Veerendra Babu Arrest: ಅತ್ಯಾಚಾರ, ಬೆದರಿಕೆ ಪ್ರಕರಣ : ಸ್ಯಾಂಡಲ್‌ವುಡ್ ನಟ ವೀರೇಂದ್ರ ಬಾಬು ಬಂಧನ

ಸ್ಯಾಂಡಲ್‌ವುಡ್‌ ನಟ-ನಿರ್ಮಾಪಕ ವೀರೇಂದ್ರ ಬಾಬು ಅವರನ್ನು ಅತ್ಯಾಚಾರ ಮತ್ತು ಜೀವ ಬೆದರಿಕೆ ಪ್ರಕರಣದಲ್ಲಿ (Veerendra Babu Arrest) ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವೀರೇಂದ್ರಬಾಬುನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ವೀರೇಂದ್ರ ಮಹಿಳೆಯನ್ನು ಪ್ರಜ್ಞಾಹೀನಗೊಳಿಸಿದ ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವಿಡಿಯೋ ತೋರಿಸಿ 15 ಲಕ್ಷ ರೂಪಾಯಿ ಕೊಡುವಂತೆ ವೀರೇಂದ್ರ ಬಾಬು ಬ್ಲ್ಯಾಕ್ ಮೇಲ್ ಮಾಡಿದ್ದ ಎನ್ನಲಾಗಿದೆ. 2021ರಲ್ಲಿ ನಡೆದ ಘಟನೆ ಇದಾಗಿದ್ದು, ವೀರೇಂದ್ರ ಬಾಬು ಮಹಿಳೆಯನ್ನು ಪ್ರಜ್ಞೆ ತಪ್ಪಿಸಿದ್ದಾರೆ. ನಂತರ ನಟ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವಿಡಿಯೋ ತೋರಿಸಿ 15 ಲಕ್ಷ ರೂಪಾಯಿ ಕೊಡುವಂತೆ ವೀರೇಂದ್ರ ಬಾಬು ಬ್ಲ್ಯಾಕ್ ಮೇಲ್ ಮಾಡಿದ್ದ ಎನ್ನಲಾಗಿದೆ.

ಆದರೆ ಕಳೆದ ಜುಲೈ 30 ರಂದು ವೀರೇಂದ್ರ ಬಾಬು ಮಹಿಳೆಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಕಾರಿನಲ್ಲಿ ಸುತ್ತುವರಿದು ಚಿನ್ನಾಭರಣ ದೋಚಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ : Vega Helmet Company : ಎಡಗೈ ಬಳಸುವವರಿಗೆ ಇಲ್ಲಿದೆ ಸಿಹಿ ಸುದ್ದಿ: ಅಂತರಾಷ್ಟ್ರೀಯ ಎಡಗೈ ದಿನದಂದು ವೇಗ ಹೆಲ್ಮೆಟ್ ಗಿಫ್ಟ್..

ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆ ದೂರು ದಾಖಲಿಸಿದ್ದಾರೆ. ಇದರ ಆಧಾರದ ಮೇಲೆ ವೀರೇಂದ್ರ ಬಾಬು ಮತ್ತು ಆತನ ಸ್ನೇಹಿತರ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಆರೋಪದಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸದ್ಯ ಆರೋಪಿಯನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದರು.

Veerendra Babu Arrest : Sandalwood actor arrest for rape and threat case

Comments are closed.