Crime: ಗೆಳೆಯರೊಂದಿಗೆ ಪತ್ನಿಯನ್ನು ಮಲಗಿಸಿ ವೀಡಿಯೋ ಮಾಡುತ್ತಿದ್ದ ಗಂಡನಿಗೆ ನಾದಿನಿಯೂ ಬೇಕಂತೆ !

ಬೆಂಗಳೂರು: (Crime) ಮಹಿಳೆಯರನ್ನು ಈಗಲೂ ತನ್ನ ಕೈಗೊಂಬೆಯಂತೆ ನೋಡಿಕೊಳ್ಳುವ ಪುರುಷರು ಹಲವರಿದ್ದಾರೆ. ಆದರೆ ಸಮಾಜದ ಎಲ್ಲಾ ಕಟ್ಟುಪಾಡುಗಳನ್ನು ಮೀರಿ ಇಲ್ಲೊಬ್ಬ ಪತಿ ತನ್ನ ಪತ್ನಿಯನ್ನು ಗೆಳೆಯರೊಂದಿಗೆ ಮಲಗಿಸಿ ವಿಡಿಯೋ ಮಾಡಿ ವಿಕೃತಿ ಮರೆಯುತ್ತಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನಲ್ಲೊಬ್ಬ ವಿಕೃತಕಾಮಿ ಹಾಗೂ ಮಾದಕವ್ಯಸನಿ ಗಂಡನ ಪುಂಡಾಟ (Crime) ಬಯಲಾಗಿದೆ. ಪುರುಷ ಸಮಾಜವೇ ತಲೆ ತಗ್ಗಿಸುವಂತ ನೀಚ ಕಾರ್ಯ ಈತ ನಡೆಸುತ್ತಿದ್ದ. ತನ್ನ ಜೊತೆ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದ ಪತ್ನಿಯನ್ನು ಸ್ನೇಹಿತರೊಂದಿಗೆ ಮಲಗಿಸಿ ವಿಡಿಯೋ ಮಾಡಿ ವಿಕೃತಿ ಮೆರೆಯುತ್ತಿದ್ದನು. ಈ ಹಿಂಸೆಯನ್ನು ತಾಳಲಾರದೇ ಗಂಡನ ವಿರುದ್ದ ಪತ್ನಿ ದೂರು ನೀಡಿದ್ದು, ತನ್ನ ಗಂಡ ಇನ್ನೂ ಹಲವು ವಿಕೃತಗಾಮಿ ಚಟುವಟಿಕೆಗಳನ್ನು ನಡೆಸುತ್ತಿದ್ದ ಬಗ್ಗೆ ಪೊಲೀಸರ ಮುಂದೆ ಪತ್ನಿ ಹೇಳಿಕೊಂಡಿದ್ದಾಳೆ.

2011 ರ ಏಪ್ರಿಲ್ ನಲ್ಲಿ ಜಾನ್ ಪಾಲ್ ಅವರನ್ನು ಮಹಿಳಾ ಟೆಕ್ಕಿ ವಿವಾಹವಾಗಿದ್ದಳು. ಮೊದಲ ನಾಲ್ಕು ವರ್ಷಗಳು ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದು, ನಂತರ 2015 ರಿಂದ ಆರೋಪಿ ಪತಿ ಜಾನ್ ಪಾಲ್ ತನ್ನ ವಿಕೃತಿ ಶುರು ಮಾಡಿದ್ದನು ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾಳೆ.

ಮನೆಗೆ ತನ್ನ ಗೆಳೆಯರನ್ನು ಕರೆದು ಪಾರ್ಟಿ ಮಾಡಿ ಗೆಳೆಯರೊಂದಿಗೆ ಬೆಡ್‌ ಶೇರ್‌ ಮಾಡುವಂತೆ ಹಿಂಸೆ ನೀಡುತ್ತಿದ್ದನು. ತನ್ನ ಪತಿಯ ಹಿಂಸೆ ತಾಳಲಾರದೆ ಗೆಳೆಯರೊಂದಿಗೆ ದೈಹಿಕ ಸಂಪರ್ಕಕ್ಕೆ ಒಪ್ಪಿದ್ದಳು. ಆರೋಪಿಯು ತನ್ನ ಸ್ನೇಹಿತರಾದ ಸಜೀಶ್ ಹಾಗೂ ನಾಜಿ ಎಂಬುವವರ ಜೊತೆ ಪತ್ನಿಯನ್ನ ಮಲಗಿಸಿದ್ದನು. ಸ್ವಂತ ಪತ್ನಿಯನ್ನ ಗೆಳೆಯರೊಂದಿಗೆ ಮಲಗಿಸಿ ಪೊಟೋ, ವಿಡಿಯೋ ಚಿತ್ರೀಕರಣವನ್ನೂ ಮಾಡುವ ಮೂಲಕ ವಿಕೃತಿ ಮೆರೆಯುತ್ತಿದ್ದನು. ಪ್ರತಿ ವಾರ ಇದೇ ರೀತಿ ನಡೆಯುತ್ತಿದ್ದು, ಈ ಘಟನೆಗಳಿಂದ ಬೇಸತ್ತು ಗಲಾಟೆ ಮಾಡಿದರೂ ತನ್ನನ್ನು ಗಂಡ ಬಿಡುತ್ತಿರಲಿಲ್ಲ ಎಂದು ದೂರಿನಲ್ಲಿ ಆಕೆ ತಿಳಿಸಿದ್ದಾಳೆ.

ಆರೋಪಿ ಪತಿ ತನ್ನ ಪತ್ನಿಯ ಮೇಲೆ ವಿಕೃತಿ ಮೆರೆದಿದ್ದಲ್ಲದೆ ನಾದಿನಿಗೂ ತನ್ನೊಡನೆ ಮಲಗುವಂತೆ ಕಿರುಕುಳ ನೀಡುತ್ತಿದ್ದನು. ಇದರಿಂದ ಬೇಸತ್ತ ಪತ್ನಿ ಗಂಡನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾಳೆ. ಈ ವೇಳೆ ಆತ ತನ್ನ ಗೆಳೆಯರೊಂದಿಗೆ ಪತ್ನಿ ಮಲಗಿದ್ದ ವಿಡಿಯೋ, ಹಾಗೂ ಅಶ್ಲೀಲ ಪೋಟೊ ವೈರಲ್‌ ಮಾಡುವುದಾಗಿ ಬ್ಲಾಕ್‌ ಮೇಲ್‌ ಮಾಡುತ್ತಿದ್ದನು

ಇದನ್ನೂ ಓದಿ : Karnataka weather report: ಕರ್ನಾಟಕದಲ್ಲಿ 5 ದಿನ ಮಳೆ: ತಮಿಳುನಾಡಿನಲ್ಲಿ ರೆಡ್‌ ಅಲರ್ಟ್‌ ಘೋಷಣೆ.

ಇದನ್ನೂ ಓದಿ : IT Ride: ತೆರಿಗೆ ವಂಚನೆ ಆರೋಪದಲ್ಲಿ ಬೆಂಗಳೂರಿನ ಹಲವೆಡೆ ಐಟಿ ದಾಳಿ

ಇಷ್ಟಕ್ಕೆ ಮುಗಿಯದೆ ತನ್ನ ಮಧ್ಯವ್ಯಸನದ ಪ್ರಭಾವ ಹೆಚ್ಚಿಸಕೊಳ್ಳಲೆಂದು ಗಾಂಜಾ ಸೇವನೆಯನ್ನೂ ಕೂಡ ಮಾಡುತ್ತಿದ್ದ. ಮನೆಯಲ್ಲಿಯೇ ಗಾಂಜಾ ಸಸಗಳನ್ನು ನೆಟ್ಟು ಬೆಳೆಸಿ ಗಾಂಜಾ ವ್ಯಸನ ಮಾಡುತ್ತಿದ್ದನು ಎನ್ನಲಾಗಿದೆ. ಈ ಎಲ್ಲಾ ವಿಕೃತಿಗಳನ್ನು ಸಹಿಸಲಾರದೆ ನೊಂದ ಪತ್ನಿ ಸಂಪಿಗೆ ಹಳ್ಳಿ ಠಾಣಾ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನ ಅನ್ವಯ ಲೈಂಗಿಕ ಕಿರುಕುಳ, ಎನ್.ಡಿ.ಪಿ.ಎಸ್ ಹಾಗೂ ಐಟಿ ಆಕ್ಟ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Husband forces wife to share the bed with friends and shoot video, a case has been registered in Bengaluru

Comments are closed.