ಮನೆಯಲ್ಲೇ ಮಾಡಿ’ಬಾದಾಮ್ ಹಲ್ವಾʼ : ಇಲ್ಲಿದೆ ಮಾಡುವ ಸುಲಭ ವಿಧಾನ

ಹಬ್ಬದ ದಿನಗಳಲ್ಲಿ ಅಥವಾ ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಒಮ್ಮೆ ಬಾದಾಮ್ ಹಲ್ವಾ ಮನೆಯಲ್ಲಿ ಟ್ರೈ ಮಾಡಿ ನೋಡಿ. ಬಾದಾಮಿ ದುಬಾರಿ ಅನಿಸಿದರೂ ಇದರ ಹಲ್ವಾ ಮಾತ್ರ ಸಖತ್ ಆಗಿರುತ್ತದೆ. ಮಾಡುವುದಕ್ಕೂ ಸುಲಭವಿದೆ. ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ.

ಬೇಕಾಗುವ ಸಾಮಾಗ್ರಿಗಳು : ಬಾದಾಮಿ-1 ಕಪ್, ಹಾಲು ಎರಡು ಕಪ್, ತುಪ್ಪ-1-ಕಪ್, ಸಕ್ಕರೆ -1 ಕಪ್, ಏಲಕ್ಕಿ ಪುಡಿ, ಚಿಟಿಕೆ, ಪಿಸ್ತಾ-ಚಿಕ್ಕದ್ದಾಗಿ ಕತ್ತರಿಸಿದ್ದು, ಬಿಸಿ ನೀರು 2 ಕಪ್.

ಇದನ್ನೂ ಓದಿ: Paneer Tikka : ಮನೆಯಲ್ಲೂ ಮಾಡಿ ಪನ್ನೀರ್ ಟಿಕ್ಕಾ

ಮಾಡುವ ವಿಧಾನ : ಮೊದಲಿಗೆ ಬಾದಾಮಿಯನ್ನು ಅರ್ಧ ಗಂಟೆ ಬಿಸಿ ನೀರಲ್ಲಿ ನೆನೆಸಿಡಿ. ನಂತರ ಇದರ ಸಿಪ್ಪೆ ಸುಲಿದು ಇದನ್ನು ಮಿಕ್ಸಿ ಜಾರಿಗೆ ಹಾಕಿ. ಅದಕ್ಕೆ 1 ಕಪ್ ಹಾಲು ಹಾಕಿ ನಯವಾಗಿ. ರುಬ್ಬಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 1 ಕಪ್ ತುಪ್ಪ ಹಾಕಿ ಆಮೇಲೆ ರುಬ್ಬಿಟ್ಟುಕೊಂಡ ಬಾದಾಮಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಇದನ್ನೂ ಓದಿ: Banana Halwa : ಬಾಳೆಹಣ್ಣಿನಲ್ಲೂ ಮಾಡಬಹುದು ಹಲ್ವಾ

ಆಮೇಲೆ ಅದಕ್ಕೆ 1 ಕಪ್ ಹಾಲು ಹಾಕಿ ಕೈಯಾಡಿಸಿ. ಈ ಮಿಶ್ರಣ ತುಸು ದಪ್ಪಗಾಗುತ್ತಿದ್ದಂತೆ 1 ಕಪ್ ಸಕ್ಕರೆ ಹಾಕಿ ಚೆನ್ನಾಗಿ ತಿರುಗಿಸಿ. ತಳಹತ್ತದಂತೆ ನೋಡಿಕೊಳ್ಳಿ. ತುಪ್ಪ ತಳ ಬಿಡುತ್ತಿದ್ದಂತೆ ಅದಕ್ಕೆ ಏಲಕ್ಕಿ ಪುಡಿ, ಕತ್ತರಿಸಿ ಇಟ್ಟುಕೊಂಡ ಪಿಸ್ತಾ ಚೂರುಗಳನ್ನು ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಬಾದಾಮ್ ಹಲ್ವಾ ಸವಿಯಲು ಸಿದ್ಧ.

(The easiest way to make Badam halwah)

Comments are closed.