ಸ್ಯಾಂಡಲ್ವುಡ್ ಕಂಡ ಅದ್ಭುತ ಮಾಣಿಕ್ಯ ಎಂದರೆ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್. ಕನ್ನಡ ಸಿನಿರಂಗದಲ್ಲಿ ಮಿಂಚಿ ಮರೆಯಾದ ಮಾಣಿಕ್ಯ ನಟ ಪುನೀತ್ ರಾಜ್ಕುಮಾರ್ ಅಭಿನಯದ “ರಾಜಕುಮಾರ” ಸಿನಿಮಾ (Rajkumar movie) ತೆರೆಕಂಡು ಆರು ವರ್ಷಗಳ ಸಂಭ್ರಮ. ನಗುಮೊಗದ ರಾಜಕುಮಾರ, ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲ ಅಗಲಿ 1 ವರ್ಷ ಕಳೆದಿದೆ. ಅಭಿಮಾನಿಗಳು, ಕುಟುಂಬದವರು ಅಪ್ಪು ಅವರನ್ನು ನೆನೆಯದ ದಿನವೇ ಇಲ್ಲ. ಅವರ ಮಾತು, ನಗು, ಸಿನಿಮಾ ಡೈಲಾಗ್, ಡ್ಯಾನ್ಸ್, ಸರಳತೆ ಎಲ್ಲವೂ ಪದೇ ಪದೆ ನೆನಪಾಗುತ್ತಿದೆ. ಇದೀಗ ಅಪ್ಪು ಅಭಿನಯದ “ರಾಜಕುಮಾರ” ಸಿನಿಮಾ ತೆರೆಕಂಡು ಆರು ವರ್ಷ ಆಗಿದ್ದು, ಈ ಖುಷಿಯನ್ನು ಹೊಂಬಾಳೆ ಫಿಲ್ಮ್ಸ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯವರು ತಮ್ಮ ಟ್ವೀಟರ್ನಲ್ಲಿ, “ಇಂದು ಮತ್ತು ಎಂದೆಂದಿಗೂ ರಾಜಕುಮಾರರ 6 ವರ್ಷಗಳ ಸಂಭ್ರಮ! ” ಎಂದು ಪೋಸ್ಟ್ ಮಾಡಿದ್ದಾರೆ. 2017 ರಲ್ಲಿ ತೆರೆ ಕಂಡ ‘ರಾಜಕುಮಾರ’ ಸಿನಿಮಾವನ್ನು ಸಂತೋಷ್ ಆನಂದ್ ರಾಮ್ ಕಥೆ ಬರೆದು ನಿರ್ದೇಶನ ನೀಡಿದ್ದಾರೆ. ವಿಜಯ್ ಕಿರಗಂದೂರು ಹೊಂಬಾಳೆ ಫಿಲ್ಸ್ಮ್ ಬ್ಯಾನರ್ನಡಿಯಲ್ಲಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ವಿ. ಹರಿಕೃಷ್ಣ ಅದ್ಭುತ ಸಂಗೀತ ನಿರ್ದೇಶನ ನೀಡಿದ್ದಾರೆ.
Celebrating 6 years of #Raajakumara today and forever!💕#6yearsForIndustryHitRaajakumara #AppuSirLivesOn @PuneethRajkumar @SanthoshAnand15 #VijayKiragandur @hombalefilms @harimonium@PriyaAnand pic.twitter.com/ld0WNdmPLR
— Hombale Films (@hombalefilms) March 24, 2023
ಈ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಅನಂತ್ ನಾಗ್, ಶರತ್ ಕುಮಾರ್, ಪ್ರಕಾಶ್ ರಾಜ್, ಚಿಕ್ಕಣ್ಣ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಹೊನ್ನವಳ್ಳಿ ಕೃಷ್ಣ, ವಿಜಯಲಕ್ಷ್ಮಿ ಸಿಂಗ್, ರಂಗಾಯಣ ರಘು, ಅವಿನಾಶ್, ದತ್ತಾತ್ರೇಯ ಸೇರಿದಂತೆ ಬಹು ತಾರಾಗಣ ಈ ಸಿನಿಮಾಕ್ಕಿದೆ. ಈ ಸಿನಿಮಾವನ್ನು ಜಯಣ್ಣ ಫಿಲ್ಮ್ಸ್ ಹಂಚಿಕೆ ಮಾಡಿದ್ದಾರೆ. ಈ ಸಿನಿಮಾದ ಎಲ್ಲಾ ಹಾಡುಗಳು ಬಹಳ ಫೇಮಸ್, ಅದರಲ್ಲೂ ಅಪ್ಪು ಡ್ಯಾನ್ಸ್… ಹಾಗೂ ಬೊಂಬೆ ಹೇಳುತೈತೆ.. ಎಲ್ಲರ ಮೆಚ್ಚಿನ ಹಾಡುಗಳಾಗಿವೆ.
ಇದನ್ನೂ ಓದಿ : Matte Maduve First look release : ನರೇಶ್ ಪವಿತ್ರಾ ಲೋಕೇಶ್ ಜೋಡಿಯ ‘ಮತ್ತೆ ಮದುವೆ’ ಚಿತ್ರದ ಫಸ್ಟ್ ಲುಕ್ ರಿಲೀಸ್
ಇದನ್ನೂ ಓದಿ : Kannadati Iti Acharya: ಅಮೇರಿಕನ್ ಮ್ಯೂಸಿಕ್ ವೀಡಿಯೋದಲ್ಲಿ ಕನ್ನಡತಿ ಇತಿ ಆಚಾರ್ಯ ಮಿಂಚು
ಸ್ಯಾಂಡಲ್ವುಡ್ನಲ್ಲಿ ‘ರಾಜಕುಮಾರ’ ಸಿನಿಮಾ ಮೊದಲ ಬಾರಿಗೆ 75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ ಮೈಸೂರಿನ ನಾಲ್ಕು ಕೇಂದ್ರಗಳಲ್ಲಿ ನೂರು ದಿನಗಳನ್ನು ಪೂರೈಸಿದ ಮೊದಲ ಸಿನಿಮಾ ಎಂಬ ದಾಖಲೆ ಬರೆದಿದೆ. ‘ಕಸ್ತೂರಿ ನಿವಾಸ’ ಸಿನಿಮಾದಲ್ಲಿ ಡಾ. ರಾಜ್ಕುಮಾರ್ ಅವರ ಭುಜದ ಮೇಲೆ ಬಿಳಿಯ ಪಾರಿವಾಳ ಕುಳಿತುಕೊಳ್ಳುವಂತೆ ‘ರಾಜಕುಮಾರ’ ಸಿನಿಮಾದಲ್ಲೂ ಅದೇ ದೃಶ್ಯವನ್ನು ರೀ ಕ್ರಿಯೇಟ್ ಮಾಡಲಾಗಿದೆ. ಈ ದೃಶ್ಯವನ್ನಂತೂ ಮಾತಿನಿಂದ ವರ್ಣಿಸಲು ಸಾಧ್ಯವೇ ಇಲ್ಲ. ಈ ಫೋಟೋ ಎಲ್ಲರಿಗೂ ಬಹಳ ಇಷ್ಟ. ಎಷ್ಟೆಂದರೆ, ಬಹುತೇಕ ಕಾರ್ಯಕ್ರಮಗಳಲ್ಲಿ ಇದೇ ಫೋಟೋವನ್ನು ಹೆಚ್ಚಾಗಿ ಬಳಸಲಾಗುತ್ತಿದೆ.
Rajkumar movie : In celebration of the 6th year of Dr. Puneeth Rajkumar Starrer “Rajkumar”