Quarantine compulsory: ಬೆಂಗಳೂರಿಗೆ ಬರುವ ವಿದೇಶಿ ಪ್ರಯಾಣಿಕರಿಗೆ 7 ದಿನಗಳ ಕ್ವಾರಂಟೈನ್ ಕಡ್ಡಾಯ

ಬೆಂಗಳೂರು: (Quarantine compulsory) ರಾಜ್ಯದಲ್ಲಿ ಕೊರೊನಾ ಭೀತಿ ಹೆಚ್ಚಾದ ಹಿನ್ನಲೆಯಲ್ಲಿ ಹೈರಿಸ್ಕ್‌ ದೇಶಗಳಿಂದ ಬರುವ ಪ್ರತಿಯೊಬ್ಬ ವಿದೇಶಿ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ಎಲ್ಲಾ ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕೂಡ ರಾಜ್ಯಕ್ಕೆ ಬರುವ ವಿದೇಶಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ಹಿನ್ನಲೆಯಲ್ಲಿ ವಿದೇಶದಿಂದ ಬರುವ ಅದರಲ್ಲೂ ಹೈ ರಿಸ್ಕ್‌ ದೇಶಗಳಿಂದ ಬರುವ ಪ್ರಯಾಣಿಕರಿಗೆ ಏಳು ದಿನಗಳ ಕಾಲ ಕ್ವಾರಂಟೈನ್‌ ಕಡ್ಡಾಯಗೊಳಿಸಲಾಗಿದೆ.

ಹಾಂಗ್‌ ಕಾಂಗ್‌, ಸಿಂಗಾಪುರ , ಚೀನಾ, ಜಪಾನ್‌, ಥೈಲ್ಯಾಂಡ್‌ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಹೈರಿಸ್ಕ್‌ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಡಲಾಗಿದ್ದು, ಇವರಿಗೆ ಏಳು ದಿನಗಳ ಕಾಲ ಕ್ವಾರಂಟೈನ್‌ (Quarantine compulsory) ಕಡ್ಡಾಯವಾಗಿದೆ. ವಿದೇಶದಿಂದ ಬರುವ ಕ್ವಾರಂಟೈನ್‌ಗೆ ಒಳಪಟ್ಟಿರುವ ಹೋಟೆಲ್‌ಗಳಲ್ಲಿ ತಂಗುವ ಪ್ರಯಾಣಿಕರು ತಮ್ಮ ಸ್ವಂತ ವೆಚ್ಚವನ್ನು ಭರಿಸಬೇಕಾಗುತ್ತದೆ. ಮನೆಯಲ್ಲಿ ಕ್ವಾರಂಟೈನ್‌ನಲ್ಲಿರುವವರ ಮೇಲೆ ಬಿಬಿಎಂಪಿ ನಿಗಾ ಇಡಲಿದೆ.

ಕೋವಿಡ್‌ ಪರೀಕ್ಷೆಯ ಸಮಯದಲ್ಲಿ ಸೋಂಕು ದೃಢಪಟ್ಟರೆ ಕ್ವಾರಂಟೈನ್‌ ಕಡ್ಡಾಯ ಮಾಡುವುದರ ಜೊತೆಗೆ ಸೋಂಕಿತರ ಮಾದರಿಯನ್ನು ಜೀನೋಮಿಕ್‌ ಸೀಕ್ವೆನ್ಸ್‌ ಲ್ಯಾಬ್‌ ಗೆ ಕಳುಹಿಸಲು ಬಿಬಿಎಂಪಿ ನಿರ್ಧರಿಸಿದೆ. ಒಂದು ವೇಳೆ ಕ್ವಾರಂಟೈನ್‌ ನಲ್ಲಿರುವ ಸಂದರ್ಭದಲ್ಲಿ ಬಾಯಿ ರುಚಿ ನಕೆಡುವುದು, ಶೀತ, ಕೆಮ್ಮು ಜ್ವರ ಈ ರೀತಿಯ ರೋಗಲಕ್ಷಣಗಳು ಕಂಡುಬಂದರೆ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ : Separate covid rules: ಉಡುಪಿ ಜಿಲ್ಲೆಗೆ ಪ್ರತ್ಯೇಕ ಕೋವಿಡ್ ಮಾರ್ಗಸೂಚಿ ಜಾರಿ: ಡಿಸಿ ಕೂರ್ಮರಾವ್

ಇದನ್ನೂ ಓದಿ : Omicron XXB.1.5 variant: ಭಾರತಕ್ಕೆ ಕಾಲಿಟ್ಟ ಮತ್ತೊಂದು ಕೊರೊನಾ ಹೊಸ ರೂಪಾಂತರ: ಗುಜರಾತ್‌ ನಲ್ಲಿ ಮೊದಲ ಪ್ರಕರಣ ಪತ್ತೆ\

ಇದನ್ನೂ ಓದಿ : Random corona test: ರಾಜ್ಯದಲ್ಲಿ ಕೊರೊನಾ ಭೀತಿ: ಯಾದೃಚ್ಛಿಕ ಪರೀಕ್ಷೆ ಪ್ರಮಾಣ ಹೆಚ್ಚಿಸುವಂತೆ ತಜ್ಞರ ಮನವಿ

ಇದನ್ನೂ ಓದಿ : Corona tough rules: ಕೊರೊನಾ ಆತಂಕ: ಕೆಂಪೇಗೌಡ ಏರ್‌ ಪೋರ್ಟ್‌ ನಲ್ಲಿ ತೀವ್ರ ತಪಾಸಣೆ

Quarantine for seven days has been made mandatory for travelers coming from abroad, especially from high-risk countries.

Comments are closed.