Spandana Vijay Raghavendra : ಸ್ಪಂದನಾ ವಿಜಯ್‌ ಪಾರ್ಥಿವ ಶರೀರ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಯಾವಾಗ ಬರುತ್ತೆ ?

ಸ್ಯಾಂಡಲ್‌ವುಡ್‌ ಜನಪ್ರಿಯ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ (Spandana Vijay Raghavendra) ಥೈಲ್ಯಾಂಡ್‌ ಪ್ರವಾಸದಲ್ಲಿದ್ದಾಗ, ಹೃದಯಾಘಾತದಿಂದ ಬಾರದಲೋಕಕ್ಕೆ ತೆರಳಿದ್ದಾರೆ. ಸ್ಪಂದನಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು, ಸಿನಿರಂಗವೇ ಕಣ್ಣೀರಲ್ಲಿ ಮುಳುಗಿದೆ. ಸ್ಪಂದನಾ ಅವರು ಬ್ಯಾಂಕಾಕ್‌ ಪ್ರವಾಸಕ್ಕೆಂದು ಹೋಗಿದ್ದು, ಬುಧವಾರ ಬೆಂಗಳೂರಿಗೆ ವಾಪಸ್‌ ಆಗಬೇಕಿತ್ತು. ಆದರೆ ಸ್ಪಂದನಾ ಬದುಕಲ್ಲಿ ವಿಧಿ ಚೆಲ್ಲಾಟವಾಡಿದ್ದಾನೆ.

ಬ್ಯಾಂಕಾಕ್‌ ನಲ್ಲಿ ನಿನ್ನೆಯಷ್ಟೇ ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ನಡೆದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಇನ್ನೇನು ಕೈ ಸೇರಬಾಕಾಗಿದೆ. ಎಲ್ಲಾ ಪ್ರಕ್ರಿಯೆಗಳು ಮುಗಿದ ಕೂಡಲೇ ಸ್ಪಂದನಾ ಅವರ ಪಾರ್ಥಿವ ಶರೀರವು ಬ್ಯಾಂಕಾಕ್‌ನಿಂದ ನೇರ ಬೆಂಗಳೂರಿಗೆ ಬರುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಸ್ಪಂದನಾ ಅವರ ಮೃತ ದೇಹದ ಹಸ್ತಾಂತರಕ್ಕೂ ಮೊದಲು ಅದಕ್ಕೆ ಸಂಬಂಧಿಸಿದಂತೆ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಎಲ್ಲಾ ಪ್ರಕ್ರಿಯೆಗಳು ಮುಗಿಯಬೇಕಿದೆ. ಅದಕ್ಕೆ ಸ್ವಲ್ಪ ಸಮಯ ತಗೆದುಕೊಳ್ಳುವುದರಿಂದ ಇಂದು ಸಂಜೆ ಒಳಗೆ ಬೆಂಗಳೂರಿನ ಬುರವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ : Spandana Vijay Raghavendra : ನಟ ವಿಜಯ್‌ ರಾಘವೇಂದ್ರ ಹಾಗೂ ಸ್ಪಂದನಾ ಅವರ ಪ್ರೀತಿ ಪಯಣ ಹೇಗಿತ್ತು ಗೊತ್ತಾ ?

ಸ್ಪಂದನಾ ಪಾರ್ಥೀವ ದೇಹವನ್ನು ಹಸ್ತಾಂತರ ಪ್ರಕ್ರಿಯೆ ತಡವಾದರೆ, ರಾತ್ರಿ 9.30 ಕ್ಕೆ ಥೈ ಏರಲೈನ್ಸ್‌ ಮೂಲಕ ಪಾರ್ಥಿವ ಶರೀರ ಬೆಂಗಳೂರಿಗೆ ತಲುಪುವಾಗ ತಡರಾತ್ರಿ ಆಗುವ ಸಾಧ್ಯತೆ ಇದೆ. ಸ್ಪಂದನಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವ ಸಾಧ್ಯತೆ ಇದೆ. ಅಂತಿಮ ದರ್ಶನದ ನಂತರ ಅಂತ್ಯಕ್ರಿಯೆ ನೆತವೇರಿಸುವ ಸಾಧ್ಯತೆ ಇದೆ. ಸ್ಪಂದನಾ ಅವರ ತಂದೆ ಬಿಕೆ ಶಿವರಾಮ್‌ ಬೆಳ್ತಂಗಡಿ ಮೂಲದವರಾಗಿದ್ದರಿಂದ ಅಂತ್ಯಕ್ರಯೆ ಬೆಂಗಳೂರಿನಲ್ಲಿ ನಡೆಯುತ್ತಾ ? ಇಲ್ಲ ಬೆಳ್ತಂಗಡಿಯಲ್ಲಿ ಆಗುತ್ತಾ ? ಅನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

Spandana Vijay Raghavendra: When will Spandana’s body arrive in Bangalore from Bangkok?

Comments are closed.