Sonakshi Sinha : ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಾ ಎಂಬ ಗುಸುಗುಸು ಶುರುವಾಗಿದೆ. ಇದಕ್ಕೆ ಕಾರಣ ನಟಿ ಸೋನಾಕ್ಷಿ ಸಿನ್ಹಾ ಶೇರ್ ಮಾಡಿರುವ ಫೋಟೋಗಳು. ದಬಂಗ್ ಸಿನಿಮಾದ ಮೂಲಕ ಬಾಲಿವುಡ್ನಲ್ಲಿ ಧೂಳೆಬ್ಬಿಸಿದ ನಟಿ ಸೋನಾಕ್ಷಿ ಸಿನ್ಹಾ ಇನ್ಸ್ಟಾಗ್ರಾಂನಲ್ಲಿ ಕೆಲವು ವಿಶೇಷ ಫೋಟೋಗಳನ್ನು ಶೇರ್ ಮಾಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಈ ದಿಢೀರ್ ಸುದ್ದಿಯಿಂದ ಅಭಿಮಾನಿಗಳು ಶಾಕ್ ಆಗಿದ್ದು ಒಂದೆಡೆಯಾದರೆ ಇನ್ನೊಂದಿಷ್ಟು ಅಭಿಮಾನಿಗಳು ಕಮೆಂಟ್ ಬಾಕ್ಸಿನಲ್ಲಿ ಶುಭಾಶಯಗಳ ಸುರಿಮಳೆ ಹರಿಸುತ್ತಿದ್ದಾರೆ.
ಸೋನಾಕ್ಷಿ ಸಿನ್ಹಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮೂರು ವಿಭಿನ್ನ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಉಂಗುರುವನ್ನು ತೋರಿಸುತ್ತಿದ್ದಾರೆ. ಅಲ್ಲದೇ ಸೋನಾಕ್ಷಿಯ ಕೈಯನ್ನು ಇನ್ನೊಬ್ಬರು ಹಿಡಿದುಕೊಂಡಿದ್ದಾರೆ. ಆದರೆ ಸೋನಾಕ್ಷಿ ಸಿನ್ಹಾರ ಕೈ ಹಿಡಿದುಕೊಂಡಿರುವುದು ಯಾರು ಎಂಬುದು ಗೋಚರವಾಗುತ್ತಿಲ್ಲ. ಈ ಮೂಲಕ ತಮ್ಮ ಜೀವನ ಸಂಗಾತಿ ಯಾರು ಎಂಬ ಕುತೂಹಲವನ್ನು ನಟಿ ಸೋನಾಕ್ಷಿ ಸಿನ್ಹಾ ಗುಟ್ಟಾಗಿಯೇ ಉಳಿಸಿದ್ದಾರೆ.
ಎರಡನೇ ಫೋಟೋದಲ್ಲಿ ಸೋನಾಕ್ಷಿ ಸಿನ್ಹಾ ತಮ್ಮ ಸಂಗಾತಿಯ ಭುಜದ ಮೇಲೆ ಕೈಯನ್ನಿಟ್ಟು ನಗುತ್ತಿದ್ದಾರೆ. ಮೂರನೇ ಫೋಟೋದಲ್ಲಿ ಸೋನಾಕ್ಷಿ ಸಿನ್ಹಾ ತಮ್ಮ ಸಂಗಾತಿಯ ಕೈಯನ್ನು ಹಿಡಿದುಕೊಂಡಿದ್ದಾರೆ. ನಟಿಯ ಉಂಗುರದ ಬೆರಳಿನಲ್ಲಿ ವಜ್ರದ ಉಂಗುರವು ಫಳ ಫಳ ಎಂದು ಹೊಳೆಯುತ್ತಿದೆ. ನನ್ನ ಪಾಲಿಗೆ ಇದು ಅತ್ಯಂತ ಮಹತ್ವದ ದಿನ. ನನ್ನ ದೊಡ್ಡ ಕನಸೊಂದು ನನಸಾಗುತ್ತಿದೆ. ಇದನ್ನೆಲ್ಲ ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಕಾತುರನಾಗಿದ್ದೇನೆ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ. ಬಾಲಿವುಡ್ನಲ್ಲಿ ಸಾಲು ಸಾಲು ಸ್ಟಾರ್ ನಟರ ಮದುವೆಯ ಬೆನ್ನಲ್ಲೇ ಸೋನಾಕ್ಷಿ ಸಿನ್ಹಾ ಕೂಡ ಈ ಗುಡ್ ನ್ಯೂಸ್ ನೀಡಿದ್ದು ದಬಂಗ್ ನಟಿಯ ಹೃದಯ ಕದ್ದ ಚೋರ ಯಾರು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಇದನ್ನು ಓದಿ : KGF Yash next Movie : ಯಶ್ ಮುಂದಿನ ಸಿನಿಮಾ ಯಾವುದು: ಕೊನೆಗೂ ಸಿಕ್ತು ಪ್ರಶ್ನೆಗೆ ಉತ್ತರ
ಇದನ್ನೂ ಓದಿ : sai pallavi birthday : ಬರ್ತಡೇಯಂದು ಹೊಸ ಸಿನಿಮಾ ಘೋಷಿಸಿದ ಸಾಯಿ ಪಲ್ಲವಿ: ಕನ್ನಡದಲ್ಲಿ ಡಬ್ಬಿಂಗ್ ಮಾಡಿದ ನಟಿ