ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ ಪತ್ತೆ – AIIMS ಅಧ್ಯಯನದಿಂದ ಹೊರಬಿತ್ತು ಸ್ಫೋಟಕ ಮಾಹಿತಿ

Uranium Breast Milk : ದೆಹಲಿ : ಬಿಹಾರದಲ್ಲಿ ಶಿಶುಗಳಿಗೆ ಹಾಲುಣಿಸುವ ತಾಯಂದಿರ ಎದೆಹಾಲಿನಲ್ಲಿ ವಿಷಕಾರಿ ಯುರೇನಿಯಂ ಅಂಶ ಪತ್ತೆಯಾಗಿದೆ ಅನ್ನೋ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಬಿಹಾರದ ಆಯ್ದ ಜಿಲ್ಲೆಗಳಲ್ಲಿ ಏಮ್ಸ್​ ನಡೆಸಿದ ವೈಜ್ಞಾನಿಕಾ ಸಂಶೋಧನಾ ವರದಿಯಲ್ಲಿ ಈ ವಿಚಾರ ಹೊರಬಿದ್ದಿದೆ.

ಬೋಜ್‌ಪುರ, ಕತಿಹಾರ, ಖಗಾರಿಯಾ. ಬೆಗುಸರಾಯ್‌, ಸಮಸ್ತಿಧಿಪುರ, ನಳಂದ ಜಿಲ್ಲೆಗಳಲ್ಲಿ ಏಮ್ಸ್​ ಮತ್ತು ಪಟನಾದ ಮಹಾವೀರ ಕ್ಯಾನ್ಸರ್​ ಮಹಾವಿದ್ಯಾಲಯ ಅಧ್ಯಯನ ನಡೆಸಿತ್ತು. ಆರು ಜಿಲ್ಲೆಗಳ 40 ತಾಯಂದಿರ ಸ್ತನ್ಯಪಾನದಲ್ಲಿ ಯುರೇನಿಯಂ – 238 ಕಣ ಕಂಡು ಬಂದಿದೆ.

ಈ ವಿಷಕಾರಿ ಎದೆಹಾಲಿನಿಂದಾಗಿ ಶಿಶುಗಳು ಕ್ಯಾನ್ಸರೇತರ ಅನಾರೋಗ್ಯಕರ ಅಪಾಯಗಳಿಗೆ ಗುರಿಯಾಗುವ ಸಾಧ್ಯತೆಯಿದೆ. ಅಲ್ಲದೇ ಯುರೇನಿಯಂ ಅಂಶ ದೇಹಕ್ಕೆ ಸೇರುವುದರಿಂದ ಮಕ್ಕಳ ಮೂತ್ರಪಿಂಡದ ಆರೋಗ್ಯದ ಮೇಲೂ ಗಂಭೀರ ದುಷ್ಪರಿಣಾಮ ಬೀರಲಿದೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.

ಅಂತರ್ಜಲ ಮಟ್ಟ ಕುಸಿತ ಹಾಗೂ ಕೃಷಿಯಲ್ಲಿ ದೀರ್ಘಕಾಲದ ರಸಗೊಬ್ಬರಗಳ ಬಳಕೆಯಿಂದಾಗಿ ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ ಅಂಶ ಹೆಚ್ಚಾಗಿ ಕಂಡು ಬಂದಿದೆ ಎನ್ನಲಾಗಿದೆ.

ಅಧ್ಯಯನ ಕೈಗೊಂಡ ಆರೂ ಜಿಲ್ಲೆಗಳಲ್ಲಿ ಅಂತರ್ಜಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುರೇನಿಯಂ ಅಂಶವಿತ್ತು ಎನ್ನಲಾಗಿದೆ. ಇದೇ ನೀರನ್ನು ಕುಡಿಯಲು ತಾಯಂದಿರು ಬಳಕೆ ಮಾಡಿರುವುದೇ ಈ ಅವಘಡಕ್ಕೆ ಕಾರಣ ಎಂದು ಸಂಶೋಧನೆ ತಿಳಿಸಿದೆ.

Uranium Breast Milk : 40 ತಾಯಂದಿರ ಅಧ್ಯಯನ

ಅಧ್ಯಯನಕ್ಕಾಗಿ ಬೋಜ್‌ಪುರ, ಕತಿಹಾರ, ಖಗಾರಿಯಾ. ಬೆಗುಸರಾಯ್‌, ಸಮಸ್ತಿಧಿಪುರ, ನಳಂದ ಜಿಲ್ಲೆಗಳ 40 ಜನ ಹಾಲುಣಿಸುವ ತಾಯಂದಿರ ಎದೆಹಾಲಿನ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಲಾಯಿತು.

ಇದನ್ನೂ ಓದಿ : ದತ್ತುಪುತ್ರರಿಗೆ ಅನುಕಂಪದ ನೌಕರಿ : ಹೈಕೋರ್ಟ್‌ ಮಹತ್ವದ ಮಾಹಿತಿ

ಪರೀಕ್ಷೆಗೆ ಒಳಪಡಿಸಿದ ಎಲ್ಲಾ 40 ಮಾದರಿಗಳಲ್ಲಿ ಯುರೇನಿಯಂ (U-238) ಅಂಶ ಪತ್ತೆಯಾಗಿದೆ ಇದರಲ್ಲಿ ಯುರೇನಿಯಂ ಸಾಂದ್ರತೆಯು 5.25 $\mu g/L$ (ಪ್ರತಿ ಲೀಟರ್‌ಗೆ ಮೈಕ್ರೋಗ್ರಾಂಗಳು) ವರೆಗೆ ಕಂಡುಬಂದಿದೆ.

ಎದೆಹಾಲಿನಲ್ಲಿ ಯುರೇನಿಯಂಗೆ ಯಾವುದೇ ಸುರಕ್ಷಿತ ಮಿತಿ (Permissible Limit) ಯನ್ನು ಇದುವರೆಗೆ WHO ಅಥವಾ ಇತರೆ ಸಂಸ್ಥೆಗಳು ನಿಗದಿಪಡಿಸಿಲ್ಲ. ಆದರೆ ಕುಡಿಯುವ ನೀರಿನಲ್ಲಿ WHO ಮಿತಿ 30 $\mu g/L$ ಆಗಿದೆ. ಎದೆಹಾಲಿನಲ್ಲಿ ಪತ್ತೆಯಾದ ಪ್ರಮಾಣವು ಕುಡಿಯುವ ನೀರಿನ ಮಿತಿಗಿಂತ ಕಡಿಮೆಯಿದ್ದರೂ, ಇದು ಶಿಶುಗಳಿಗೆ ಅಪಾಯಕಾರಿಯಾಗಬಲ್ಲದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಮಕ್ಕಳನ್ನು ಕಾಡಲಿದ್ಯಾ ಮಹಾಮಾರಿ ?

ಅಧ್ಯಯನದ ಪ್ರಕಾರ, ಈ ಯುರೇನಿಯಂ ಅಂಶವು ಶೇ. 70ರಷ್ಟು ಶಿಶುಗಳಿಗೆ ಕ್ಯಾನ್ಸರೇತರ (Non-Carcinogenic) ಆರೋಗ್ಯದ ತೊಂದರೆಗಳ ಸಂಭಾವ್ಯ ಅಪಾಯವನ್ನುಂಟುಮಾಡಬಹುದು ಎಂದು ಅಂದಾಜಿಸಲಾಗಿದೆ. ಯುರೇನಿಯಂ ಪ್ರಮುಖವಾಗಿ ಮೂತ್ರಪಿಂಡದ (Kidney) ಹಾನಿ, ನರವೈಜ್ಞಾನಿಕ ಸಮಸ್ಯೆಗಳು (Neurological Issues) ಮತ್ತು ಅರಿವಿನ ಕುಂಠಿತಕ್ಕೆ (Cognitive Delays) ಕಾರಣವಾಗಬಹುದು.

ಯುರೇನಿಯಂ ಪತ್ತೆ ಆಗಿದ್ದು ಹೇಗೆ?

ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ ಹೇಗೆ ಬಂತು ಎಂಬುದಕ್ಕೆ ನೇರ ಕಾರಣ ಇನ್ನೂ ಅಸ್ಪಷ್ಟವಾಗಿದ್ದರೂ, ಪ್ರಮುಖವಾಗಿ ಕಲುಷಿತಗೊಂಡಿರುವ ನೀರಿನ ಮೂಲವೇ ಕಾರಣ ಎಂದು ತಜ್ಞರು ಶಂಕಿಸಿದ್ದಾರೆ.

ಬಿಹಾರದಂತಹ ಪ್ರದೇಶಗಳಲ್ಲಿನ ಭೂಗರ್ಭದ ಪದರಗಳಲ್ಲಿ ನೈಸರ್ಗಿಕವಾಗಿ ಯುರೇನಿಯಂ ನಿಕ್ಷೇಪಗಳು ಇರಬಹುದು.ಜನರು ಕುಡಿಯಲು ಮತ್ತು ಕೃಷಿಗೆ ಹೆಚ್ಚಾಗಿ ಭೂಗರ್ಭದ ನೀರನ್ನು (Groundwater) ಅವಲಂಬಿಸಿರುವುದರಿಂದ, ಈ ಯುರೇನಿಯಂ ಅಂಶವು ಕ್ರಮೇಣ ನೀರಿಗೆ ಸೇರಿಕೊಳ್ಳುತ್ತದೆ.

ಯುರೇನಿಯಂ ಯುಕ್ತ ನೀರನ್ನು ಕುಡಿಯಲು ಮತ್ತು ಕೃಷಿಗಾಗಿ ಬಳಸುವುದರಿಂದ, ಇದು ಆಹಾರ ಸರಪಳಿಯನ್ನು ಪ್ರವೇಶಿಸುತ್ತದೆ. ತಾಯಂದಿರು ಸೇವಿಸುವ ನೀರು ಮತ್ತು ಆಹಾರದ ಮೂಲಕ ಈ ವಿಷಕಾರಿ ಅಂಶವು ಅವರ ದೇಹವನ್ನು ಸೇರಿ, ಅಲ್ಲಿಂದ ಎದೆಹಾಲಿಗೆ ವರ್ಗಾವಣೆಯಾಗಿರಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ : ನಂದಿನಿ ಬೇಡವೆಂದ ಟಿಟಿಡಿಗೆ ಮಹಾಮೋಸ : ತಿರುಪತಿ ಪ್ರಸಾದ ವಿವಾದಕ್ಕೆ ಬಿಗ್‌ಟ್ವಿಸ್ಟ್‌

ಇನ್ನು ಕೈಗಾರಿಕಾ ತ್ಯಾಜ್ಯ (Industrial Effluents): ಸಂಸ್ಕರಿಸದ ಕೈಗಾರಿಕಾ ತ್ಯಾಜ್ಯವನ್ನು ನದಿ ಅಥವಾ ನೀರಿಗಲ್ಲಿ ಬಿಡುವುದರಿಂದ.ರಸಗೊಬ್ಬರಗಳು (Fertilizers): ಕೃಷಿಯಲ್ಲಿ ಫಾಸ್ಫೇಟ್ ರಸಗೊಬ್ಬರಗಳ ಅತಿಯಾದ ಬಳಕೆಯಿಂದಲೂ ಮಣ್ಣು ಮತ್ತು ನೀರು ಕಲುಷಿತಗೊಳ್ಳಬಹುದು.

ಸದ್ಯ ಬಿಹಾರದಲ್ಲಿ ನಡೆದಿರುವ ಈ ಸಂಶೋಧನೆಯು ಆತಂಕ ಮೂಡಿಸಿದ್ದರೂ, ಯುರೇನಿಯಂ ಪ್ರಮಾಣ ಕಡಿಮೆ ಇರುವುದರಿಂದ ಮತ್ತು ಎದೆಹಾಲು ಶಿಶುಗಳ ರೋಗನಿರೋಧಕ ಶಕ್ತಿಗೆ ಅತ್ಯಗತ್ಯವಾಗಿರುವುದರಿಂದ, ವೈದ್ಯಕೀಯ ಸಲಹೆಯಿಲ್ಲದೆ ಹಾಲುಣಿಸುವುದನ್ನು ನಿಲ್ಲಿಸಬಾರದು ಎಂದು ಅಧ್ಯಯನಕಾರರು ಮತ್ತು ವೈದ್ಯಕೀಯ ತಜ್ಞರು ಸ್ಪಷ್ಟವಾಗಿ ಶಿಫಾರಸು ಮಾಡಿದ್ದಾರೆ.

Uranium Detected in Mothers Breast Milk Explosive Findings from AIIMS Study

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories