ಸ್ಯಾಂಡಲ್‌ವುಡ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಕೀರ್ತಿ ‘ಕಾಂತಾರ’ ಸಿನಿಮಾಕ್ಕೆ ಸಲ್ಲುತ್ತದೆ. ನಟ ರಿಷಬ್ ಶೆಟ್ಟಿ ಅಭಿನಯನದ “ಕಾಂತಾರ” ಸಿನಿಮಾ ಬಿಡುಗಡೆಯಾದ ದಿನದಿಂದಲೇ ಥಿಯೇಟರ್‌ನಲ್ಲಿ ಸದ್ದು ಮಾಡಲು ಆರಂಭಿಸಿತ್ತು. ಅಲ್ಲಿಂದ ಇಲ್ಲಿವರೆಗೂ ಈ ಸಿನಿಮಾಗೆ ಹಿನ್ನೆಡೆಯಾಗಿದ್ದೇ ಇಲ್ಲ. ಒಂದು ಭಾಷೆಯಿಂದ ಆರಂಭ ಆದ ಯಶಸ್ಸಿನ ಯಾತ್ರೆ ಪ್ಯಾನ್ ಇಂಡಿಯಾವರೆಗೂ ಹಬ್ಬಿತ್ತು. ಕನ್ನಡ ಅಷ್ಟೇ ಅಲ್ಲ, ಹಿಂದಿ ಭಾಷೆಯಲ್ಲೂ ‘ಕಾಂತಾರ’ ಕಲೆಕ್ಷನ್ ಭರ್ಜರಿಯಾಗಿಯೇ ಇತ್ತು. ಇದೀಗ ಜಗತ್ತಿನಾದ್ಯಂತ ವಿಶ್ವ ಟಿವಿಯಲ್ಲಿ (Kantara On Sony MAX) ಬಿಡುಗಡೆಯಾಗಲು ಸಜ್ಜಾಗಿದ್ದು, ವಿಶ್ವ ಟಿವಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಹೌದು ಸೋನಿ ಮಾಕ್ಸ್ ಅಧಿಕೃತವಾಗಿ ತಮ್ಮ ಟ್ವೀಟರ್, ” ಮಿಸ್ ಡಿವೈನ್ ಮನರಂಜನೆಯ ನಿಮ್ಮ ಅಂತಿಮ ವೀಕ್ಷಣೆ ಏನು? ಪ್ರೇರಣೆ? ಕಾಮೆಂಟ್‌ಗಳಲ್ಲಿ ಹಂಚಿಕೊಳ್ಳಿ! ಮತ್ತು ಕಾಂತಾರ ವಿಶ್ವ ಟಿವಿ ಬಿಡುಗಡೆಯನ್ನು ಮಾರ್ಚ್ 19, ಸನ್ 8 ಗಂಟೆಗೆ ವೀಕ್ಷಿಸಲು ಮರೆಯಬೇಡಿ” ಎಂದು ಪೋಸ್ಟ್ ಮಾಡಿದ್ದಾರೆ.
Iss divine entertainer ko dekhne ka kya hai aapka ultimate motivation? Share in the comments!
— Sony MAX (@SonyMAX) March 16, 2023
And don’t forget to watch the #WorldTVRelease of #Kantara 19th March, SUN 8 PM, only on #SonyMAX.#AasthaHaiTohRaastaHai #KantaraOnSonyMAX #MoviePremiere #DeewanaBanaDe #Movies #Films pic.twitter.com/jD3NntYtlG
ಸ್ಯಾಂಡಲ್‌ವುಡ್‌ನ “ಕಾಂತಾರ” ಸಿನಿಮಾ ಈಗಾಗಲೇ ಸಿನಿಮಂದಿರಗಳಲ್ಲಿ ಸಾಕಷ್ಟು ದಾಖಲೆಗಳನ್ನು ಸೃಷ್ಟಿಸಿದೆ. (Kantara Hindi OTT)ಅದರ ಜೊತೆಯಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಓಟಿಟಿಗೂ ಲಗ್ಗೆ ಇಟ್ಟಿದ್ದು ಸಖತ್ ಸದ್ದು ಮಾಡಿದೆ. ಆದರೂ ಕೂಡ ಸಿನಿಮಾ ಮಂದಿರಗಳಲ್ಲಿ ಕಾಡಬೆಟ್ಟು ಶಿವನ ಆರ್ಭಟ ಮುಂದುವರೆದಿದೆ. ಇದೀಗ “ಕಾಂತಾರ” ಹಿಂದಿ ನೆಟ್‌ಫ್ಲಿಕ್ಸ್ ಸ್ಟ್ರೀಮಿಂಗ್ ಆಗುವ ಸಮಯ ಹತ್ತಿರ ಬಂದಿದೆ.
“ಕಾಂತಾರ” ಸಿನಿಮಾ ಸೆಪ್ಟೆಂಬರ್ 30ರಂದು ಬಿಡುಗಡೆ ಆಗಿದ್ದು, ರೂ.400 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್‌ಆಫೀಸ್ ಕಲೆಕ್ಷನ್‌ನಲ್ಲಿ ಧೂಳೆಬ್ಬಿಸಿದೆ. ಬಿಡುಗಡೆಯಾದ ಎರಡು ವಾರಗಳ ನಂತರ ಬೇರೆ ಭಾಷೆಗಳಿಗೂ ಡಬ್ ಆಗಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾ ಹಿಂದಿಗೆ ಡಬ್ ಆಗಿ ಅದ್ಭುತ ಯಶಸ್ಸನ್ನು ಕಂಡಿತ್ತು. “ಕಾಂತಾರ” ಬಾಲಿವುಡ್‌ನಲ್ಲಿ ೫೦ ದಿನ ಪೂರೈಸಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇದೀಗ ಈ ಸಿನಿಮಾವನ್ನು ವಿಶ್ವದಾದ್ಯಂತ ಕಾಣುವಂತೆ ಮಾಡುವ ಪ್ರಯತ್ನ ಶುರುವಾಗಿದೆ.
“ಕಾಂತಾರ” ಸಿನಿಮಾ ಹಿಂದಿಗ ಡಬ್ ಆಗಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಬಿಟೌನ್ ಸೂಪರ್ ಸ್ಟಾರ್‌ಗಳ ಸಿನಿಮಾಗಳಿಗೂ ಪೈಪೋಟಿ ನೀಡಿ ಸಿನಿಮಾ ಬಾಕ್ಸ್ ಆಫೀಸ್ ಶೇಕ್ ಮಾಡಿತ್ತು. ಸಿನಿಮಾ ನೋಡಿದ ಪ್ರತಿಯೊಬ್ಬರು ಸಿನಿತಂಡದ ಶ್ರಮಕ್ಕೆ ಬಹುಪರಾಕ್ ಹೇಳಿದ್ದಾರೆ. ಈಗಾಗಲೇ “ಕಾಂತಾರ” ನಾಲ್ಕು ಭಾಷೆಗಳಲ್ಲಿ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗಿರುತ್ತದೆ. ಆದರೆ ಹಿಂದಿಯಲ್ಲಿ ಡಿಸೆಂಬರ್ 9ಕ್ಕೆ ನೆಟ್‌ಫ್ಲಿಕ್ಸ್‌ಗೆ ಸ್ಟ್ರೀಮಿಂಗ್ ಆಗಲಿದೆ. ಹಿಂದಿಗೆ ಡಬ್ ಆಗಿ ನೆಟ್‌ಫ್ಲಿಕ್ಸ್ ಲಗ್ಗೆ ಕೊಡುತ್ತಿರುವ ಮೊದಲ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ “ಕಾಂತಾರ” ಸಿನಿಮಾ ಪಾತ್ರವಾಗಿದೆ. ನೆಟ್‌ಫ್ಲಿಕ್ಸ್ ಮೂಲಕ ಪ್ರಪಂಚದ ಮೂಲೆ ಮೂಲೆಗೆ ಕರಾವಳಿ ಸೊಗಡು ತಲುಪಲಿದೆ.
ರಿಷಬ್ ಶೆಟ್ಟಿ, ಕಿಶೋರ್ ಮತ್ತು ಸಪ್ತಮಿ ಗೌಡ ಅಭಿನಯದ ಕಾಂತಾರ, ಕರ್ನಾಟಕ ಮತ್ತು ಜಗತ್ತಿನಾದ್ಯಂತ ಹಲವಾರು ದಾಖಲೆಗಳನ್ನು ಮುರಿದಿದ್ದಾರೆ. ಈ ಸಿನಿಮಾವು ಮನುಷ್ಯ ಮತ್ತು ಪ್ರಕೃತಿ ಸಂಘರ್ಷದ ಕುರಿತಾಗಿದೆ. ಮಾಧ್ಯಮದೊಂದಿಗೆ ನೀಡಿದ ಸಂದರ್ಶನದಲ್ಲಿ, ರಿಷಬ್ ಶೆಟ್ಟಿ ಹೀಗೆ ಹೇಳಿದ್ದರು. “ಮನುಷ್ಯ ಮತ್ತು ಪ್ರಕೃತಿ ಸಂಘರ್ಷ ಶಾಶ್ವತವಾಗಿ ಅಸ್ತಿತ್ವದಲ್ಲಿದೆ. ಅದೇ ಕಥೆಯನ್ನು ಜನಪದ ಕಥೆಯ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ.
ಇದನ್ನೂ ಓದಿ : ನಿರ್ದೇಶಕ ಪ್ರೇಮ್, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ “ಕೆಡಿ” ಸಿನಿಮಾಕ್ಕೆ ಸತ್ಯಾವತಿ ಎಂಟ್ರಿ
ಇದನ್ನೂ ಓದಿ : ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಸನ್ ಕಂಡ “ಕಬ್ಜ” ಸಿನಿಮಾ
ಕಥೆಯು ಹೆಚ್ಚು ಪ್ರಾದೇಶಿಕವಾಗಿದೆ. ಪರಿಕಲ್ಪನೆಯು ಹೆಚ್ಚು ಸಾರ್ವತ್ರಿಕವಾಗಿದೆ ಎಂದು ನಾನು ನಂಬುತ್ತೇನೆ. ಭಾರತದಾದ್ಯಂತ, ನೀವು ಅಂತಹ ಅನೇಕ ಕಥೆಗಳನ್ನು ಕಾಣಬಹುದು. ಹಾಗಾಗಿ, ಸ್ಥಳೀಯ ಭಾಷೆಯಲ್ಲಿದ್ದರೂ ಜನರು ಈ ಸಿನಿಮಾವನ್ನು ನೋಡಿದಾಗ ಅವರ ಬೇರುಗಳ ಕಥೆಗೆ ಸಂಪರ್ಕ ಹೊಂದಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಕಥೆಯು ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವುದರಿಂದ, ಇದು ಸಾರ್ವತ್ರಿಕ ಚಲನಚಿತ್ರವಾಗಿದೆ. ಇಂದು ಮಕ್ಕಳು ತಮ್ಮ ಬೇರುಗಳನ್ನು ಮರೆಯುತ್ತಿದ್ದಾರೆ ಮತ್ತು ಅಂತಹ ಸಿನಿಮಾಗಳು ಅವರನ್ನು ಮರುಸಂಪರ್ಕಿಸಲು ಸಹಾಯ ಮಾಡುತ್ತದೆ.
Kantara On Sony MAX : “Kantara” is set to entertain audiences on television worldwide.