DY Chandrachood : ಸುಪೀಂಕೋರ್ಟ್‌ ನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಡಿವೈ ಚಂದ್ರಚೂಡ್‌

ನವದೆಹಲಿ : (DY Chandrachood) ಭಾರತದ ಸರ್ವೋಚ್ಚ ನ್ಯಾಯಾಲಯ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಸಿಜೆಐ ಉದಯ್‌ ಉಮೇಶ್‌ ಲಲಿತ್‌ ಅವರು ನ್ಯಾ. ಡಿವೈ ಚಂದ್ರಚೂಡ್‌ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸ್ಸು ಮಾಡಿದ್ದಾರೆ.

ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರು ನಡೆಸಿದ ಪೂರ್ಣ ನ್ಯಾಯಾಲಯದ ಸಭೆಯಲ್ಲಿ ಭಾರತದ ಮುಖ್ಯ ನ್ಯಾಯಾದೀಶರಾದ ಉದಯ್‌ ಉಮೇಶ್‌ ಲಲಿತ್‌ ಅವರು ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌(DY Chandrachood) ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸ್ಸು ಮಾಡಿದ್ದಾರೆ. ಈ ಹಿಂದೆ ಕಾನೂನು ಮತ್ತು ನ್ಯಾಯ ಸಚಿವಾಲಯವು ಮುಖ್ಯ ನ್ಯಾಯಮೂರ್ತಿ ಉದಯ್‌ ಉಮೇಶ್‌ ಲಲಿತ್‌ ಅವರಿಗೆ ಹೊಸ ಸಿಜೆಐ ಹೆಸರನ್ನು ಶಿಫಾರಸ್ಸು ಮಾಡಿ, ನೇಮಕಾತಿಗೆ ಸಂಬಂಧಿಸಿದಂತೆ ಜ್ಞಾಪಕ ಪತ್ರ ಪ್ರಕ್ರೀಯೆಯನ್ನು ಪ್ರಾರಂಭಿಸುವಂತೆ ಮನವಿ ಮಾಡಿತ್ತು.

ಇದನ್ನೂ ಓದಿ : Madhya Pradesh : ಪತ್ನಿಯನ್ನು ಕೊಲ್ಲಲು ಹೂಡಿದ್ದ ಸಂಚಿಗೆ ಅತ್ತೆ ಬಲಿ : ಅಷ್ಟಕ್ಕೂ ಆಗಿದ್ದೇನು ?

ಇದನ್ನೂ ಓದಿ : Bada Poojary died : ಕಂಬಳ ಕ್ಷೇತ್ರದ ಸಾಧಕ ಇರುವೈಲ್‌ ಪಾಣಿಲ ಬಾಡ ಪೂಜಾರಿ ವಿಧಿವಶ

ಈ ಹಿನ್ನೆಲೆಯಲ್ಲಿ ನ್ಯಾ. ಉದಯ್‌ ಉಮೇಶ್‌ ಲಲಿತ್‌ ಅವರು ತಮ್ಮ ಉತ್ತರಾಧಿಕಾರಿಯಾಗಿ ನ್ಯಾ. ಚಂದ್ರಚೂಡ್‌ ಅವರ ಹೆಸರಲ್ಲಿ ಪತ್ರವನ್ನು ಕಳುಹಿಸಿದ್ದಾರೆ. ಇದರಿಂದಾಗಿ ನ್ಯಾಯಮೂರ್ತಿ ಚಂದ್ರಚೂಡ್‌ ಅವರು ನವೆಂಬರ್‌ ಒಂಬತ್ತರಂದು ಭಾರತದ ಐವತ್ತನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇವರು ಎರಡು ವರ್ಷ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ಅವಧಿಯನ್ನು ಹೊಂದಿ ಮುಂದಿನ ನವೆಂಬರ್‌ 10, 2022 ರಂದು ಅಧಿಕಾರದಿಂದ ನಿವ್ರತ್ತಿಯಾಗಲಿದ್ದಾರೆ.

ಇದನ್ನೂ ಓದಿ : Syed Mushtaq Ali T20 : ಇಂದಿನಿಂದ ಸೈಯದ್ ಮುಷ್ತಾಕ್ ಟಿ20 ಟೂರ್ನಿ: ಮಯಾಂಕ್ ನಾಯಕತ್ವದ ಕರ್ನಾಟಕಕ್ಕೆ ಮಹಾರಾಷ್ಟ್ರ ಎದುರಾಳಿ

ಇದನ್ನೂ ಓದಿ : Mouvin Godinho : ಕುಡಿದವರನ್ನು ಮನೆಗೆ ತಲುಪಿಸುವುದು ಬಾರ್‌ ಮಾಲೀಕರ ಜವಾಬ್ಧಾರಿ : ಸಚಿವರ ಆದೇಶ

ನ್ಯಾಯಮೂರ್ತಿ ಚಂದ್ರಚೂಡ್‌ ಅವರು ಮುಂದಿನ ಸಿಜೆಐ ಆಗಲಿದ್ದು, ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಎರಡು ವರ್ಷಗಳ ಅಧಿಕಾರ ಅವಧಿಯನ್ನು ಹೊಂದಿರುತ್ತಾರೆ.

(DY Chandrachood) CJI Uday Umesh Lalit as the Chief Justice of the Supreme Court of India. DY Chandrachud has been recommended as his successor

Comments are closed.