ಬೆಂಗಳೂರು: ಐಪಿಎಲ್-16ನೇ ಆವೃತ್ತಿಯ ಟೂರ್ನಿ (Indian Premier League – IPL 2023) ಹತ್ತಿರ ಬರ್ತಾ ಇದ್ದಂತೆ, ಟೂರ್ನಿಯ ಪ್ರಸಾರ ಮತ್ತು ಮಾಧ್ಯಮ ಹಕ್ಕುಗಳನ್ನು ಹೊಂದಿರುವ ವಯಕಾಮ್ 18 (Viacom18) ಮತ್ತು ಸ್ಟಾರ್ ಸ್ಪೋರ್ಟ್ಸ್ ವಾಹಿನಿಗಳ (Star Sports Network) ಮಧ್ಯೆ ದೊಡ್ಡ ಜಾಹೀರಾತು ಯುದ್ಧವೇ (IPL media rights) ಆರಂಭಗೊಂಡಿದೆ. ಟೀಮ್ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ಸಾರಥಿ, ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ (MS Dhoni) ಅವರನ್ನು ವಯಕಾಮ್ 18 ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿಕೊಂಡಿದೆ.
ಧೋನಿ ಅವರ ಮುಖವನ್ನು ಮುಂದಿಟ್ಟುಕೊಂಡು ವಿವಿಧ ಕಂಪನಿಗಳ ಜೊತೆ ಜಾಹೀರಾತು ಒಪ್ಪಂದ ಡಿಕೊಳ್ಳುತ್ತಿದೆ. ಐಪಿಎಲ್ ಡಿಜಿಟಲ್ ಹಕ್ಕು ಹೊಂದಿರುವ ವಯಕಾಮ್ 18 ಸಂಸ್ಥೆ ಈಗಾಗಲೇ 13 ಸ್ಟ್ರೀಮಿಂಗ್ ಸ್ಪಾನ್ಸರ್’ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಐಪಿಎಲ್-16 ಟೂರ್ನಿಯ ಲೈವ್ ಸ್ಟ್ರೀಮಿಂಗ್ ಜಿಯೊ ಸಿನಿಮಾ appನಲ್ಲಿ ಪ್ರಸಾರವಾಗಲಿದೆ. ಧೋನಿ ಅಭಿನಯಿಸಿರುವ ಜಿಯೊ ಸಿನಿಮಾ ಪ್ರೊಮೊ ಇಲ್ಲಿದೆ.
Get CLOSER to #TATAIPL action than ever before.
— Viacom18 (@viacom18) March 17, 2023
Watch #IPLOnJioCinema in 4K and in multiple languages – FREE for all telecom operators! #TATAIPL2023 @msdhoni @JioCinema https://t.co/3jvTPb4PJn
ವಯಕಾಮ್ 18 ಸಂಸ್ಥೆ ಈಗಾಗ್ಲೇ ಪಾರ್ಲೆ, ಡ್ರೀಮ್ XI, ಟಿವಿಎಸ್, ಪುಮಾ, ಇಟಿ ಮನಿ, ಮಂಡೆಲೆಜ್, ಕಮ್ಲಾ ಪಸಂದ್, ಪೆಪ್ಸಿ ಮತ್ತು ಐಟಿಸಿ ಕಂಪನಿಗಳ ಜೊತೆ ಜಾಹೀರತು ಒಪ್ಪಂದ ಮಾಡಿಕೊಂಡಿದೆ. ಇದೇ ವೇಳೆ ಐಪಿಎಲ್ ಪ್ರಸಾದ ಹಕ್ಕುಗಳನ್ನು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರನ್ನು ಫೇಸ್ ವ್ಯಾಲ್ಯೂ ಆಗಿ ಇಟ್ಟುಕೊಂಡು ಜಾಹೀರಾತು ಬೇಟೆಗೆ ಇಳಿದಿದ್ದು, ಇದುವರೆಗೆ 11 ಸ್ಪಾನ್ಸರ್’ಗಳನ್ನು ಪಡೆದಿದೆ.
ಇದನ್ನೂ ಓದಿ : Women’s Premier League : ಗುಜರಾತ್ ವಿರುದ್ಧ ಗೆದ್ದು ಪ್ಲೇ ಆಫ್ಗೆ ಎಂಟ್ರಿ ಕೊಟ್ಟ ಯು.ಪಿ ವಾರಿಯರ್ಸ್; ಆರ್ಸಿಬಿ ಕನಸು ನುಚ್ಚುನೂರು
ಇದನ್ನೂ ಓದಿ : Deandra Dottin : ಮಹಿಳಾ ಪ್ರೀಮಿಯರ್ ಲೀಗ್’ನ ದೊಡ್ಡ ಕಾಂಟ್ರವರ್ಸಿ, ಗುಜರಾತ್ ಜೈಂಟ್ಸ್ ವಿರುದ್ಧ ತಿರುಗಿ ಬಿದ್ದ ವಿಂಡೀಸ್ ಸ್ಟಾರ್
ಮಹಿಳಾ ಪ್ರೀಮಯರ್ ಲೀಗ್’ನ ನೇರ ಪ್ರಸಾರ ಹಾಗೂ ಲೈವ್ ಸ್ಟ್ರೀಮಿಂಗ್ ಹಕ್ಕುಗಳನ್ನುಹೊಂದಿರುವ ವಯಕಾಮ್ 18 ಸಂಸ್ಥೆ ಈಗಾಗಲೇ ಟಾಟಾ ಮೋಟರ್ಸ್, ಟಾಟಾ ಕ್ಯಾಪಿಟಲ್ಸ್, ಹೀರೊ ವಿಡಾ, ಬ್ಯಾಂಗ್ ಆಫ್ ಬರೋಡ, ಎಂಪಿಎಲ್ ಸ್ಟ್ರೈಕರ್, ವರ್ಲ್ಡ್ ಗೋಲ್ಡ್ ಕೌನ್ಸಿಲ್, H&M, JSW ಪೇಂಟ್ಸ್, ನೋಯ್ಸ್, ಅಪಾರ್ ಕಂಪನಿಗಳ ಸ್ಪಾನ್ಸರ್’ಷಿಪ್ ಹೊಂದಿದೆ.
IPL media rights : Viacom-Star Sports ad war, it’s Dhoni Vs Kohli battle