Raktaksh movie : ರಕ್ತಾಕ್ಷ ಮಾಸ್ ಟೀಸರ್ ರಿಲೀಸ್, ಪ್ರಮೋದ್-ರೋಹಿತ್ ಭರ್ಜರಿ ಆಕ್ಷನ್ : ಭರವಸೆ ಮೂಡಿಸಿದ ಯುವ ಪ್ರತಿಭೆಗಳ ಚೊಚ್ಚಲ ಪ್ರಯತ್ನ

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ರಕ್ತಾಕ್ಷ್‌ ಸಿನಿಮಾ (Raktaksh movie) ಸದ್ದು ಮಾಡುತ್ತಿದೆ. ಯುವಪ್ರತಿಭೆಗಳ ಹೊಸ ಸಿನಿಮಾ ರಕ್ತಾಕ್ಷ ಸಿನಿಮಾದ ಆಕ್ಷನ್ ಟೀಸರ್ ರಿಲೀಸ್ ಆಗಿದೆ. ಪಂಚಿಂಗ್ ಡೈಲಾಗ್ ಹೊಡೆಯುತ್ತಾ ನಾಯಕ ರೋಹಿತ್ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಸಿಕ್ಸ್ ಪ್ಯಾಕ್ ಲುಕ್ ನಲ್ಲಿ ರಗಡ್ ಆಗಿ ಅಬ್ಬರಿಸಿರುವ ಅವರು ಪ್ರಮೋದ್ ಶೆಟ್ಟಿ ಎದುರು ತೊಡೆ ತಟ್ಟಿ ಅಬ್ಬರಿಸಿದ್ದಾರೆ‌. ಕಿಲ್ಲಿಂಗ್ ಲುಕ್ ಮೂಲಕವೇ ಗಮನಸೆಳೆದಿರುವ ರೋಹಿತ್ ಕನ್ನಡ ಚಿತ್ರರಂಗದ ಭರವಸೆ ನಾಯಕ ಎನಿಸಿಕೊಂಡಿದ್ದಾರೆ. ಟೀಸರ್ ಪ್ರಾಮಿಸಿಂಗ್ ಎನಿಸಿದ್ದು, ಧೀರೇಂದ್ರ ಡಾಸ್ ಸಂಗೀತ ಸಖತ್ ಕಿಕ್ ಕೊಡುತ್ತಿದೆ.

ಮಾಡೆಲಿಂಗ್ ಲೋಕದಲ್ಲಿ ಛಾಪು ಮೂಡಿಸಿರುವ ರೋಹಿತ್ ರಕ್ತಾಕ್ಷ ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ನಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ರಕ್ತಾಕ್ಷ ಸಿನಿಮಾವನ್ನು ವಾಸುದೇವ ಎಸ್.ಎನ್ ನಿರ್ದೇಶನ ಮಾಡುತ್ತಿದ್ದಾರೆ. ಅಂದ್ಹಾಗೆ ವಾಸುದೇವ್ ಆಕ್ಷನ್ ಕಟ್ ಹೇಳುತ್ತಿರುವ ಚೊಚ್ಚಲ ಸಿನಿಮಾವಿದು. ರೋಹಿತ್ ಜೊತೆ ಒಂದಷ್ಟು ಉತ್ಸಾಹಿ ಪ್ರತಿಭೆಗಳು ಸೇರಿ ‘ರಕ್ತಾಕ್ಷ’ ಸಿನಿಮಾಗೆ ದುಡಿದಿದ್ದಾರೆ.

ಇದನ್ನೂ ಓದಿ : Rashmika Mandanna : ತಮಿಳು ಖ್ಯಾತ ನಟ ಧನುಷ್‌ ಗೆ ಜೋಡಿ ಆಗ್ತಾರಾ ನಟಿ ರಶ್ಮಿಕಾ ಮಂದಣ್ಣ

ಇದನ್ನೂ ಓದಿ : Story of Saujanya movie : ಸ್ಟೋರಿ ಆಫ್ ಸೌಜನ್ಯ, ತೆರೆಗೆ ಬರಲಿಗೆ ಧರ್ಮಸ್ಥಳ ಸೌಜನ್ಯ ಸಾವಿನ ಸ್ಟೋರಿ

ಚಿತ್ರಕ್ಕೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದ್ರ ಡಾಸ್ ಸಂಗೀತ ನೀಡಿದ್ದಾರೆ. ಕೆಜಿಎಫ್ ನಟಿಸಿರುವ ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್, ಪ್ರಭು, ವಿಶ್ವ, ಭದ್ರಿ ನಾರಾಯಣ, ಗುರುದೇವ ನಾಗರಾಜ, ಬಸವರಾಜ ಆದಾಪುರ ನಟಿಸಿದ್ದಾರೆ. ಖಳನಾಯಕ ಪಾತ್ರದಲ್ಲಿ ನಟ ಪ್ರಮೋದಶೆಟ್ಟಿ ಅಭಿನಯಿಸಿದ್ದಾರೆ. ಈಗಾಗಲೇ ವಸಿಷ್ಠ ಸಿಂಹ ಅವರು ಹಾಡಿರುವ ರಕ್ತಾಕ್ಷ ಟೈಟಲ್ ಟ್ರ್ಯಾಕ್ ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಸದ್ಯ ಟೀಸರ್ ಮೂಲಕ ರಕ್ತಾಕ್ಷ ಸಿನಿಮಾ ನಿರೀಕ್ಷೆ ದುಪ್ಪಟ್ಟು ಮಾಡಿದೆ.‌‌

Raktaksh Movie : Raktaksh Mass Teaser Release, Pramod-Rohit Wonderful Action : Debut of promising young talent

Comments are closed.