Indian Coast Guard : ಎಂಜಿನ್ ವೈಫಲ್ಯದಿಂದ ಅಪಾಯಕ್ಕೆ ಸಿಲುಕಿದ್ದ ಹಡಗು: 8 ವಿಜ್ಞಾನಿಗಳ ಸಹಿತ 36 ಮಂದಿ ರಕ್ಷಣೆ
ಕಾರವಾರ : ಮಳೆಗಾಲದ ಸಮಯದಲ್ಲಿ ಕಡಲಿನ ಅಬ್ಬರವು ಜೋರಾಗಿದ್ದು. ಎಂಜಿನ್ ವೈಫಲ್ಯದಿಂದ (Indian Coast Guard) ಅಪಾಯಕ್ಕೆ ಸಿಲುಕಿದ್ದ ಸಿಎಸ್‌ಐಆರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಫಿ ಸಂಶೋಧನಾ ಹಡಗನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಹಡಗಿನಲ್ಲಿ 8 ಮಂದಿ ಖ್ಯಾತ ವಿಜ್ಞಾನಿಗಳು ಸೇರಿದಂತೆ ಇತರ ಸಿಬ್ಬಂದಿಗಳಿದ್ದರು.
ಉತ್ತರಕನ್ನಡ ಜಿಲ್ಲೆಯ ಕಾರವಾರದ ಸಮೀಪದಲ್ಲಿ ಆರ್‌ವಿ ಸಿಂಧೂ ಸಾಧನಾ ಎಂಬ ಹೆಸರಿನ ಹಡಗು ಎಂಜಿನ್ ವೈಫಲ್ಯದಿಂದ ಅಪಾಯಕ್ಕೆ ಸಿಲುಕಿದೆ. ಹಡಗಿನ ತೈಲ ಸೋರಿಕೆಗೆ ಕಾರಣವಾಗಬಹುದು ಎಂದು ಹಡಗಿನ ಅಧಿಕಾರಿಗಳು ಕೋಸ್ಟ್ ಗಾರ್ಡ್‌ಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ : Udupi College Toilet Video Case : ಉಡುಪಿ ಕಾಲೇಜು ಶೌಚಾಲಯದಲ್ಲಿ ಕ್ಯಾಮೆರಾ ಪ್ರಕರಣ : ಖುಷ್ಬು ಸುಂದರ್ ಮಹತ್ವದ ಮಾಹಿತಿ
ಇದನ್ನೂ ಓದಿ : Accident News : ಕಾರು – ಬೈಕ್ ಢಿಕ್ಕಿ : ಇಬ್ಬರು ವಿದ್ಯಾರ್ಥಿಗಳಿಗೆ ಗಾಯ
ಅದರಂತೆ ಕಡಲ ತೀರದಿಂದ ಸುಮಾರು 20 ನಾಟಿಕಲ್ ಮೈಲಿಗಳಷ್ಟು ದೂರದಲ್ಲಿದ್ದ ಹಡಗನ್ನು ಸಂಪರ್ಕಕ್ಕೆ ಪಡೆದು ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಈ ಆಧುನಿಕ ಸಂಶೋಧನಾ ನೌಕೆಯ 8 ಮಂದಿ ಹಿರಿಯ ವಿಜ್ಞಾನಿಗಳು, ಮೌಲ್ಯಯುತ ವೈಜ್ಞಾನಿಕ ಉಪಕರಣಗಳು ಮತ್ತು ಸಂಶೋಧನಾ ಮಾಹಿತಿ ಸೇರಿದಂತೆ 36 ಜನರನ್ನು ಹೊತ್ತೊಯ್ಯುತ್ತಿರುವುದರಿಂದ ಪರಿಸ್ಥಿತಿ ಗಂಭೀರವಾಗಿತ್ತು. ಸವಾಲಿನ ಹವಾಮಾನದ ನಡುವೆಯೂ ಐಸಿಜಿ ತಂಡವು ಸುರಕ್ಷಿತವಾಗಿ ಗೋವಾಕ್ಕೆ ಹಡಗನ್ನು ಎಳೆದೊಯ್ಯುವ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಹಡಗಿನಲ್ಲಿರುವ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Indian Coast Guard: Ship in danger due to engine failure: 36 including 8 scientists rescued
Comments are closed.