(Grated Mango Pickle Recipe)ಎಲ್ಲೇ ಹೋದರು ಊಟ ಬಡಿಸುವ ಮೊದಲು ಉಪ್ಪಿನಕಾಯಿ ಹಾಕುತ್ತಾರೆ. ಊಟದ ಜೊತೆ ಒಳ್ಳೆ ಕಾಂಬಿನೇಷನ್ ಎಂದರೆ ಉಪ್ಪಿನಕಾಯಿ ಎನ್ನಬಹುದು . ಹೆಚ್ಚಾಗಿ ಮನೆಯಲ್ಲಿ ಮಾವಿನ ಮಿಡಿಯ ಉಪ್ಪಿನಕಾಯಿ ಮಾಡಿ ಭರಣಿಯಲ್ಲಿ ಶೇಖರಿಸಿ ಇಡುತ್ತಾರೆ. ಅಷ್ಟೇ ಅಲ್ಲದೆ ಜನರ ಬೇಡಿಕೆಯಂತೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಉಪ್ಪಿನಕಾಯಿ ಸಿಗುತ್ತದೆ. ಸಾಮಾನ್ಯವಾಗಿ ಮಾವಿನ ಮಿಡಿಯ ಉಪ್ಪಿನಕಾಯಿ ಮಾಡುತ್ತಾರೆ ಆದರೆ ಮಾವಿನ ಕಾಯಿಯನ್ನು ತುರಿದು ಉಪ್ಪಿನಕಾಯಿ ಮಾಡುವುದು ಯಾರಿಗು ತಿಳಿದಿರುವುದಿಲ್ಲ. ತುರಿದ ಮಾವಿನ ಉಪ್ಪಿನಕಾಯಿ ಹೇಗೆ ಮಾಡುವುದು ಎಂಬ ಮಾಹಿತಿಯ ಕುರಿತು ತಿಳಿಯೋಣ.
(Grated Mango Pickle Recipe)ಬೇಕಾಗುವ ಸಾಮಾಗ್ರಿಗಳು:
- ಮಾವಿನ ಕಾಯಿ
- ಸಕ್ಕರೆ
- ಉಪ್ಪು
- ಕಾರದಪುಡಿ
- ಗರಂ ಮಸಾಲೆ
- ಜೀರಿಗೆ
ಮಾಡುವ ವಿಧಾನ
ಮೊದಲಿಗೆ ಮಾವಿನ ಕಾಯಿಯನ್ನು ತುರಿದು ಬೌಲ್ ನಲ್ಲಿ ಹಾಕಿ ಇಟ್ಟುಕೊಳ್ಳಬೇಕು. ನಂತರ ಬಾಣಲೆಯಲ್ಲಿ ತುರಿದ ಮಾವಿನಕಾಯಿ, ಸಕ್ಕರೆ, ಉಪ್ಪು, ಕಾರದ ಪುಡಿ, ಗರಂ ಮಸಾಲೆ, ಹುರಿದುಕೊಂಡ ಜೀರಿಗೆ ಹಾಕಿ ಮಿಶ್ರಣ ಮಾಡುತ್ತಾ ಸೌಟನ್ನು ಆಡಿಸಿ ಗ್ಯಾಸ್ ಆಫ್ ಮಾಡಿಕೊಂಡು ಬಿಸಿ ಆರಿದ ಮೇಲೆ ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಂಡರೆ ಊಟದ ಜೊತೆ ಸವಿಯಲು ಮಾವಿನ ಉಪ್ಪಿನಕಾಯಿ ರೆಡಿ.
ಇದನ್ನೂ ಓದಿ:Amla Murabba Recipe:ನೆಲ್ಲಿಕಾಯಿ ಮುರಬ್ಬ ತಿಂದ್ರೆ ಹೆಚ್ಚುತ್ತೆ ರೋಗ ನಿರೋಧಕ ಶಕ್ತಿ
ಇದನ್ನೂ ಓದಿ:Shankha Pushpa dosa recipe:ಶಂಖ ಪುಷ್ಪ ದೋಸೆಯಿಂದ ಹೆಚ್ಚುತ್ತೆ ಮಕ್ಕಳ ನೆನಪಿನ ಶಕ್ತಿ
ಇದನ್ನೂ ಓದಿ:Ginger Chocolate Recipe:ಕೆಮ್ಮಿನಿಂದ ನಿಮ್ಮ ಮಕ್ಕಳು ನಿದ್ದೆ ಮಾಡ್ತಿಲ್ವಾ? ಹಾಗಾದ್ರೆ ಶುಂಠಿ ಚಾಕಲೇಟ್ ಮಾಡಿ ಕೊಡಿ
ಮಾವಿನ ಕಾಯಿ
ಮಾವಿನ ಕಾಯಿ ರುಚಿಗಷ್ಟೇ ಅಲ್ಲದೆ ನಮ್ಮ ದೇಹದ ಜೀರ್ಣಶಕ್ತಿಯನ್ನು ಹೆಚ್ಚು ಮಾಡುವಂತಹ ನಾರಿನ ಅಂಶಗಳು, ಪ್ರೋಟಿನ್ ಅಂಶ ಹೆಚ್ಚಾಗಿವೆ. ಆದ್ದರಿಂದ ಇದನ್ನು ಮೀತವಾಗಿ ತಿನ್ನುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮಾವಿನ ಕಾಯಿ ತಿನ್ನುವುದರಿಂದ ನಮ್ಮ ದೇಹದಲ್ಲಿ ಕೊಬ್ಬಿನ ಆಂಶ ಶೇಖರಣೆ ಆಗದಂತೆ ನೋಡಿಕೊಳ್ಳುತ್ತದೆ. ಇದರ ಜೊತೆಗೆ ದೇಹದ ತಾಪಮಾನವನ್ನು ಹೆಚ್ಚು ಮಾಡುತ್ತದೆ. ಮಾವಿನಕಾಯಿ ತಿನ್ನುವುದರಿಂದ ವಸಡಿನ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ. ಮಾವಿನಕಾಯಿ ತಿನ್ನುವುದರಿಂದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಮಾವಿನಕಾಯಿ ವಿಟಮಿನ್ ಸಿ ಅಂಶವನ್ನು ಹೇರಳವಾಗಿ ಹೊಂದಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವಂತೆ ಮಾಡುತ್ತದೆ. ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡುವ ಕೆಲಸವನ್ನು ಮಾಡುತ್ತದೆ. ವಿಟಮಿನ್ ಎ ಕೂಡ ಹೆರಳವಾಗಿ ಇರುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಕಣ್ಣಿನ ಪೊರೆ, ರಾತ್ರಿ ಕುರುಡು ಬಾರದಂತೆ ಕಣ್ಣಿನ ರಕ್ಷಣೆಯನ್ನು ಮಾಡುತ್ತದೆ.
Grated Mango Pickle Recipe eat taste of Grated mango pickle
Comments are closed.