Bike Accident 2died: ಬಿಬಿಎಂಪಿ ಕಸದ ಲಾರಿಗೆ ಇಬ್ಬರು ಬಲಿ: ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕ

ನೆಲಮಂಗಲ: (Bike Accident 2died) ಬೈಕ್‌ ಮತ್ತು ಬಿಬಿಎಂಪಿ ಕಸದ ಲಾರಿಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರರಿಬ್ಬರು ಸಾವನ್ನಪ್ಪಿದ ಘಟನೆ ನೆಲಮಂಗಲ ಸಮೀಪದ ಹುಲಿಕುಂಟೆ ಸಮೀಪದಲ್ಲಿ ನಡೆದಿದೆ. ಬಿಬಿಎಂಪಿ ಲಾರಿಯು ತ್ಯಾಜ್ಯ ಸುರಿಯಲು ಹೋಗುತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ನೆಲಮಂಗಲದ ಬಳಿ ಕಸದ ಲಾರಿಯೂ ತ್ಯಾಜ್ಯಗಳನ್ನು ಸುರಿಯಲು ಹೋಗುತ್ತಿದ್ದ ವೇಳೆ ಬೈಕ್‌ ಒಂದಕ್ಕೆ ಲಾರಿ ಡಿಕ್ಕಿ (Bike Accident 2died) ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ. ಪರಾರಿ ಆಗುತ್ತಿದ್ದ ಚಾಲಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರಸ್ತೆಯಲ್ಲಿ ಬಿದ್ದ ಮೃತದೇಹಗಳನ್ನು ಎತ್ತಲು ಬಿಡದೆ ಸ್ಥಳೀಯ ಗ್ರಾಮಸ್ಥರು ಕಸದ ಲಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ರಸ್ತೆಯಲ್ಲೇ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಬಿಬಿಎಂಪಿ ಅದಿಕಾರಿಗಳನ್ನು ಘಟನೆ ನಡೆದ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಬಿಬಿಎಂಪಿಯ ಸೂಪರಿಂಡೆಂಟ್‌ ಇಂಜಿನಿಯರ್‌ ಪ್ರವಿಣ್‌ ಸೂದ್‌ ಅವರು ಮೃತ ಕುಟುಂಬಕ್ಕೆ ತಲಾ ಇಪ್ಪತ್ತೈದು ಲಕ್ಷ ಪರಿಹಾರ ನೀಡುವುದಾಗಿ ಹೇಳಿದ್ದು, ಸ್ಥಳೀಯರು ಮೃತರಿಗೆ ತಲಾ ಐವತ್ತು ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ : NCIB Headquarters: ಮಹಿಳೆಯನ್ನು 14 ಸೆಕೆಂಡ್ ಗಿಂತ ಹೆಚ್ಚು ಗುರಾಯಿಸುವಂತಿಲ್ಲ.. ಕವಿತೆ ಹೇಳುವಂತಿಲ್ಲ.. ಏನಿದು ಹೊಸ ರೂಲ್ಸ್

ಇದನ್ನೂ ಓದಿ : Shraddha murder case: ಶೃದ್ಧಾ ವಾಕರ್ ಹತ್ಯೆ ಆರೋಪಿ ಅಫ್ತಾಬ್ ನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನದ ಮೇಲೆ ದಾಳಿ

ಇದನ್ನೂ ಓದಿ : Murder mystery: ಪ್ರೇಯಸಿ ಕರೆದಳೆಂದು ಆಕೆಯ ಮನೆಗೆ ಹೋದವ ಹೆಣವಾದ.. ಖತರ್ನಾಕ್ ಮರ್ಡರ್ ಸ್ಟೋರಿಯನ್ನು ಪೊಲೀಸರು ಭೇದಿಸಿದ್ದು ಹೇಗೆ ಗೊತ್ತಾ..

(Bike Accident 2died) As a result of the bike colliding with the BBMP garbage lorry, two bikers died and the incident took place near Hulikunte near Nelamangala. The incident took place when the BBMP lorry was going to dump waste.

Comments are closed.