ಅನ್ನ ತಿನ್ನೋದ್ರಿಂದ ಇಷ್ಟೇ ಅಲ್ಲಾ ಸಮಸ್ಯೆ ಇದೆಯಾ !!! ಅನ್ನದಿಂದ ರೋಗವೋ, ಅನಾರೋಗ್ಯವೋ ?

Rice Healthy or Bad  : ದಿನ ನಿತ್ಯದ ಬಳಕೆಯಲ್ಲಿ ಅನ್ನ (Rice) ವನ್ನು ತಿನ್ನುವವವರೇ ಅಧಿಕ. ಅದ್ರಲ್ಲೂ ದಕ್ಷಿಣ ಭಾರತದ ಜನರ ಪ್ರಮುಖ ಆಹಾರವೇ ಅನ್ನ.‌ ಆದರೆ ಈ ಅನ್ನ ತಿಂದ್ರೆ ರೋಗ ಬರುತ್ತಂತೆ. ಹೌದು ಅನ್ನುತ್ತಿದ್ದಾರೆ ತಜ್ಞರ ವೈದ್ಯರು. ಹಾಗಾದ್ರೆ ಅನ್ನ ತಿನ್ನೋದ್ರಿಂದ ರೋಗವೋ, ಆರೋಗ್ಯವೋ ಅನ್ನೋ ಕುರಿತು ಖ್ಯಾತ ವೈದ್ಯರಾದ ಡಾ.ರಾಜುಕೃಷ್ಣಮೂರ್ತಿ ಅವರು ಹೇಳಿದ್ದು ಹೀಗೆ.

Rice Healthy or Bad  : ದಿನ ನಿತ್ಯದ ಬಳಕೆಯಲ್ಲಿ ಅನ್ನ (Rice) ವನ್ನು ತಿನ್ನುವವವರೇ ಅಧಿಕ. ಅದ್ರಲ್ಲೂ ದಕ್ಷಿಣ ಭಾರತದ ಜನರ ಪ್ರಮುಖ ಆಹಾರವೇ ಅನ್ನ.‌ ಆದರೆ ಈ ಅನ್ನ ತಿಂದ್ರೆ ರೋಗ ಬರುತ್ತಂತೆ. ಹೌದು ಅನ್ನುತ್ತಿದ್ದಾರೆ ತಜ್ಞರ ವೈದ್ಯರು. ಹಾಗಾದ್ರೆ ಅನ್ನ ತಿನ್ನೋದ್ರಿಂದ ರೋಗವೋ, ಆರೋಗ್ಯವೋ ಅನ್ನೋ ಕುರಿತು ಖ್ಯಾತ ವೈದ್ಯರಾದ ಡಾ.ರಾಜುಕೃಷ್ಣಮೂರ್ತಿ (Dr. Raju Krishnamoorthi)  ಅವರು ಹೇಳಿದ್ದು ಹೀಗೆ.

Rice Healthy or Bad for You here is Complete Details Dr Raju Krishnamoorthy Kannada Health tips 
Image Credit to Original Source

ಇತ್ತೀಚಿನ ದಿನಗಳಲ್ಲಿ ಬಹುತೇಕು ಅನ್ನ ತಿಂದ್ರೆ ಕಾಯಿಲೆ ಬರುತ್ತಾ ಅಂತಾ ಕೇಳುವವರೇ ಹೆಚ್ಚು. ಅನ್ನ ತಿಂದ್ರೆ ಮಧುಮೇಹ ಬರುತ್ತೆ ಅಂತಾ ವೈದ್ಯರು ಹೇಳುತ್ತಿದ್ದಾರೆ. ಹಾಗಾದ್ರೆ ಅನ್ನತಿಂದ್ರೆ ಅನಾರೋಗ್ಯ ಬರುತ್ತಾ ಅಂತಾ ನೋಡೋದಾದ್ರೆ. ಪ್ರಾಚೀನ ಕಾಲದಿಂದಲೂ ಅನ್ನ ಪ್ರಮುಖ ಆಹಾರವಾಗಿ ಬಳಕೆಯಲ್ಲಿದೆ. ತಿನ್ನುವ ಎಲ್ಲಾ ಆಹಾರವನ್ನೂ ಕೂಡ ಅನ್ನ ಅಂತಾನೇ ಜನರು ಕರೆಯುತ್ತಿದ್ದರು.

ಅನ್ನ ತಿನ್ನುವುದರಿಂದ ಆರೋಗ್ಯ ವೃದ್ದಿಸುತ್ತೆ ಅನ್ನೋದು ಪ್ರಾಚೀನ ಕಾಲದಿಂದಲೂ ಜನರು ದೇವರ ರೂಪದಂತೆ ಅನ್ನವನ್ನು ನೋಡುತ್ತಿದ್ದಾರೆ. ಇದೇ ಕಾರಣಕ್ಕೆ ಭಾರತೀಯ ಸಂಪ್ರದಾಯದಲ್ಲಿ ಇಂದಿಗೂ ಅನ್ನಕ್ಕೆ ಕೈ ಮುಗಿದು ಊಟ ಮಾಡುವ ಪದ್ದತಿ ಜಾರಿಯಲ್ಲಿದೆ. ಆದರೆ ನಾವಿಂದು ತಿನ್ನುವ ಅನ್ನ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ.

ಹೌದು, ಅಕ್ಕಿಯನ್ನು ಬೇಯಿಸಿದಾಗ ಸಿಗುವ ಆಹಾರವನ್ನೇ ಅನ್ನ ಅಂತಾ ನಾವೆಲ್ಲಾ ಕರೆಯುತ್ತೇವೆ. ಆದರೆ ಈ ಅಕ್ಕಿಯನ್ನು ಹಿಂದೆಲ್ಲಾ ಪಾಲಿಶ್‌ ಇಲ್ಲದೇ ಬಳಕೆ ಮಾಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅಕ್ಕಿಯ ಪದರಗಳನ್ನು ತೆಗೆದು ವೈಟ್‌ ರೈಸ್‌ ಮಾಡಿ ಉಪಯೋಗಿಸುವ ಜನರ ಸಂಖ್ಯೆಯೇ ಅತೀ ಹೆಚ್ಚಾಗಿದೆ.

ಅಕ್ಕಿಯಲ್ಲಿ ಒಟ್ಟು ಮೂರು ಪದರಗಳಿರುತ್ತದೆ. ಬ್ರ್ಯಾನ್‌ ಲೇಯರ್‌ ( Rice Bran Layer) , ಜರ್ಮ್‌ ಲೇಯರ್‌ (Rice Jurm Layer)  ಹಾಗೂ ವೈಟ್‌ ಲೇಯರ್ (Rice White Layer).‌ ಅಕ್ಕಿಯ ಹೊರ ಭಾಗದಲ್ಲಿನ ಮೊದಲ ಪದರವೇ ಬ್ರ್ಯಾನ್‌ ಲೇಯರ್‌ ಆಗಿದ್ದು, ಪಾಲಿಶ್‌ (Polished Rice)  ಮಾಡುವಾಗ ಈ ಲೇಯರ್‌ ತೆಗೆಯುತ್ತಾರೆ. ಬ್ರ್ಯಾನ್‌ ಲೇಯರ್‌ನಿಂದಲೇ ಇಂದು ರೈಸ್‌ ಬ್ರ್ಯಾನ್‌ ಆಯಿಲ್‌ ತಯಾರಿಸಿ ಮಾರಾಟ ಮಾಡುತ್ತಾರೆ.

ಇದನ್ನೂ ಓದಿ: Noni Juice : ನೋನಿ ಜ್ಯೂಸ್‌ ಕುಡಿಯೋದು ಅಪಾಯಕಾರಿ : ಮಧುಮೇಹ ನಿಯಂತ್ರಣಕ್ಕೆ ಬರೋದು ನಿಜನಾ ?

ಈ ಬ್ರ್ಯಾನ್‌ ಲೇಯರ್‌ ಆರೋಗ್ಯಕ್ಕೆ ಅತ್ಯುತ್ತಮ. ನಂತರ ಪಾಲಿಶ್‌ ಮಾಡುವ ವೇಳೆಯಲ್ಲಿ ಜರ್ಮ್‌ ಲೇಯರ್‌ ಅನ್ನು ತೆಗೆದು, ಅಂತಿಮವಾಗಿ ವೈಟ್‌ ಲೇಯರ್‌ ಮಾತ್ರವೇ ಇಡಲಾಗುತ್ತದೆ. ಆದರೆ ಈ ವೈಟ್‌ ಲೇಯರ್‌ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಮೂರು ಲೇಯರ್‌ ಹೊಂದಿರುವ ಅಕ್ಕಿಯಲ್ಲಿ ಥಯಾಮಿನ್‌, ನಯಾಸಿನ್‌, ವಿಟಮಿನ್‌ ಇ ಜೊತೆಗೆ ಮಿನರಲ್ಸ್‌ ಕೂಡ ಯಥೇಚ್ಚವಾಗಿದೆ.

Rice Healthy or Bad for You here is Complete Details Dr Raju Krishnamoorthy Kannada Health tips 
Image Credit to Original Source

ಮ್ಯಾಗನಿಸ್‌, ಮ್ಯಾಗ್ನೇಶಿಯಂ, ಜಿಂಕ್‌, ಫಾಸ್ಪರಸ್‌, ಪೊಟ್ಯಾಶಿಯಂ ಜೊತೆಗೆ ಕಾರ್ಬೋಹೈಡ್ರೇಟ್‌ ಒಳಗೊಂಡಿರುವ ಹಿನ್ನೆಲೆಯಲ್ಲಿ ಅನ್ನ ಆರೋಗ್ಯಕ್ಕೆ ಉತ್ತಮ. ಆದರೆ ಈ ಎರಡು ಲೇಯರ್‌ಗಳನ್ನು ತೆಗೆದು ವೈಟ್‌ ಲೇಯರ್‌ ಮಾತ್ರವೇ ಉಳಿಸುವ ಕಾರಣದಿಂದಾಗಿ ಅಕ್ಕಿಯಲ್ಲಿ ಕೇವಲ ಕಾರ್ಬೋಹೈಡ್ರೇಟ್‌ ಮಾತ್ರವೇ ಉಳಿದು ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: ಹೃದಯಾಘಾತ ತಡಿಯೋಕೆ ಉತ್ತಮ ಔಷಧ: ಎಳ್ಳಿನಿಂದ ಮಾಯವಾಗುತ್ತೆ ಹಲವು ರೋಗ

ಹಿಂದಿನ ಕಾಲದಲ್ಲಿನ ಜನರು ಅಕ್ಕಿಯಲ್ಲಿ ಈ ಮೂರು ಲೇಯರ್‌ಗಳನ್ನು ಬಳಕೆ ಮಾಡುತ್ತಿದ್ದರು. ಆದ್ರೀಗ ಬಾಯಿ ರುಚಿ, ಅಂದಕ್ಕಾಗಿ ವೈಟ್‌ ರೈಸ್‌ ಮಾತ್ರವೇ ಹೆಚ್ಚಾಗಿ ಬಳಕೆಯಲ್ಲಿದೆ. ಇದರಿಂದಾಗಿ ಆರೋಗ್ಯಕರವಾಗಿ ಇರುವ ಅಕ್ಕಿಯನ್ನು ತಿನ್ನುತ್ತಿಲ್ಲ. ಇನ್ನು ಭತ್ತ ಬೆಳೆಯುವ ವೇಳೆಯಲ್ಲಿ ಕೀಟ ಬಾಧೆಗಳನ್ನು ತಪ್ಪಿಸುವ ಸಲುವಾಗಿ ಜನರು ಭತ್ತಕ್ಕೆ ಕೀಟನಾಶಕಗಳ ಸಿಂಪಡನೆಯನ್ನು ಮಾಡುತ್ತಾರೆ.

ಅತೀ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕಗಳ ಬಳಕೆ ಮಾಡುವುದರಿಂದಾಗಿ ಅನ್ನ ತಿಂದವರಲ್ಲಿ ಅತೀ ಹೆಚ್ಚು ಮಂದಿ ಕ್ಯಾನ್ಸರ್‌ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇಷ್ಟೇ ಅಲ್ಲ ಬೆಳೆದ ಅಕ್ಕಿಯನ್ನು ಸರಕಾರ ನೇರವಾಗಿ ಜನರಿಗೆ ತಲುಪಿಸೋದಿಲ್ಲ. ಅಕ್ಕಿಯನ್ನು ಮೂರರಿಂದ ನಾಲ್ಕು ವರ್ಷಗಳ ಕಾಲ ದಾಸ್ತಾನು ಮಳಿಗೆಗಳಲ್ಲಿ ಸಂಗ್ರಹ ಮಾಡುತ್ತಾರೆ.

ಇದನ್ನೂ ಓದಿ: ಬೇಸಿಗೆ ಬೇಗೆಗೆ ಮುಕ್ತಿ ನೀಡುತ್ತೆ ಈ ಬಟ್ಟೆ : ಇದನ್ನು ಬಳಸಿದ್ರೆ ಭೂಮಿ , ದೇಹ ಎರಡಕ್ಕೂ ಉತ್ತಮ

ಹೀಗೆ ಸಂಗ್ರಹ ಮಾಡುವ ಅಕ್ಕಿಯು ಕೆಡಬಾರದು ಅನ್ನೋ ಕಾರಣಕ್ಕೆ ಅಕ್ಕಿಗೆ ಬೋರಿಕ್‌ ಆಸಿಡ್‌ ಬಳಕೆ ಮಾಡುತ್ತಾರೆ. ಬೋರಿಕ್‌ ಆಸಿಡ್‌ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ. ಅನ್ನದ ರೂಪದಲ್ಲಿ ಬೋರಿಕ್‌ ಆಸಿಡ್‌ ನಮ್ಮ ದೇಹವನ್ನು ಸೇರುವುದರಿಂದಾಗಿ ಜನರು ಇಂದು ಹೆಚ್ಚಾಗಿ ಮದುಮೇಹಕ್ಕೆ ತುತ್ತಾಗುತ್ತಿದ್ದಾರೆ. ಹೀಗಾಗಿ ಆರೋಗ್ಯಕ್ಕೆ ಉತ್ತಮವಾಗಿರುವ ಅಕ್ಕಿಯನ್ನು ಬಳಕೆ ಮಾಡುವುದು ಉತ್ತಮ.

Rice Healthy or Bad for You here is Complete Details Dr Raju Krishnamoorthy Kannada Health tips 

Comments are closed.