ಡ್ರೈಯ್ಡ್ ಫ್ಲಾವರ್ ಡೆಕೊರೇಷನ್ ಟ್ರಂಡ್ : ಮನೆಯನ್ನು ಅಲಂಕರಿಸುವ ಮೊದಲು ಫೆಂಗ್‌ಶೂಯಿ ವಾಸ್ತು ಸಲಹೆ ತಿಳಿಯಿರಿ
ಫೆಂಗ್‌ಶೂಯಿ ಪ್ರಕಾರ ಒಣಗಿದ ಹೂವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಶುಭನಾ ಅಥವಾ ಅಶುಭನಾ? ಇಡುವುದಾದರೆ ಮನೆಯ ಯಾವ ಭಾಗದಲ್ಲಿ ಇಡಬೇಕು? ಇಲ್ಲಿದೆ ಓದಿ.

ಕಾಲ ಬದಲಾದಂತೆ ಮನೆಯ ಒಳಾಂಗಣ ಅಲಂಕಾರವೂ ಬದಲಾಗಿದೆ. ಮೊದಲೆಲ್ಲಾ ಹೆಚ್ಚಾಗಿ ಪ್ಲಾಸ್ಟಿಕ್ ಹೂವು, ಎಲೆಗಳಿಂದ ಮನೆಯನ್ನು ಅಲಂಕರಿಸಲಾಗುತ್ತಿತ್ತು. ಆದರೆ ಈಗ ಟ್ರೆಂಡ್ ಬದಲಾಗಿದೆ. ಈಗ ಒಣಗಿದ ಹೂವುಗಳನ್ನು ಮನೆಯನ್ನು ಅಲಂಕಾರಕ್ಕಾಗಿ ಬಳಸಲಾಗುತ್ತಿದೆ. ತಾಜಾ ಹೂವುಗಳನ್ನು ತಂದು ಒಣಗಿಸಿ ವ್ಯಸ್ಥಿತವಾಗಿ ಜೋಡಿಸಿದ ಹೂಗುಚ್ಚಗಳು ಮಾರುಕಟ್ಟೆಯಲ್ಲಿ ಗಿಫ್ಟ್ ನೀಡಲು ದೊರೆಯುತ್ತಿವೆ. ತಾಜಾ ಹೂವುಗಳನ್ನು ಗಿಫ್ಟ್ ಆಗಿ ಕೊಟ್ಟರೆ ಒಂದೆರಡು ದಿನದಲ್ಲಿ ಬಾಡಿ ಹೋಗುತ್ತವೆ. ಆದರೆ ಈ ಡ್ರೈಯ್ಡ್ ಫ್ಲಾವರ್ ವಾಸ್ ಅಥವಾ ಬಂಚ್‌ಗಳು ಬಹಳ ದಿನಗಳವರೆಗೆ ಇರುತ್ತವೆ. ಹಾಗಾಗಿ ಈಗ ಅದು ಟ್ರೆಂಡ್‌ನಲ್ಲಿದೆ. ಹಾಗೆ ಗಿಫ್ಟ್ ಆಗಿ ಪಡೆದ ಅಥವಾ ನೀವೇ ಕೊಂಡು ತಂದ ಹೂಗುಚ್ಚಗಳನ್ನು ಸರಿಯಾದ ಜಾಗದಲ್ಲಿಡುವುದು ಅವಶ್ಯಕ ಎಂದು ಹೇಳುತ್ತದೆ ಫೆಂಗ್‌ಶೂಯಿ ವಾಸ್ತು ಶಾಸ್ತ್ರ. ಭಾರತದ ವಾಸ್ತು ಶಾಸ್ತ್ರದಂತೆ ಚೀನಿ ವಾಸ್ತು ಶಾಸ್ತ್ರವಾದ ಫೆಂಗ್‌ಶೂಯಿ ಕೂಡಾ ಅಷ್ಟೇ ಜನಪ್ರಿಯ. ಬಹಳಷ್ಟು ಜನರು ಇದರಲ್ಲಿ ನಂಬಿಕೆ ಇಟ್ಟಿದ್ದಾರೆ. ಹಾಗಾದರೆ ಫೆಂಗ್‌ಶೂಯಿ ಪ್ರಕಾರ ಒಣಗಿದ ಹೂವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಶುಭನಾ ಅಥವಾ ಅಶುಭನಾ? ಇಡುವುದಾದರೆ ಮನೆಯ ಯಾವ ಭಾಗದಲ್ಲಿ ಇಡಬೇಕು? ಇಲ್ಲಿದೆ ಓದಿ.
ಫೆಂಗ್‌ಶೂಯಿ ಹೇಳುವುದೇನು?
ಒಣಗಿದ ಹೂವುಗಳನ್ನು ಮನೆಯ ಅಲಂಕಾರಕ್ಕೆ ಬಳಸುವುದಾದರೆ ಬಹಳ ಎಚ್ಚರಿಕೆಯಿಂದ ಬಳಸಬೇಕು ಎಂದು ಫೆಂಗ್‌ಶೂಯಿ ಹೇಳುತ್ತದೆ. ಏಕೆಂದರೆ ಮನೆಯ ಕೆಲವು ಕಡೆಗಳಲ್ಲಿ ಈ ಹೂಗುಚ್ಚಗಳನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಧನಾತ್ಮಕತೆ ಕಡಿಮೆಯಾಗುತ್ತದೆ ಎಂದು ಹೇಳಿದೆ. ಫೆಂಗ್‌ಶೂಯಿ ಪ್ರಕಾರ ಡ್ರೈಯ್ಡ್ ಫ್ಲಾವರ್ ವಾಸ್‌ಗಳನ್ನು ಮನೆಯ ಮುಖ್ಯ ದ್ವಾರ ಅಥವಾ ದೇವರ ಮನೆಯಲ್ಲಿ ಇಡಬೇಡಿ. ಅದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
ಇದನ್ನೂ ಓದಿ: ನಿಮ್ಮ ಅಂಗಡಿಯಲ್ಲಿ ಕ್ಯಾಶ್ ಕೌಂಟರ್ ತಪ್ಪು ದಿಕ್ಕಿನಲ್ಲಿದೆಯಾ ? ವ್ಯಾಪಾರದಲ್ಲಿ ಲಾಭ ಗಳಿಸಲು ಈ ವಾಸ್ತು ಸಲಹೆ ಪಾಲಿಸಿ
ಡ್ರೈಯ್ಡ್ ಫ್ಲಾವರ್‌ನಿಂದ ಅಲಂಕರಿಸುವ ಮುನ್ನ
ಡ್ರೈಯ್ಡ್ ಫ್ಲಾವರ್‌ಗಳನ್ನು ಪ್ರೀತಿಸುತ್ತಿದ್ದರೆ ಅವುಗಳನ್ನು ಶೋಕೇಸ್‌ನಲ್ಲಿ ಇಡಿ. ಅವುಗಳನ್ನು ಆಗಾಗ್ಗೆ ಒರೆಸಿ ಸ್ವಚ್ಛವಾಗಿರಿಸಿ. ತುಂಬಾ ಹಳೆಯದಾಗಿದ್ದರೆ ಅಥವಾ ಮುರಿದು ಹೊಗಿದ್ದರೆ ಅವುಗಳನ್ನು ಬದಲಾಯಿಸಿ.

