್ಲಿ ಸದಾ ಕಾಡುವ ನೋವೊಂದಿದೆ. ಆದರೆ ಆ ನೋವಿನ ಕ್ಷಣಗಳನ್ನು , ಬೇಸರವನ್ನು ಅಭಿಮಾನಿಗಳಿಂದ ಮುಚ್ಚಿಡದೇ ಹೇಗಿದೇಯೋ ಹಾಗೇ ಬದುಕನ್ನು ತೆರೆದಿಟ್ಟು ಮೆಚ್ಚುಗೆ ಗಳಿಸಿದ್ದಾರೆ ಮುದ್ದು ಮುಖದ ನಟಿ ಪಾರು (Kannada Paaru Serila). ಹೌದು ರೀಲ್ ಲೈಫ್ ನಲ್ಲಿ ಒಲ್ಲದ ಸೊಸೆಯಾಗಿ ಅತ್ತೆಗೆ ಹೆದರಿ ನಡುಗುವಂತ ಪಾತ್ರದಲ್ಲಿ ಮಿಂಚ್ತಿರೋ ಪಾರು ಧಾರಾವಾಹಿ ಖ್ಯಾತಿಯ ನಟಿ ಮೋಕ್ಷಿತಾ ಪೈ ನಿಜ ಜೀವನ ಬಣ್ಣದ ಲೋಕದಷ್ಟು ಅಹ್ಲಾದಕರವಾಗಿಲ್ಲ. ಮೋಕ್ಷಿತಾಗೆ ವಿಶೇಷ ಚೇತನ ಸಹೋದರನಿದ್ದು, ಆತನ ಅನಾರೋಗ್ಯ ಕಂಡು ಪಾರು ( ಸದಾ ದುಃಖಿಸುತ್ತಲೇ ಇರುತ್ತಾರೆ. ಮೂಲತಃ ಮಂಗಳೂರು ಮೂಲದ ಮೋಕ್ಷಿತಾ ಪೈ (Actress Mokshita Pai) ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಮೋಕ್ಷಿತಾಗೆ ವಿಶೇಷ ಚೇತನ ಸಹೋದರನಿದ್ದಾನೆ. ಅಂದಾಜು 16-17 ವರ್ಷದ ಸಹೋದರನಿಗೆ ಬುದ್ಧಿ ಬೆಳವಣಿಗೆ ಆಗಿಲ್ಲ. ಇನ್ನು ಪುಟ್ಟ ಮಗುವಿನಂತೆ ಇರೋ ಆತನನ್ನು ಕುಟುಂಬಸ್ಥರೇ ಆರೈಕೆ ಮಾಡಬೇಕು.Kannada Paaru Serial Actress Mokshita Pai Celebrates Special Rakshabandhan Fans Love Paru Celebration

ಆದರೂ ನಟಿ ಮೋಕ್ಷಿತಾ ಪೈ ಕೊಂಚವೂ ಬೇಸರಿಸಿಕೊಳ್ಳದೇ ಸಹೋದರನಿಗೆ ನೆರವಾಗುತ್ತಾರೆ. ಮಾತ್ರವಲ್ಲ ಸಾಮಾನ್ಯವಾಗಿ ನಟ-ನಟಿಯರು ತಮ್ಮ ಕುಟುಂಬದ ಸದಸ್ಯರನ್ನು ಅಥವಾ ವಿಶೇಷ ಚೇತನರನ್ನು ಹೊರಜಗತ್ತಿಗೆ ತೋರಿಸಲು ಇಷ್ಟ ಪಡೋದಿಲ್ಲ. ಆದರೆ ನಟಿ ಮೋಕ್ಷಿತಾ ಮಾತ್ರ ಹಾಗಲ್ಲ. ಈಗಾಗಲೇ ಹಲವು ಇಂಟರವ್ಯೂಗಳಲ್ಲಿ ಮೋಕ್ಷಿತಾ ತನ್ನ ಸಹೋದರ ಪರಿಸ್ಥಿತಿ ಬಗ್ಗೆ ಹೇಳಿಕೊಂಡಿದ್ದಾರೆ. ಮಾತ್ರವಲ್ಲ ಈ ಭಾರಿ ಪಾರು ತಮ್ಮ ಬಿಡುವಿಲ್ಲದ ಬ್ಯುಸಿ ಶೆಡ್ಯೂಲ್ ನಡುವೆಯೂ ತಮ್ಮನೊಂದಿಗೆ ರಕ್ಷಾಬಂಧನ್ ಆಚರಿಸಿದ್ದು ವಿಡಿಯೋ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ :Prashanth Neel – Prabhas : ಕುಂದಾಪುರದ ಬಸ್ರೂರಿಗೆ ಬಂದಿಳಿದ ತೆಲುಗು ನಟ ಪ್ರಭಾಸ್‌, ನಿರ್ದೇಶಕ ಪ್ರಶಾಂತ್‌ ನೀಲ್‌

Kannada Paaru Serial Actress Mokshita Pai Celebrates Special Rakshabandhan Fans Love Paru Celebrationಪುಟ್ಟ ತಮ್ಮ ನಿಗೆ ಆರತಿ ಎತ್ತಿ, ಸಿಹಿ ತಿನ್ನಿಸಿ ರಾಖಿ ಕಟ್ಟಿದ ಮೋಕ್ಷಿತಾ ಬಳಿಕ ತಮ್ಮನಿಂದ ಗಿಫ್ಟ್ ರೂಪದಲ್ಲಿ ಹಣ ಕೂಡ ವಸೂಲಿ ಮಾಡಿದ್ದಾರೆ. ಮೋಕ್ಷಿತಾ ಅಲಿಯಾಸ್ ಪಾರು ಶೇರ್ ಮಾಡಿದ ಈ ವೀಡಿಯೋ ಸಖತ್ ವೈರಲ್ ಆಗಿದ್ದು ಅಭಿಮಾನಿಗಳು ವೀಡಿಯೋ ನೋಡಿ ಮೆಚ್ಚಿಕೊಳ್ತಿದ್ದಾರೆ. ಮಾತ್ರವಲ್ಲ ಪಾರು ಸಿಂಪ್ಲಿಸಿಟಿಯನ್ನು ಶ್ಲಾಘಿಸಿದ್ದಾರೆ. ಇದನ್ನೂಓದಿ: Radhika Pandit – Yash : ಯಶ್ ಮನೆಯಲ್ಲಿ ಅದ್ದೂರಿ ಲಕ್ಷ್ಮೀಪೂಜೆ: ಲಕ್ಷ್ಮೀಯಂತೆ ಮಿಂಚಿದ ರಾಧಿಕಾ ಪಂಡಿತ್

Kannada Paaru Serial Actress Mokshita Pai Celebrates Special Rakshabandhan Fans Love Paru Celebration

ಶೇಷಾದ್ರಿಪುರಂ ಕಾಲೇಜಿನಲ್ಲಿ ಪದವಿ ಪಡೆದ ಮೋಕ್ಷಿತಾ ಮೊದಲು ಟ್ಯೂಶನ್ ಟೀಚರ್ ಆಗಿ ಕೆಲಸ ಮಾಡ್ತಿದ್ದರು. ಈ ಮಧ್ಯೆ ಸೋಷಿಯಲ್ ಮೀಡಿಯಾ ದಲ್ಲೂ ಆಕ್ಟಿವ್ ಆಗಿದ್ದ ಮೋಕ್ಷಿತಾಗೆ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ ವಿಡಿಯೋ, ಪೋಟೋಗಳಿಂದಲೇ ಧಾರಾವಾಹಿಗೆ ಅವಕಾಶ ಸಿಕ್ಕಿತ್ತು. ಸದ್ಯ ಕನ್ನಡ ಕಿರುತೆರೆಯಲ್ಲಿ ಮೋಕ್ಷಿತಾ ಪಾರು ಎಂಬ ಪಾಪದ ಸೊಸೆಯಾಗಿ ಅಖಿಲಾಂಡೇಶ್ವರಿ ಮೆಚ್ಚಿಸುವ ಪಾತ್ರದಲ್ಲಿ ಹೆಂಗಳೆಯರ ಮನಗೆದ್ದಿದ್ದಾರೆ.

Kannada Paaru Serial Actress Mokshita Pai Celebrates Special Rakshabandhan Fans Love Paru Celebration

Comments are closed.