ಮಂಗಳೂರು : ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿರುವ 78 ವರ್ಷದ ವೃದ್ದ ಮಹಿಳೆಯ ಅಂತ್ಯಕ್ರಿಯೆಗೆ ಮಂಗಳೂರು ಸಮೀಪದ ಪಚ್ಚನಾಡಿ ಗ್ರಾಮಸ್ಥರು ಹಾಗೂ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕಸಬಾ ಪೇಟೆಯ ನಿವಾಸಿಯಾಗಿರೋ ವೃದ್ದ ಮಹಿಳೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ವೃದ್ದೆಯನ್ನು ಮಂಗಳೂರು ಬಳಿಯ ಪಚ್ಚನಾಡಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ಜಿಲ್ಲಾಡಳಿತ ಸಿದ್ದತೆಗಳನ್ನು ಮಾಡಿಕೊಂಡಿತ್ತು.

ಆದ್ರೆ ಅಂತ್ಯಕ್ರಿಯೆ ನಡೆಸಲು ಪಚ್ಚನಾಡಿ ಗ್ರಾಮಸ್ಥರು ಹಾಗೂ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಅಂತ್ಯಕ್ರಿಯೆ ನಡೆಸಲು ಬಿಡುವುದಿಲ್ಲ ಎಂದಿದ್ದಾರೆ.

ಒಂದೊಮ್ಮೆ ಜನರು ಒಪ್ಪಿದರೆ ಮಾತ್ರವೇ ಅಂತ್ಯಕ್ರಿಯೆ ನಡೆಸಬಹುದು ಎಂದು ಭರತ್ ಶೆಟ್ಟಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಜಿಲ್ಲಾಡಳಿತ ನಿವಾಸಿಗಳ ಮನವೊಲಿಕೆಯ ಕಾರ್ಯವನ್ನು ಮಾಡುತ್ತಿದೆ.