ಜಾಮೂನು ಎಂದರೆ ಹೆಚ್ಚಾಗಿ ಎಲ್ಲರೂ ಇಷ್ಟವಾಗುತ್ತದೆ. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಜಾಮೂನ್ ತಿನ್ನುವುದು ಎಂದರೆ ಬಲು ಖುಷಿ. ಇಂತಹ ಜಾಮೂನ್ ಬಾಳೆಹಣ್ಣಿನಿಂದಲೂ ತಯಾರಾಗುತ್ತದೆ ಅಂದ್ರೆ ಒಮ್ಮೆ ಯಾಕೆ ರುಚಿ ನೋಡಬಾರದು. ಇಲ್ಲಿದೆ ನೋಡಿ ಬಾಳೆಹಣ್ಣಿನ ಜಾಮೂನು ರೆಸಿಪಿ.
ಬಾಳೆ ಹಣ್ಣಿನ ಜಾಮೂನ್ ಮಾಡಲು ಬೇಕಾಗುವ ಸಾಮಾಗ್ರಿಗಳು ನೇಂದ್ರ ಬಾಳೆ ಹಣ್ಣು – 4, ಸಕ್ಕರೆ -1 ಲೋಟ, ಏಲಕ್ಕಿಪುಡಿ ಸ್ವಲ್ಪ, ತುಪ್ಪ ಕರಿಯಲು ಇವೇಲ್ಲಾವನ್ನು ಮೊದಲಿಗೆ ರೆಡಿಮಾಡಿ ಇಟ್ಟು ಕೊಳ್ಳಿ.
ಇದನ್ನೂ ಓದಿ: Chocolate Cake : ಮನೆಯಲ್ಲೂ ಮಾಡಬಹುದು ಚಾಕೋಲೇಟ್ ಕೇಕ್’
ಬಾಳೆಹಣ್ಣಿನ ಜಾಮೂನು ಮಾಡುವ ವಿಧಾನ ಮೊದಲಿಗೆ ಸಕ್ಕರೆ ಪಾಕವನ್ನು ತಯಾರಿಸಿಕೊಳ್ಳಬೇಕು. ಇದಕ್ಕಾಗಿ ಸಕ್ಕರೆ ಮುಳುಗುವಷ್ಟು ನೀರನ್ನು ಬಾಣಲಿಗೆ ಹಾಕಿ ಐದು ನಿಮಿಷಗಳ ಕಾಲ ಕುದಿಸಬೇಕು. ಸಕ್ಕರೆ ಪಾಕವನ್ನು ಒಂದೆಡೆ ತೆಗೆದು ಇಟ್ಟುಕೊಳ್ಳಬೇಕು.
ಬಾಳೆಹಣ್ಣನ್ನು ಬಿಲ್ಲೆಗಳಂತೆ ಕತ್ತರಿಸಿ ಬಾಣಲೆಗೆ ತುಪ್ಪ ಹಾಕಿ ಬಿಸಿಯಾದ ನಂತರ ಬಾಳೆಹಣ್ಣಿನ ಬಿಲ್ಲೆಗಳನ್ನು ಜಾಮೂನಿನಂತೆ ಕರೆಯಬೇಕು. ಕರೆದ ನಂತರ ಬಿಸಿಯಾದ ಸಕ್ಕರೆ ಪಾಕಕ್ಕೆ ಹಾಕಿ. ಸಕ್ಕರೆ ತಣ್ಣಗಾದ ಮೇಲೆ ಸ್ವಲ್ಪ ಹೊತ್ತು ಬಿಟ್ಟು ಬಾಳೆಹಣ್ಣಿನ ಜಾಮೂನನ್ನು ಸವಿಯಬಹುದು.
ಇದನ್ನೂ ಓದಿ: ಗರಿಗರಿಯಾದ ಆಲೂಗಡ್ಡೆ ದೋಸೆ ! ಒಮ್ಮೆ ತಿಂದ್ರೆ ಮತ್ತೆ ಮತ್ತೆ ಟ್ರೈ ಮಾಡ್ತೀರಾ
Comments are closed.