Soujanya murder case : ಸೌಜನ್ಯ ಕೊಲೆ ಪ್ರಕರಣ : ಭಕ್ತರು ಗೊಂದಲಕ್ಕೆ ಒಳಗಾಗದಂತೆ ಡಾ. ವೀರೇಂದ್ರ ಹೆಗ್ಗಡೆ ಮನವಿ

ಉಜಿರೆ : ಧರ್ಮಸ್ಥಳ ಪಾಂಗಾಳ ಸಿವಾಸಿ ಸೌಜನ್ಯ ಕೊಲೆ ಪ್ರಕರಣವು (Soujanya murder case) ಭಕ್ತಾಧಿಗಳಿಗೆ ಸಾಕಷ್ಟು ಗೊಂದಲವನ್ನು ಸೃಷ್ಟಿಸಿದೆ. ಆದರೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ತಮ್ಮ ಕ್ಷೇತ್ರಕ್ಕೆ ಬರುವ ಅಸಂಖ್ಯಾತ ಭಕ್ತರ ಬಳಿ ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.

ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರತಿಕಾ ಹೇಳಿಕೆಯಲ್ಲಿ, “ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಸುಳ್ಳು ಹೇಳಿಕೆ, ಆಪಾದನೆ, ವದಂತಿಗಳನ್ನು ಹರಡುತ್ತಿರುವುದರ ಬಗ್ಗೆ ಭಕ್ತರು ಹಾಗೂ ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. 2012ರಲ್ಲಿ ಸೌಜನ್ಯ ಹತ್ಯೆಯಾದಾಗ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶ ಹೊರಬರುವಂತೆ, ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿಬಿಐ ಮೂಲಕ ತನಿಖೆ ನಡೆಸುವಂತೆ ಧರ್ಮಸ್ಥಳದ ಪರವಾಗಿ ಮತ್ತು ನಮ್ಮ ಕುಟುಂಬದ ಪರವಾಗಿ ಒತ್ತಾಯಿಸಿದ್ದೇನೆ.

ಇದನ್ನೂ ಓದಿ : Uttara Kannada News‌ : ಮೊಬೈಲ್ ಚಾರ್ಜ್ ಹಾಕುವ ಮುನ್ನ ಎಚ್ಚರ ‌! ಚಾರ್ಜರ್ ಪಿನ್ ಬಾಯಿಗೆ ಹಾಕಿಕೊಂಡ ಮಗು ಸಾವು

ಸರಕಾರವು ಸಿಬಿಐ ತನಿಖೆಗೆ ಆದೇಶಿಸಿತ್ತು. ತನಿಖೆ ನಡೆಸಿದ ಸಿಬಿಐ ಆರೋಪಿ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಲಯಕ್ಕೆ ಸಲ್ಲಿಸಿರುತ್ತದೆ. ಬಳಿಕ ನ್ಯಾಯಲಯವು ವಿಚಾರಣೆ ನಡೆಸಿ ಆರೋಪಿಯನ್ನು ಖುಲಾಸೆಗೊಳಿಸಿದೆ. ನಂತರ ಕೆಲವು ವ್ಯಕ್ತಿಗಳು ಧರ್ಮಸ್ಥಳ ಹಾಗೂ ನಮ್ಮ ಕುಟುಂಬವನ್ನು ಗುರಿಯಾಗಿಸಿ ಸುಳ್ಳು ಆರೋಪ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದರಿಂದ ಕ್ಷೇತ್ರದ ಭಕ್ತರಲ್ಲಿ ಹಾಗೂ ಸಾರ್ವಜನಿಕರಿಗೆ ಬೇಸರ ಉಂಟಾಗುವಂತೆ ಮಾಡಿದೆ. ಭಕ್ತರು ಗೊಂದಲಕ್ಕೆ ಒಳಗಾಗಬಾರದು” ಎಂದು ಮನವು ಮಾಡಿಕೊಂಡಿದ್ದಾರೆ.

Soujanya murder case: Dr. D Virendra Heggade appealed to the devotees not to get confused.

Comments are closed.