Espionage for Pakistan : ಪಾಕಿಸ್ತಾನಕ್ಕೆ ಗೂಢಾಚಾರಿಕೆ : ಮಲ್ಪೆ ಕೊಚ್ಚಿನ್​ ಶಿಪ್​ ಯಾರ್ಡ್​ ಸಿಬ್ಬಂದಿ ಬಂಧನ

Espionage for Pakistan : ಉಡುಪಿ ಜಿಲ್ಲೆ ಮಲ್ಪೆಯ ಕೊಚ್ಚಿನ ಶಿಪ್​ ಯಾರ್ಡ್​ನಲ್ಲಿ ಪಾಕಿಸ್ತಾನದ ಪರವಾಗಿ ಗೂಢಾಚಾರಿಕೆ ಮಾಡುತ್ತಿದ್ದ ಇಬ್ಬರು ಯಾರ್ಡ್ ಸಿಬ್ಬಂದಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಉತ್ತರ ಪ್ರದೇಶ ಮೂಲದ ರೋಹಿತ್​ ಹಾಗೂ ಸಂತ್ರಿ ಎಂದು ಗುರುತಿಸಲಾಗಿದೆ.

ಈ ಇಬ್ಬರು ಬಂಧಿತ ಆರೋಪಿಗಳು ಸುಷ್ಮಾ ಮೇರಿನ್​​ ಪ್ರೈವೇಟ್​ ಲಿಮಿಟೆಡ್​ ಮೂಲಕ ಗುತ್ತಿಗೆ ಆಧಾರದಲ್ಲಿ ಸೇವೆಗೆ ನಿಯೋಜನೆಗೊಂಡಿದ್ದರು ಎನ್ನಲಾಗಿದೆ. ಕೊಚ್ಚಿನ ಶಿಪ್​ ಯಾರ್ಡ್​ ಭಾರತೀಯ ನೌಕಾಪೆಗಡ ಟಗ್​​ಗಳನ್ನು ನಿರ್ಮಿಸಿಕೊಡುವ ಸಂಸ್ಥೆಯಾಗಿದ್ದು ಖಾಸಗಿಯವರಿಗೂ ನೌಕೆಗಳನ್ನು ನಿರ್ಮಿಸಿಕೊಟ್ಟಿದೆ.

ಈ ಬಂಧಿತ ಆರೋಪಿಗಳು ಕಳೆದ ಒಂದೂವರೆ ವರ್ಷಗಳಿಂದ ಪಾಕಿಸ್ತಾನಕ್ಕೆ ಗೌಪ್ಯ ಸಂದೇಶ ಕಳಿಸುವ ಕಾರ್ಯ ಮಾಡುತ್ತಿದ್ದರು ಎನ್ನಲಾಗಿದೆ. ಕೊಚ್ಚಿನ್​ ಶಿಪ್​ ಪ್ಯಾಡ್​ ಸಿಇಓ ನೀಡಿದ ದೂರನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿದ ಉಡುಪಿ ಪೊಲಿಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ : ಶಂಕರನಾರಾಯಣ : ಪತಿಯ ಹಿಂಸೆ ತಡೆಯಲಾರದೆ ಪತ್ನಿ ಆತ್ಮಹತ್ಯೆ

ಈ ಸಂಸ್ಥೆಯು ಕೇರಳದಲ್ಲಿ ಪ್ರಧಾನ ಕಚೇರಿ ಹೊಂದಿದೆ. ಈ ಹಿಂದೆ ಕೇರಳದಲ್ಲಿಯೇ ಕೆಲಸ ಮಾಡುತ್ತಿದ್ದ ಆರೋಪಿ ರೋಹಿತ್​​ ಗೌಪ್ಯ ಮಾಹಿತಿ ನೀಡಿ ಹಣ ಪಡೆಯುತ್ತಿದ್ದ ಎನ್ನಲಾಗಿದೆ. ಹಡಗುಗಳ ಗೌಪ್ಯ ಪಟ್ಟಿಯನ್ನು ವಾಟ್ಸಾಪ್​ ಮೂಲಕ ಶೇರ್​ ಮಾಡುತ್ತಿದ್ದ.

ಮಲ್ಪೆ ಕೊಚ್ಚಿನ್​ ಶಿಪ್​ ಯಾರ್ಡ್​ಗೆ ಸೇರಿದ ಬಳಿಕವೂ ತನ್ನ ಹಳೆ ಚಾಳಿ ಮುಂದುವರಿಸಿದ್ದ. ದೇಶದ ಭದ್ರತೆಗೆ ಧಕ್ಕೆ ತರುವ ಕಾರ್ಯ ಮಾಡಿರುವ ಈ ಆರೋಪಿಗಳನ್ನು ಸೂಕ್ತ ಮಾಹಿತಿ ಆಧರಿಸಿ ಬಂಧಿಸಿದ್ದೇವೆ ಎಂದು ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಮ್​ ಶಂಕರ್​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಉಡುಪಿ ಸೈಬರ್‌ ವಂಚನೆ : ಟೆಲಿಗ್ರಾಂ ಜಾಬ್‌ ಲಿಂಕ್‌ ಮೂಲಕ 12 ಲಕ್ಷ ರೂಪಾಯಿ ವಂಚನೆ

ಕೊಚ್ಚಿನ್​ ಶಿಪ್​ ಯಾರ್ಡ್ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು ಸುಷ್ಮಾ ಮೆರಿನ್ ಪ್ರೈವೇಟ್ ಲಿಮಿಟೆಡ್ ಮೂಲಕ ಸಬ್​ ಕಾಂಟ್ರಾಕ್ಟ್​ ಹೊಂದಿದೆ. ಈ ಸಂಸ್ಥೆಗೆ ರೋಹಿತ್​ ಇನ್ಸುಲೇಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ಹಾಗೂ ಮತ್ತೋರ್ವ ಆರೋಪಿ ಸಂತ್ರಿ ಕೇರಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಎನ್ನಲಾಗಿದೆ.

Espionage for Pakistan Malpe Cochin Shipyard Staff Arrested

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories