Toofan Song : ಇದು ರಾಖಿ ಬಾಯ್ ಯಶ್‌ ತೂಫಾನ್ : ರಿಲೀಸ್‌ ಆಯ್ತು ಕೆಜಿಎಫ್-2 ಹಾಡು

ಬಿಡುಗಡೆಗೂ ಮುನ್ನವೇ ತನ್ನ ಬಿಲ್ಡಪ್ ಗಳಿಂದ ಅಭಿಮಾನಿಗಳನ್ನು ತುದಿಗಾಲಲ್ಲಿ ಕೂರಿಸಿರೋ ಸಿನಿಮಾ ಕೆಜಿಎಫ್-2 ಈಗ ರಿಲೀಸ್ ಗೆ ಸಿದ್ಧವಾಗಿದೆ. ರಿಲೀಸ್ ದಿನಗಣನೆ ನಡೆದಿರುವಾಗಲೇ ಈ ಪ್ಯಾನ್ ಇಂಡಿಯಾ ಸಿನಿಮಾ‌  ಕೆಜಿಎಫ್ 2 (KGF Chapter 2 ). ಚಿತ್ರದ ಮೊದಲ ರಿಲಿಕಲ್ (Toofan Song) ವಿಡಿಯೋ ಸಾಂಗ್ ಲಾಂಚ್ ಆಗಿದ್ದು, ಗಂಟೆಗಳಲ್ಲೇ ಲಕ್ಷಾಂತರ ವೀವ್ಸ್ ಪಡೆದು ದಾಖಲೆಯತ್ತ ಮುನ್ನುಗ್ಗುತ್ತಿದೆ.

Rocking Star Yash Starrer Kgf Chapter 2 First Lyrical Toofan Song Released

ರಾಕ್ ರಾಕ್ ರಾಕಿ, ತು ಕ್ಯಾ ಮೈ ಕ್ಯಾ ಹಟ್ ಜಾ ಆಯಾ ತೂಫಾನ್ ಎಂಬ ಕಿಕ್ ಏರಿಸುವ ಸಾಲುಗಳ ಜೊತೆ ಹಾಡು ಸಖತ್ ಕಿಕ್ಕೇರಿಸುವಂತಿದ್ದು, ಹಿಂದಿ, ಇಂಗ್ಲೀಷ್, ಕನ್ನಡ, ತೆಲುಗು ತಮಿಳು ಹೀಗೆ ಎಲ್ಲ ಭಾಷೆಯಲ್ಲೂ ಏಕಕಾಲಕ್ಕೆ ತೂಫಾನ್ ಲಿರಿಕಲ್ ವಿಡಿಯೋ ಲಾಂಚ್ ಆಗಿದೆ. ಚಿನ್ನದ ಗಣಿಯ ಹಿನ್ನೆಲೆಯಲ್ಲೇ ಸಾಹಿತ್ಯ ಸಾಗುತ್ತಿದ್ದು ಯಶ್ ರನ್ನು ವೈಭವಿಕರಿಸುವ ಹೀರೋ ಓರಿಯೆಂಟೆಡ್ ಹಾಡಿನ ಸಾಲಿನಲ್ಲಿ ತೂಫಾನ್ ಹೊಸ ಅಲೆ ಎಬ್ಬಿಸಿದೆ.

Rocking Star Yash Starrer Kgf Chapter 2 First Lyrical Toofan Song Released

ಕೆಜಿಎಫ್ ಸಂಗೀತ ನಿರ್ದೇಶಕ ರವಿ‌ಬಸ್ರೂರ್ ಈ ಸಿನಿಮಾಕ್ಕೂ ಸಂಗೀತ ನೀಡಿದ್ದಾರೆ. ಕೇವಲ ಸಂಗೀತ ಮಾತ್ರವಲ್ಲ ಈ ಹಾಡಿಗೆ ಸಾಹಿತ್ಯವನ್ನೂ ರವಿ‌ಬಸ್ರೂರ್ ಅವರೇ ನೀಡಿದ್ದಾರೆ. ಕೆಜಿಎಫ್ ದೊಡ್ಡ ಮಟ್ಟಿಗೆ ಹಿಟ್ ಆಗುವಲ್ಲಿ ಸಂಗೀತದ ಕೊಡುಗೆಯೂ ದೊಡ್ಡ ಪ್ರಮಾಣದಲ್ಲಿತ್ತು. ಈಗ ತೂಫಾನ್ ನೋಡಿದರೇ ಎರಡನೇ ಸಿನಿಮಾದಲ್ಲೂ ಹಾಡುಗಳೇ ಸೂಪರ್ ಹಿಟ್ ದಾಖಲಿಸುವ ಎಲ್ಲ ಸಾಧ್ಯತೆಗಳನ್ನು ಸಾರುತ್ತಿವೆ. ತೂಫಾನ್ ಹಾಡು ರಿಲೀಸ್ ಮಾಡೋದಾಗಿ ಕೆಜಿಎಫ್-2 ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮಂ ಈ ಮೊದಲೇ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿತ್ತು. ಹೀಗಾಗಿ ಸಿನಿಪ್ರಿಯರು ಸಿನಿಮಾ ಹಾಡಿಗಾಗಿ ಕಾತುರತೆಯಿಂದ ಕಾಯುತ್ತಿದ್ದರು. ಇದರಿಂದಾಗಿ ಹಾಡಿನ ಲಿರಿಕಲ್ ಆಡಿಯೋ ರಿಲೀಸ್ ಆದ ಗಂಟೆಯೊಳಗೆ ವೀವ್ಸ್ ಸಂಖ್ಯೆ ಲಕ್ಷ ದಾಟಿದೆ.

Rocking Star Yash Starrer Kgf Chapter 2 First Lyrical Toofan Song Released
ಕೆಜಿಎಫ್‌ ಸಿನಿಮಾದಲ್ಲಿ ಯಶ್‌

ಇದೇ ತಿಂಗಳ 27 ರಂದು ಬಹುನೀರಿಕ್ಷಿತ ಕೆಜಿಎಫ್-2 (KGF Chapter 2) ಸಿನಿಮಾದ ಟ್ರೇಲರ್ ಲಾಂಚ್ ಆಗಲಿದ್ದು, ಏಪ್ರಿಲ್ 14ರಂದು ಸಿನಿಮಾ ತೆರೆಗೆ ಬರಲಿದೆ. ಈ‌ ಮಧ್ಯೆ ಸಿನಿಮಾ ಪ್ರಮೋಶನ್ ಗಾಗಿ ವಿಭಿನ್ನ ಸರ್ಕಸ್ ನಡೆಸ್ತಿರೋ ಚಿತ್ರತಂಡ ಕೆಲ ದಿನಗಳ ಹಿಂದೆಯಷ್ಟೇ ಸಿನಿಮಾದ ಟ್ರೇಲರ್, ಟೀಸರ್, ಸಾಂಗ್ ಗಳ ಪೈಕಿ ಅಭಿಮಾನಿಗಳು ಯಾವುದನ್ನು ನೋಡಲು ಬಯಸುತ್ತಾರೆ ಎಂದು ಓಟಿಂಗ್ ನಡೆಸಿತ್ತು‌. ಈ ವೇಳೆ ಪ್ರೇಕ್ಷಕರು ಸಾಂಗ್ ಹಾಗೂ ಟ್ರೇಲರ್ ಗೆ ಹೆಚ್ಚಿನ ಮತ ನೀಡಿದ್ದರು.

ಇದನ್ನೂ ಓದಿ : ಬಾಹುಬಲಿಗೆ ಜೊತೆಯಾದ ಉಪ್ಪೇನ್ ಬೆಡಗಿ : ಕೃತಿ ಅಭಿಮಾನಿಗಳು ಫುಲ್ ಖುಷ್

ಇದನ್ನೂ ಓದಿ : ಎಲ್ಲೂ ಹೋಗಿಲ್ಲ ಅಪ್ಪು ಎಂದ ಅನಿತಾ : ಮೂರೇ ದಿನದಲ್ಲಿ ದಾಖಲೆ ವೀವ್ಸ್‌

Rocking Star Yash Starrer Kgf Chapter 2 First Lyrical Toofan Song Released

Comments are closed.