ಬುಧವಾರ, ಜೂನ್ 18, 2025
HomeCrimeಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ !

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ !

- Advertisement -

ಮಂಗಳೂರು : ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾಗಿದೆ. ಲ್ಯಾಪ್ ಟಾಪ್ ಬ್ಯಾಗ್ ನಲ್ಲಿ ಸಜೀವ ಬಾಂಬ್ ಇರಿಸಲಾಗಿದ್ದು, ಬಾಂಬ್ ನಿಷ್ಕ್ರೀಯದಳದ ಅಧಿಕಾರಿಗಳು ತಪಾಸಣೆಯನ್ನು ನಡೆಸಲಾಗುತ್ತಿದೆ.

IMG 20200120 WA0096
ಬಾಂಬ್ ಇರಿಸಲಾಗಿರುವ ವಾಹನ

ಆಟೋದಲ್ಲಿ ಬಂದಿದ್ದ ವ್ಯಕ್ತಿಯೋರ್ವ ವಿಮಾನನಿಲ್ದಾಣದಲ್ಲಿ ಲ್ಯಾಪ್ ಟಾಪ್ ಬ್ಯಾಗ್ ಇರಿಸಿ ನಾಪತ್ತೆಯಾಗಿದ್ದಾನೆ. ಬ್ಯಾಗ್ ನಲ್ಲಿ ಸುಮಾರು 10 ಕೆ.ಜಿ. ತೂಕದ ಸುಧಾರಿತ ಸಜೀವ ಬಾಂಬ್ ಇರುವುದು ಪತ್ತೆಯಾಗಿದೆ.

Mangalore Air 2
ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಅವರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು, ಸಜೀವ ಬಾಂಬ್ ನ್ನು ನಿಷ್ಕ್ರೀಯಗೊಳಿಸುವ ಕಾರ್ಯವನ್ನು ನಡೆಸುತ್ತಿದ್ದಾರೆ.

IMG 20200120 WA0080
ವಿಮಾನ ನಿಲ್ದಾಣದ ಹೊರಭಾಗದಲ್ಲಿ ಬಿಗಿ ಪೊಲೀಸ್ ಭದ್ರತೆ

ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ. ಆಟೋದಲ್ಲಿ ಬಂದು ಶಂಕಿತರರು ಬ್ಯಾಗ್ ಇರಿಸಿ ಪರಾರಿಯಾಗಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

IMG 20200120 WA0079 1
ವಿಮಾನ ನಿಲ್ದಾಣಕ್ಕೆ ಬರುವ ವಾಹನಗಳ ತಪಾಸಣೆ

ಬಾಂಬ್ ಪತ್ತೆಯಾದ ಕೂಡಲೇ ಸುರಕ್ಷಿತ ಸ್ಥಳಕ್ಕೆ ಅದನ್ನು ರವಾನಿಸಿ ಪ್ರೋಟೋ ಕಾಲ್ ಪ್ರಕಾರ ಬಾಂವ್ ಪ್ರೈಪ್ ವೆಹಿಕಲ್ ನಲ್ಲಿ ಇರಿಸಿದ್ದರು. ಅನುಮಾನಾಸ್ಪದ ಬ್ಯಾಗ್ ನಲ್ಲಿ ಪತ್ತೆಯಾಗಿರೋದು ಸಜೀವ ಬಾಂಬ್ ಅನ್ನೋದು ಖಚಿತವಾಗುತ್ತಿದ್ದಂತೆಯೇ ಅನಾಹುತ ತಪ್ಪಿಸಲು ರಕ್ಷಣಾ ಸಿಬ್ಬಂಧಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಸಜೀವ ಬಾಂಬ್ ನ್ನು ವಾಹನದೊಳಗೆ ನಿಷ್ಕ್ರೀಯಗೊಳಿಸುವ ಕಾರ್ಯದಲ್ಲಿ ಸಿಬ್ಬಂಧಿಗಳು ತೊಡಗಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular