ಸ್ವಿಟ್ಜರ್ಲ್ಯಾಂಡ್ : ದಾವೋಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಪೋರಂ ಸಮಾವೇಶದಲ್ಲಿ ಭಾಗಿಯಾಗಲು ತೆರಳಿರೋ ಮುಖ್ಯಮಂತ್ರಿ ಯಡಿಯೂರಪ್ಪ ಇದೀಗ ಸ್ಟೈಲಿಶ್ ವಾಕ್ ನಿಂದ ಸುದ್ದಿಯಾಗಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನೊಳಗೊಂಡ ನಿಯೋಗ 5 ದಿನಗಳ ಕಾಲ ಸ್ವಿಟ್ಜರ್ಲ್ಯಾಂಡ್ ಪ್ರವಾಸ ಕೈಗೊಂಡಿದೆ. ಸಮಾವೇಶದ ನಂತರ ಯಡಿಯೂರಪ್ಪ ಅವರು ದಾವೋಸ್ ನಲ್ಲಿ ಒಂದು ಸುತ್ತು ವಾಕ್ ಮಾಡಿದ್ದಾರೆ. ವಾಕಿಂಗ್ ವೇಳೆಯಲ್ಲಿ ಯಡಿಯೂರಪ್ಪ ಅವರು ಕೈಗೆ ಗ್ಲೌಸ್, ಗಾಗಲ್ಸ್, ಪುಲ್ ಕೋಟ್, ಕ್ಯಾಪ್ ಹಾಗೂ ಶಾಲು ಹಾಕಿಕೊಂಡು ಸಕತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಚುಮುಚುಮು ಚಳಿಯಲ್ಲಿ ವಾಕಿಂಗ್ ಮಾಡ್ತಿದ್ದ ಯಡಿಯೂರಪ್ಪ ಹಾಲಿವುಡ್ ಸ್ಟಾರ್ ನಂತೆ ಬಾಸವಾಗುತ್ತಿದ್ರು. ವಾಕ್ ಮಾಡಿರೋ ಪೋಟೋವನ್ನು ಮುಖ್ಯಮಂತ್ರಿಗಳ ಅಧಿಕೃತ ಪೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗಿದೆ.
