Anita Bhat : ನಾನೇ ನೀನಗೀಗಾ ಎಂದ್ರು ನಟಿ ಅನಿತಾ ಭಟ್ : ಗಮನ ಸೆಳೆದಿದೆ ಇಂದಿರಾ ಹಾಡು

ಸಿನಿಮಾದ ಜೊತೆ ಜೊತೆಗೆ ಯೋಗ ಮೂಲಕವೂ ಗಮನ ಸೆಳೆದ ನಟಿ ಅನಿತಾ ಭಟ್ ( Anita Bhat) ಈಗ ನಟನೆಯ ಜೊತೆಗೆ ನಿರ್ಮಾಣ ಕ್ಕೂ ಮುಂದಾಗಿದ್ದಾರೆ. ಈಗ ಅನಿತಾ ನಿರ್ಮಾಣದ ಇಂದಿರಾ (Indira) ಸಿನಿಮಾದ ಎರಡನೇ ಹಾಡು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು ಗಮನ ಸೆಳೆಯುತ್ತಿದೆ. ನಾನೇ ನಿನಗೀಗ ಯಜಮಾನ ಎಂದು ಆರಂಭ ಆಗುವ ಹಾಡು ಕಚಗುಳಿ ಇಡೋ ಸಾಲುಗಳ ಮೂಲಕ ಪ್ರೇಮಿಗಳ ಮನ ಸೆಳೆಯುವಂತಿದೆ. ಸಿನಿಮಾ‌ ನಾಯಕಿ ಅನಿತಾ ಭಟ್ ಹಾಗೂ ನಟ ರೆಹಮಾನ್ ಹಾಸನ್ ನಟನೆಯೂ ಸುಂದರವಾಗಿ ಮೂಡಿಬಂದಿದ್ದು, ಛಾಯಾಗ್ರಹಣ ರಿಜಿಸ್ಟರ್ ಆಗುವಂತಿದೆ.

ಅನಿತಾ ಭಟ್ ಇದಕ್ಕೂ ಮುನ್ನ ಇಂದಿರಾ (Indira) ಸಿನಿಮಾದ ಇನ್ನೊಂದು ಟ್ರ್ಯಾಕ್ ಸ್ಟೆಪ್ಸ್ ಟು ಡೆಸ್ಟನಿ ಎಂಬ ಹಾಡು ಕೂಡ ಸಖತ್ ಟ್ರೆಂಡ್ ಸೃಷ್ಟಿಸಿತ್ತು. ಈ ಹಾಡು A2 ಮ್ಯೂಸಿಕ್ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿತ್ತು. ಇಂದಿರಾ ಸೈಕಾಲಾಜಿಕಲ್ ಥ್ರಿಲ್ಲರ್ ಸಿನಿಮಾವಾಗಿದ್ದು, ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಸಿದ್ಧವಾಗುತ್ತಿದೆ.

Naane ninageega Anita Bhat Indira Movie Song Release

ನಾನೇ ನಿನಗೀಗ ಯಜಮಾನ ಹಾಡು ಯೂಟ್ಯೂಬ್ ನಲ್ಲಿ ಸಖತ್ ವೀವ್ಸ್ ಪಡೆದುಕೊಳ್ಳುತ್ತಿದ್ದು, ಈ ಸುಮಧುರ ಹಾಡಿಗೆ ವೇದಾಂತ್ ಅತಿಶಯ್ ಜೈನ್ ಹಾಗೂ ರಶ್ಮಿ‌ಧರ್ಮೆಂದ್ರಾ ಧ್ವನಿಯಾಗಿದ್ದಾರೆ. ಇಂದಿರಾ ಸಿನಿಮಾಕ್ಕೆ ರಿಷಿಕೇಶ್ ಆಕ್ಷ್ಯನ್ ಕಟ್ ಹೇಳಿದ್ದು, ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

Naane ninageega Anita Bhat Indira Movie Song Release

ಅನಿತಾ ಭಟ್ ನಿರ್ಮಿಸುತ್ತಿರುವ ಇಂದಿರಾ ಸಿನಿಮಾಗೆ ನಟಿ ಅನಿತಾ ಭಟ್ ( Anita Bhat) ಜೊತೆ ನಿರ್ಮಾಪಕರಾಗಿ ಪ್ರಜ್ಞಾನಂದ ಸೊರಬ ಬಂಡವಾಳ ಹೂಡಿದ್ದಾರೆ. ಇಂದಿರಾ ಸಿನಿಮಾ ನಿರ್ಮಾಣದ ಜೊತೆಗೆ ಅನಿತಾ ನಾಯಕಿಯಾಗಿಯೂ ಮನತಟ್ಟುವ ಅನುಭವ ನೀಡಿದ್ದಾರೆ. ರೆಹಮಾನ್ ಹಾಸನ್, ಚಕ್ರವರ್ತಿ ಚಂದ್ರಚೂಡ್, ನೀತು ಹಾಗೂ ಶಫಿ ಬಣ್ಣ ಹಚ್ಚಿದ್ದಾರೆ.

ಈ ಹಿಂದೆ ಸಂಗೀತ ನಿರ್ದೇಶಕ ರಿಷಿಕೇಶ್ ಬರೆದು ಲೋಹಿತ್ ನಾಯ್ಕ್ ಸಂಗೀತ ನೀಡಿ ಸುಪ್ರಿಯಾ ರಾವ್ ಕಂಠದಲ್ಲಿ ಮೂಡಿಬಂದ ಸ್ಟೆಪ್ ಟು ಡೆಸ್ಟನಿ ಹಾಡು ಕೂಡ ಜನರನ್ನು ಸಖತ್ ಸೆಳೆದಿತ್ತು. ಹಾಗೇ ನೋಡಿದ್ರೇ ನಟಿ ಅನಿತಾ ಭಟ್ ಸ್ಯಾಂಡಲ್ ವುಡ್ ನಲ್ಲಿ ಸಖತ್ ಬೋಲ್ಡ್ ಪಾತ್ರಗಳ ಮೂಲಕ‌ವೂ ಮಿಂಚಿದ್ದಾರೆ , ಟಗರು ಸಿನಿಮಾ ಅವರಿಗೆ ಸಾಕಷ್ಟು ಮೆಚ್ಚುಗೆ ಹಾಗೂ ಅಭಿಮಾನಿಗಳು ಸಿಕ್ಕಿದ್ದರು.

ಈಗ ಮತ್ತೊಮ್ಮೆ ಅನಿತಾ ಭಟ್ ತೆರೆ ಮೇಲೆ‌ ಮೋಡಿ ಮಾಡಲು ಸಿದ್ಧವಾಗಿದ್ದಾರೆ. ಇಂದಿರಾ ಸಿನಿಮಾದ ಮೂಲಕ ಮಲೆನಾಡ ಬೆಡಗಿ ಅನಿತಾ ಭಟ್‌ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಸಖತ್‌ ಇಷ್ಟವಾಗದೇ ಇರೋದಕ್ಕೆ ಸಾಧ್ಯವೇ ಇಲ್ಲ. ಸಿನಿಮಾ ನಿರ್ಮಾಣದ ಕನಸು ಹೊತ್ತು ನಿರ್ಮಾಪಕರಾಗಿರುವ ಅನಿತಾ ಭಟ್‌ ಸ್ಯಾಂಡಲ್‌ವುಡ್‌ ವಿಭಿನ್ನ ಸಿನಿಮಾವೊಂದನ್ನು ನೀಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ :‌ ನಿರ್ಮಾಪಕಿಯಾದ್ರು ನಟಿ ಅನಿತಾ ಭಟ್‌ : ‘ಸಮುದ್ರಂ’ ಗೆ ಸಾಥ್‌ ಕೊಟ್ಟ ಶ್ರೀ ಮುರುಳಿ

ಇದನ್ನೂ ಓದಿ : ಅನಿತಾ ಭಟ್‌ ಇಂದಿರಾಗೆ ಜೊತೆಯಾದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌

( Naane ninageega Anita Bhat Indira Movie Song Release)

Comments are closed.