ಕಾರ್ಕಳ: (Krishnashile for Sri RamaMurti) ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ ಎನ್ನುವಂತೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭ್ಯವ ಪ್ರಭು ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಪವಿತ್ರ ಶ್ರೀ ರಾಮರ ಮೂರ್ತಿಗೆ ಕರ್ನಾಟಕದ ಕಾರ್ಕಳದ ಈದು ಗ್ರಾಮದ ಕೃಷ್ಣಶಿಲೆ ಆಯ್ಕೆಯಾಗಿದೆ. ಕಾರ್ಕಳದ ನೆಲ್ಲಿಕಾರು ಶಿಲೆಯು ಅಯೋಧ್ಯೆಯಲ್ಲಿ ಮೂರ್ತಿ ನಿರ್ಮಾಣದ ಮೂಲಕ ಮತ್ತೆ ಪಾವಿತ್ರ್ಯತೆಯನ್ನು ಪಡೆಯಲಿದೆ. ಈ ಮೂಲಕ ಶಿಲ್ಪಿಗಳ ತವರು ಎಂದೇ ಖ್ಯಾತಿ ಹೊಂದಿರುವ ಕಾರ್ಕಳದ ಹಿರಿಮೆ ಮತ್ತಷ್ಟು ಹೆಚ್ಚಿದೆ.
ಶಿಲ್ಪಿಗಳ ತವರೂರು ಎಂದೇ ಖ್ಯಾತವಾಗಿರುವ ಕಾರ್ಕಳದ ಈದು ಗ್ರಾಮದ ತುಂಗ ಪೂಜಾರಿಯವರ ಭೂಮಿಯಲ್ಲಿದ್ದ ಶಿಲೆ ಆಯ್ಕೆಯಾಗಿದ್ದು, ಪೂರ್ತಿ ವಿಶ್ವವೇ ಈ ಶಿಲೆಯಿಂದ ರೂಪುಗೊಳ್ಳಲಿರುವ ಭಗವಾನ್ ಶ್ರೀ ರಾಮನ ದರ್ಶನ ಪಡೆಯಲಿದೆ. ಮೂರ್ತಿ ನಿರ್ಮಾಣಕ್ಕೆ ಯೋಗ್ಯ ಕಲ್ಲನ್ನು ಹುಡುಕುವ ಕಾರ್ಯ ಹಲವು ತಿಂಗಳಿಂದ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಕೆಲವು ತಿಂಗಳ ಹಿಂದೆ ಖ್ಯಾತ ಶಿಲಾ ತಜ್ಞ ಕುಶೀಪ್ ಬನ್ಸಾಲ್ ಸೇರಿದಂತೆ ಹಲವು ತಜ್ಞರು ಜೊತೆಗೂಡಿ ಸ್ಥಳೀಯ ಭಜರಂಗದಳ ಕಾರ್ಯಕರ್ತರು ನೆಲ್ಲಿಕಾರು ಶಿಲೆಯನ್ನು ಪರಿಶೀಲಿಸಿದ್ದರು.

ಈ ಶಿಲೆಯು ಹತ್ತು ಟನ್ ತೂಕ, ಒಂದು ಅಡಿ ಉದ್ದ, ಆರು ಅಡಿ ಅಗಲ, ಹಾಗೂ ನಾಲ್ಕು ಅಡಿ ದಪ್ಪವಿದ್ದು, ಯಗ್ಯ ಎನ್ನುವ ನಿಟ್ಟಿನಲ್ಲಿ ಅಯೋಧ್ಯೆಗೆ ಸಾಗಿಸುವ ಕಾರ್ಯಗಳು ನಡೆದಿವೆ. ಕ್ರೇನ್ ಮೂಲಕ ಎತ್ತಿ ಬಜಗೋಳಿ ಅಯ್ಯಪ್ಪ ಮಂದಿರಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಿ ಅಯೋಧ್ಯೆಗೆ ಕಳುಹಿಸುವ ಕೆಲಸ ಮಾಡಲಾಗಿದೆ. ಇನ್ನೂ ಕಾರ್ಕಳದ ನೆಲ್ಲಿಕಾರಿನ ಶಿಲೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿಯನ್ನು ಪಡೆದಿದ್ದು, ರಾಷ್ಟ್ರಪತಿ ಭವನದಲ್ಲಿರುವ ಕಾರ್ಕಳ ಬಾಹುಬಳಿ, ಮಾನಸ್ತಂಭ ಪ್ರತಿಕೃತು, ಕವಿ ಮುದ್ದಣ, ಮಿಥುನ ನಾಗ, ಸೋಮನಾಥ ಪುರದ ಧ್ವಾರ, ಗಜಸಿಂಹ, ಗೇಟ್ ವೇ, ಹೀಗೆ ಹತ್ತು ಹಲವು ವಿಗ್ರಹಗಳನ್ನು ತಯಾರಿಸಲಾಗಿದೆ.
ಇದನ್ನೂ ಓದಿ : Udupi power cut: ಉಡುಪಿ: ಮಾ. 24 ರಂದು ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯ: ಮೆಸ್ಕಾಂ ಪ್ರಕಟಣೆ
ಇದನ್ನೂ ಓದಿ : Karnataka assembly election : ಅಬಕಾರಿ ಅಕ್ರಮ ತಡೆಗೆ ವಿಶೇಷ ತಂಡ
Krishnashile for Sri RamaMurti: Krishnashile of Karkala chosen for Sri Rama Murti of Ayodhya