T20 World Cup 2022 : ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ 16 ನಾಯಕರ ಫೋಟೋ ಸೆಷನ್, ನಾಳೆ ಶುರು ಚುಟುಕು ಕ್ರಿಕೆಟ್ ಮಹಾಯುದ್ಧ

ಮೆಲ್ಬೋರ್ನ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿ (T20 World Cup 2022) ನಾಳೆ (ಭಾನುವಾರ) ಆರಂಭವಾಗಲಿದ್ದು, ಟೂರ್ನಿಯಲ್ಲಿ ಭಾಗವಹಿಸಲಿರುವ 16 ತಂಡಗಳ ನಾಯಕರು ವಿಶ್ವಕಪ್ ಟ್ರೋಫಿಯೊಂದಿಗೆ ಫೋಟೋ ಸೆಷನ್ ನಡೆಸಿದ್ದಾರೆ.

ಐಸಿಸಿ ಆಯೋಜಿಸಿದ್ದ ಫೋಟೋ ಸೆಷನ್’ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ನಾಯಕ ಕೇನ್ ವಿಲಿಯಮ್ಸನ್, ಕಳೆದ ಬಾರಿಯ ರನ್ನರ್ಸ್ ಅಪ್ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್, ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್, ಶ್ರೀಲಂಕಾ ತಂಡದ ನಾಯಕ ದಸುನ್ ಶನಕ, ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೋಲಸ್ ಪೂರನ್, ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವೂಮ ಸಹಿತ ಅರ್ಹತಾ ಸುತ್ತಿನಲ್ಲಿ ಆಡಲಿರುವ ತಂಡಗಳ ನಾಯಕರೂ ಭಾಗಿಯಾಗಿದ್ದಾರೆ.

ಟಿ20 ವಿಶ್ವಕಪ್ ಟ್ರೋಫಿ ಜೊತೆ ವಿವಿಧ ತಂಡಗಳ ನಾಯಕ ಫೋಟೋ ಸೆಷನ್ ವೇಳೆ ಪಾಕಿಸ್ತಾನ ತಂಡದ ಕ್ಯಾಪ್ಟನ್ ಬಾಬರ್ ಅಜಮ್ ಅವರ ಹುಟ್ಟುಹಬ್ಬವನ್ನೂ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಬಾಬರ್ ಅಜಮ್ ಶನಿವಾರ 29ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ನಾಳೆಯಿಂದ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ನಮೀಬಿಯಾ ತಂಡಗಳು ಮುಖಾಮುಖಿಯಾಗಲಿದ್ರೆ, 2ನೇ ಪಂದ್ಯ ನೆದರ್ಲೆಂಡ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳ ಮಧ್ಯೆ ನಡೆಯಲಿದೆ.

ಅಕ್ಟೋಬರ್ 22ರಿಂದ ಪ್ರಧಾನ ಸುತ್ತಿನ ಪಂದ್ಯಗಳು ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಕಳೆದ ಬಾರಿಯ ರನ್ನರ್ಸ್ ಅಪ್ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುವ ತನ್ನ ಮೊದಲ ಪಂದ್ಯದಲ್ಲಿ 2007ರ ಚಾಂಪಿಯನ್ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಪಾಕ್ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಭಾರತ ಬ್ರಿಸ್ಬೇನ್’ನಲ್ಲಿ ಆಸ್ಟ್ರೇಲಿಯಾ (ಅಕ್ಟೋಬರ್ 17) ಹಾಗೂ ನ್ಯೂಜಿಲೆಂಡ್ (ಅಕ್ಟೋಬರ್ 18) ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನಾಡಲಿದೆ. ಇದನ್ನೂ ಓದಿ : Virat Kohli Rohit Sharma : ರೋಹಿತ್ ಅಭಿಮಾನಿಯನ್ನು ಕೊಂದ ವಿರಾಟ್ ಫ್ಯಾನ್, ಕೊಹ್ಲಿಯನ್ನು ಅರೆಸ್ಟ್ ಮಾಡಲು ಆಗ್ರಹ

ಐಸಿಸಿ ಟಿ20 ವಿಶ್ವಕಪ್: ಬಹುಮಾನ ಮೊತ್ತ (T20 World Cup 2022):

ಚಾಂಪಿಯನ್ಸ್: ₹13,05,35,440
ರನ್ನರ್ಸ್ ಅಪ್: ₹6,52,64,280
ಸೆಮಿಫೈನಲ್’ನಲ್ಲಿ ಸೋತವರು: ₹3,26,20,220
ಸೂಪರ್ 12 ಗೆಲುವು: ₹32,65,536 X 30
ಸೂಪರ್ 12 ಸೋತವರು: ₹57,14,688 X 8
ಮೊದಲ ಸುತ್ತಿನ ಗೆಲುವು: ₹32,65,536 X 12
ಮೊದಲ ಸುತ್ತಿನಲ್ಲಿ ಸೋತವರು: ₹32,65,536 X 4

T20 World Cup 2022 : ಭಾರತದ ವೇಳಾಪಟ್ಟಿ (ಗ್ರೂಪ್-2):

ಇದನ್ನೂ ಓದಿ : Shami replaces Bumrah: ಟಿ20 ವಿಶ್ವಕಪ್: ಬುಮ್ರಾ ಬದಲು ಶಮಿ ಆಯ್ಕೆ, ಬಿಸಿಸಿಐ ಅಧಿಕೃತ ಘೋಷಣೆ

Vs ಪಾಕಿಸ್ತಾನ: ಅಕ್ಟೋಬರ್ 23

ಸ್ಥಳ: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಮೆಲ್ಬೋರ್ನ್
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ (ಭಾರತೀಯ ಕಾಲಮಾನ)
Vs ಅರ್ಹತಾ ಸುತ್ತಿನ ತಂಡ: ಅಕ್ಟೋಬರ್ 27
ಸ್ಥಳ: ಸಿಡ್ನಿ ಕ್ರಿಕೆಟ್ ಗ್ರೌಂಡ್, ಸಿಡ್ನಿ
ಪಂದ್ಯ ಆರಂಭ: ಮಧ್ಯಾಹ್ನ 12.30ಕ್ಕೆ (ಭಾರತೀಯ ಕಾಲಮಾನ)
Vs ದಕ್ಷಿಣ ಆಫ್ರಿಕಾ: ಅಕ್ಟೋಬರ್ 30
ಸ್ಥಳ: ಪರ್ತ್
ಪಂದ್ಯ ಆರಂಭ: ಮಧ್ಯಾಹ್ನ 4.30ಕ್ಕೆ (ಭಾರತೀಯ ಕಾಲಮಾನ)
Vs ಬಾಂಗ್ಲಾದೇಶ: ನವೆಂಬರ್ 02
ಸ್ಥಳ: ಅಡಿಲೇಡ್
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ (ಭಾರತೀಯ ಕಾಲಮಾನ)
Vs ಅರ್ಹತಾ ಸುತ್ತಿನ ತಂಡ: ನವೆಂಬರ್ 06
ಸ್ಥಳ: ಮೆಲ್ಬೋರ್ನ್ ಕ್ರಿಕೆಟ್ ಮೈದಾನ, ಮೆಲ್ಬೋರ್ನ್
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ (ಭಾರತೀಯ ಕಾಲಮಾನ)

T20 World Cup 2022 all 16 captains in one frame

Comments are closed.