ನಿತ್ಯಭವಿಷ್ಯ : 08-02-2020

0

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಪಂಡಿತ್ : ವಾದಿರಾಜ್ ಭಟ್
9743666601

ಮೇಷ ರಾಶಿ : ನೀವು ಅಂದುಕೊಂಡಿದ್ದಕ್ಕಿಂತ ಬೇಗನೆ ನಿಮ್ಮ ಕಾರ್ಯ ಯೋಜನೆಗಳು ಮುಗಿಯುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ಸುತ್ತಮುತ್ತಲೂ ಪ್ರಭಾವಿ ಜನರ ಹಸ್ತಕ್ಷೇಪ ಇರುತ್ತದೆ. ಇದರಿಂದ ನಿಮಗೆ ಒಳಿತೇ ಅಗುವುದು. ಅಗತ್ಯಕ್ಕಿಂತ ಹೆಚ್ಚು ಹಣ ಖರ್ಚಾಗುವ ಸಂದರ್ಭ ಇದೆ. ದೂರದಿಂದ ನೆಂಟರು ದಿಢೀರನೆ ಮನೆಗೆ ಆಗಮಿಸುವ ಸಾಧ್ಯತೆ ಇದೆ. ಬಹುದಿನಗಳ ನಂತರ ಮನಸ್ಸಿನ ದುಃಖವನ್ನು ಪರರ ಮುಂದೆ ತೋಡಿಕೊಳ್ಳುವಿರಿ. ಇದರಿಂದ ಮನಸ್ಸು ಹಗುರ ಆಗುವುದು.

ವೃಷಭ ರಾಶಿ : ಸರ್ರನೆ ಮನಸ್ಸಿಗೆ ಬಂದಿದ್ದನ್ನು ಕಾರ್ಯಗತಗೊಳಿಸಬೇಡಿ. ಸದ್ಯದ ಪರಿಸ್ಥಿತಿಯಲ್ಲಿ ನೀವು ಅಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. ಮಾತಿನಲ್ಲಿ ಹಿಡಿತವಿರಲಿ. ಮಾತಿಗೆ ಮಾತು ಬೆಳೆದು ತೀವ್ರವಾದ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇರುವುದು. ಹಾಗಾಗಿ ಮಾತಿನಲ್ಲಿ ಸೋತು ಎದುರಾಳಿಯ ಹೃದಯವನ್ನು ಗೆಲ್ಲುವ ಚಾಕಚಕ್ಯತೆಯನ್ನು ತೋರಿ. ಶಾಂತಿಯಿಂದ ಕಾರ್ಯ ನಿರ್ವಹಿಸಿ.

ಮಿಥುನ ರಾಶಿ : ನಿಮ್ಮನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಸಹೋದರ, ಸಹೋದರಿಯರು ಸಹಾಯ ಮಾಡುವರು. ಆದಾಗ್ಯೂ ಮನಸ್ಸಿನ ಅವ್ಯಕ್ತ ಭಯ ನಿವಾರಣೆಗಾಗಿ ಮನೋನಿಯಾಮಕ ರುದ್ರದೇವರನ್ನು ಭಜಿಸಿ. ವಿರೋಧಿಗಳು ಕಣ್ಣಾಮುಚ್ಚಾಲೆ ಆಟ ಆಡುವುದು ಇದ್ದಿದ್ದೆ. ಗ್ರಹಗಳು ಕೆಟ್ಟಾಗ ಮಡದಿ ಮಕ್ಕಳೇ ಮಾತು ಕೇಳದ ಪರಿಸ್ಥಿತಿಯಿರುತ್ತದೆ. ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ನೀವು ನಂಬಿದ ದೈವವನ್ನು ಮನಸಾರೆ ಸ್ಮರಿಸಿ.

ಕಟಕ ರಾಶಿ : ಸ್ವಾಭಿಮಾನ ಮತ್ತು ದುರಾಭಿಮಾನಗಳಿಗೆ ಕೂದಲೆಳೆ ಅಂತರ ಮಾತ್ರ. ನೀವು ಅತಿ ಚಾಣಾಕ್ಷ ಮತಿ ಎಂದು ಎಲ್ಲರೂ ಬಲ್ಲರು. ಆದರೆ ಅದೇ ನಿಮಗೆ ಅಹಂಕಾರವಾಗಬಾರದು. ಹಾಗಾಗಿ ಸಾರ್ವತ್ರಿಕವಾಗಿ ತಲೆಬಾಗಿ ನಡೆಯುವುದು ಕ್ಷೇಮ.ಜನರು ನಿಮ್ಮನ್ನು ಹಿಂದಿನಿಂದ ಟೀಕಿಸುತ್ತಾರೆ ಎಂಬ ಪೂರ್ವಗ್ರಹಿಕೆ ಇಟ್ಟುಕೊಳ್ಳದೆ ಕಾರ್ಯ ಪ್ರವೃತ್ತರಾಗಿ. ಟೀಕಿಸುವ ಜನ ಯಾವಾಗಲೂ ಇರುತ್ತಾರೆ. ಅವರ ಟೀಕೆಯಲ್ಲಿನ ಧನಾತ್ಮಕ ಗುಣಗಳನ್ನು ಅಳವಡಿಸಿಕೊಂಡು ಅವರ ಬಾಯಿಗೆ ಬೀಗ ಹಾಕಿ

ಸಿಂಹ ರಾಶಿ : ಹಣದ ಮುಗ್ಗಟ್ಟು ಉಂಟಾಗುವುದಿಲ್ಲ. ಆದರೆ ಅನವಶ್ಯಕ ಸಂಗತಿಗಳಿಗೆ ಹಣ ವ್ಯಯಿಸುವುದನ್ನು ನಿಲ್ಲಿಸುವುದು ಪ್ರಮುಖ ಕರ್ತವ್ಯವಾಗಿರುತ್ತದೆ. ಈ ಬಗ್ಗೆ ಮನೆಯ ಸದಸ್ಯರು ಕೂಡ ಸಹಕರಿಸುವರು. ಅಡಿಕೆ ಕದ್ದ ಮಾನ ಆನೆ ಕೊಟ್ಟರೂ ಹೋಗದು ಎಂಬ ಗಾದೆ ಮಾತಿನಂತೆ ನಿಮ್ಮ ವ್ಯವಹಾರದಲ್ಲಿನ ಕಿಂಚಿತ್ ಲೋಪವು ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಸಾಧ್ಯತೆ ಇರುತ್ತದೆ. ಕುಲದೇವರ ಮೊರೆ ಹೋಗುವುದು ಒಳ್ಳೆಯದು.

ಕನ್ಯಾ ರಾಶಿ : ಭವಿಷ್ಯದ ಬಗೆಗಿನ ಅತಂತ್ರಗಳಿಗೆ ವಿರಾಮ ಸಿಗುವ ಸಾಧ್ಯತೆ ಇದೆ. ಮನೆಯ ಹಿರಿಯರೊಬ್ಬರ ಸಹಾಯ, ಸಹಕಾರ ದೊರೆಯಲಿದ್ದು ಸರ್ಕಾರದ ವತಿಯಿಂದ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳುವಂತೆ ಆದೇಶ ಕೈ ಸೇರುವುದು.ಮುಂದಿನ ದಿನಗಳ ಬಗ್ಗೆ ಮುಂದಾಲೋಚನೆ ಮಾಡಬಾರದು ಎಂಬುದೇನಿಲ್ಲ. ಆದರೆ ನಾಳೆಯ ಊಟವನ್ನು ಇಂದೇ ಮಾಡಿ ಮುಗಿಸಲು ಸಾಧ್ಯವಿಲ್ಲ. ಹಾಗಾಗಿ ಇಂದಿನ ಕಾರ್ಯಕ್ರಮವನ್ನು ಹೇಗೆ ಶಿಸ್ತುಬದ್ಧವಾಗಿ ಪೂರ್ಣಗೊಳಿಸಬಹುದು ಎಂಬುದರ ಬಗ್ಗೆ ಚಿಂತಿಸಿ.

ತುಲಾ ರಾಶಿ : ನಿಶ್ಚಯವಾದ ಯಶಸ್ಸಿಗೆ ಕಲ್ಲುಹಾಕುವವರಿದ್ದಾರೆ. ಎಚ್ಚರದ ಹೆಜ್ಜೆಯೇ ನಿಮ್ಮ ಗುರಿಯಾಗಿರಲಿ. ನಿಮ್ಮ ಮುಂದೆ ಆಡಿಕೊಂಡ ವ್ಯಕ್ತಿಗಳು ನಿಮ್ಮ ಕಾರ್ಯವೈಖರಿಯನ್ನು ನೋಡಿ ಬೆರಗಾಗುವರು. ನಿಮ್ಮದೇ ಆದ ಗುರಿ ತಲುಪುವಲ್ಲಿಗೆಳೆಯರ ವಿಶೇಷ ಬೆಂಬಲ ಲಭ್ಯವಾಗಲಿದೆ. ಮನಸ್ಸನ್ನು ಸಮಾಧಾನ ಮಾಡಿಕೊಳ್ಳಿ. ವಿವಿಧ ಮೂಲಗಳಿಂದ ಹಣಕಾಸು ಬರುವುದರಿಂದ ಒಳಿತಾಗುವುದು.

ವೃಶ್ಚಿಕ ರಾಶಿ :ಮನಸ್ಸು ಬೇಡದ ವಿಚಾರಗಳತ್ತಲೇ ಗಿರಕಿ ಹೊಡೆಯುತ್ತಿರುವುದರಿಂದ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಆಗುತ್ತಿಲ್ಲ. ಮನೋನಿಯಾಮಕ ರುದ್ರದೇವರನ್ನು ಭಜಿಸಿ. ಸೋಮವಾರ ಈಶ್ವರ ದೇವಾಲಯದಲ್ಲಿರುದ್ರಾಭಿಷೇಕ ಮಾಡಿಸಿ. ನಿಮ್ಮ ಹತ್ತಿರದ ಸಂಬಂಧಿಗಳು ಚುಚ್ಚಿ ಚುಚ್ಚಿ ಮಾತನಾಡಿ ನಿಮ್ಮನ್ನು ಕೆರಳಿಸುವ ಸಾಧ್ಯತೆ ಇದೆ. ಆದರೆ ಅವರ ಮಾತಿಗೆ ಉತ್ತರ ಕೊಡದೆ ಸುಮ್ಮನಿರಿ. ನಿಮ್ಮ ಮನೋಕಾಮನೆಗಳು ಭಗವಂತನ ದಯೆಯಿಂದ ನೆರವೇರುವುದು.

ಧನಸ್ಸು ರಾಶಿ : ಸ್ವಚ್ಛತೆಯೇ ದೇವರು ಎಂದರು ಅನುಭಾವಿಗಳು. ಅಂತೆಯೇ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಕಸ ಮತ್ತು ಕೊಳೆಯಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಿ. ಇದರಿಂದ ಮನಸ್ಸು ಖುಷಿ ಅನುಭವಿಸುವುದು ಮತ್ತು ಸುತ್ತಮುತ್ತಲು ಸ್ವಚ್ಛತೆ ಇರುವುದು.ತಾಳ್ಮೆಯಿಂದ ಇರುವುದು ಸೋಲಲ್ಲ. ಬದುಕಿನ ಘನತೆಗಾಗಿ ಬೇಕಾದಂತಹ ತಾಳ್ಮೆಯನ್ನು ಸಂಪಾದಿಸಿ ಗೆಲ್ಲುವಿರಿ. ಪ್ರಯಾಣ ಕಾಲದಲ್ಲಿ ಎಚ್ಚರ ಇರಲಿ. ಸಣ್ಣ ಪುಟ್ಟ ಪೆಟ್ಟುಗಳು ಆಗುವ ಸಾಧ್ಯತೆ ಇದೆ. ಮನೋನಿಯಾಮಕ ರುದ್ರದೇವರನ್ನು ಭಜಿಸಿ.

ಮಕರ ರಾಶಿ : ವಿನಾಕಾರಣ ಅನೀರಿಕ್ಷಿತ ಬೆಳವಣಿಗೆಯೊಂದು ಸಂಭವಿಸಿ ಕೂಡಿಟ್ಟ ಹಣಕ್ಕೆ ಸಂಚಕಾರ ಬರುವುದು. ವಿಪರೀತವಾಗಿ ಹಣ ಕೈಬಿಡುವುದು. ಈ ಬಗ್ಗೆ ಎಚ್ಚರದಿಂದ ಇರಿ. ಬೇರೊಬ್ಬರ ವ್ಯವಹಾರದಲ್ಲಿಜಾಮೀನು ಪತ್ರಕ್ಕೆ ಸಹಿ ಹಾಕದಿರಿ. ಬೇಕಿರದ ಮಾತುಗಳನ್ನೇ ಆಡಿ ತಮಾಷೆ ನೋಡುವಂತಹ ಮಂದಿಯನ್ನು ದೂರವಿಡಿ. ಇದರಿಂದ ನಿಮ್ಮ ವರ್ಚಸ್ಸು ಗೌರವ ಹೆಚ್ಚುವುದು. ಆರ್ಥಿಕ ಸ್ಥಿತಿ ಸದೃಢವಾಗಿರುವುದು

ಕುಂಭ ರಾಶಿ : ಕಾರಣವಿಲ್ಲದ ಆರೋಪವನ್ನು ನಿಮ್ಮ ಮೇಲೆ ಹೊರಿಸಿ ಮನೋಬಲ ಕುಗ್ಗಿಸುವವರ ಬಗ್ಗೆ ಎಚ್ಚರದಿಂದ ಇರಿ. ತಲೆನೋವು ಮುಂತಾದ ತೊಂದರೆಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ‘ಸಕಲಗ್ರಹಬಲ ನೀನೇ ಸರಸಿಜಾಕ್ಷ’ಎಂದು ಭಗವಂತನ ಮೊರೆ ಹೋಗುವುದರಿಂದ ಬಂದಂತಹ ಆಪತ್ತು ದೂರವಾಗುವುದು. ಭಗವಂತನನ್ನು ಆರಾಧಿಸುವ ಮೂಲಕ ಇಚ್ಛಿತ ಕಾರ್ಯಗಳನ್ನು ಪೂರ್ಣಗೊಳಿಸಿಕೊಳ್ಳುವಿರಿ.

ಮೀನ ರಾಶಿ : ಹಿರಿಯರ ಆಶೀರ್ವಾದದ ಫಲವಾಗಿ ಮನಃಸ್ಥೆತ್ರೖರ್ಯ ಸಂಪಾದಿಸಿಕೊಂಡು ಜೀವನದಲ್ಲಿಗೆಲ್ಲಲು ಮುಂದಾಗುವಿರಿ. ಅದಕ್ಕೆ ಸುತ್ತಮುತ್ತಲಿನ ವಾತಾವರಣ ನಿಮಗೆ ಸಹಕಾರಿಯಾಗಿ ನಿಲ್ಲುವುದು. ಆರೋಗ್ಯದ ಕಡೆ ಸ್ವಲ್ಪ ಗಮನ ಹರಿಸಿ. ನಿಮ್ಮ ಮನಸ್ಸು ಪ್ರಸನ್ನತೆಯಲ್ಲಿಇರಲಿ. ಭೀಮಬಲ ಸಂಪ್ರಾಪ್ತಿಯಿಂದ ಎಲ್ಲಾಕೆಲಸ ಕಾರ್ಯಗಳಲ್ಲಿಯಶಸ್ಸು ದೊರೆಯುವುದು. ನಿಮ್ಮ ಹೆಚ್ಚಿನ ಸಂತೋಷಕ್ಕೆ ಮಕ್ಕಳು ಮತ್ತು ಮೊಮ್ಮಕ್ಕಳು ಕಾರಣೀಭೂತರಾಗುವರು. ಅವರಿಗೆ ಶುಭ ಹಾರೈಸುವಿರಿ.

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಪಂಡಿತ್ :-ವಾದಿರಾಜ್ ಭಟ್
9743666601

Leave A Reply

Your email address will not be published.