ವಿಟ್ಲ : ಲಾಕ್ ಡೌನ್ ನಿಂದಾಗಿ ಕಂಗೆಟ್ಟಿದ್ದ ಸುಮಾರು 50 ಕುಟುಂಬಗಳಿಗೆ ಕೇಪು ಮೈರ ಶ್ರೀದುರ್ಗಾ ಮಿತ್ರ ವೃಂದದ ಸಹಾಯಹಸ್ತ ಚಾಚಿದೆ. 5೦ಕ್ಕೂ ಅಧಿಕ ಕುಟುಂಬಕ್ಕೆ ತಲಾ 2೦ಕೆ ಜಿ ಅಕ್ಕಿ, 2ಕೆಜಿ ಸಕ್ಕರೆ, 500 ಗ್ರಾಂ ಮೆಣಸು, 250 ಗ್ರಾಂ ಚಾ ಪುಡಿ, 1 ಪ್ಯಾಕೆಟ್ ಉಪ್ಪು, ನಾಲ್ಕು ಸಾಬೂನು ಒಳಗೊಂಡ ಕಿಟ್ ವಿತರಣೆಯನ್ನು ಮಾಡಲಾಯಿತು.

ಮೈರ ಶ್ರೀದುರ್ಗಾ ಮಿತ್ರ ವೃಂದದ ಅಧ್ಯಕ್ಷ ಅಶೋಶ್ ಎ. ಇರಾಮೂಲೆ, ಪ್ರಧಾನ ಕಾರ್ಯದರ್ಶಿ ಶೀನ ನಾಯ್ಕ ಕಲ್ಲಪಾಪು, ಕೋಶಾಧಿಕಾರಿ ಪುರುಷೋತ್ತಮ ಮೈರ ಪುತ್ತೂರು, ಉಪಾಧ್ಯಕ್ಷರಾದ ಪುರುಷೋತ್ತಮ ಗೌಡ ಕಲ್ಲಂಗಳ, ರಾಜೇಶ್ ಕರವೀರ, ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಕರವೀರ, ಗೌರವಾಧ್ಯಕ್ಷ ಜಗಜ್ಜೀವನರಾಮ್ ಶೆಟ್ಟಿ, ಶಿಸ್ತು ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಬೇಂಗ್ರೋಡಿ, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಪೆಲತ್ತಡಿ, ತುಳುನಾಡ ಪೈಟರ್ಸ್ ಅಧ್ಯಕ್ಷ ಸುಧಾಕರ ಪೂಜಾರಿ ಬಡಕ್ಕೋಡಿ, ಉದ್ಯಮಿ ಗೋವಿಂದರಾಯ ಶೆಣೈ, ಕೇಪು ಗ್ರಾಮ ಪಂಚಾಯಿತಿಯ ಸುರೇಶ್ ನಾಯ್ಕ್ ಕೋಡಂದೂರು ಮತ್ತಿತರರು ಉಪಸ್ಥಿತರಿದ್ದರು.