(Maha shivaratri- Yamapooje) ಮಹಾಶಿವರಾತ್ರಿ ಎಂದರೆ ಶಿವನ ವಿಶ್ರಾಂತಿಯ ಕಾಲ. ಮಹಾಶಿವರಾತ್ರಿಯ ಕಾಲದಲ್ಲಿ ಶಿವತತ್ವದ ಕಾರ್ಯ ನಿಂತುಹೋಗುತ್ತದೆ (ಅಂದರೆ ಶಿವನು ಧ್ಯಾನಾವಸ್ಥೆಯಿಂದ ಸಮಾಧಿ ಸ್ಥಿತಿಗೆ ತಲುಪುತ್ತಾನೆ. ಈ ಸಮಯದಲ್ಲಿ ತಿಳಿದು ಅಥವಾ ತಿಳಿಯದೆಯೋ ಶಿವನ ಉಪಾಸನೆ ಮಾಡಿದ್ದಲ್ಲಿ, ಕುಂದು ಕೊರತೆ ಇದ್ದರೂ ಕೂಡ ಇದರ ಫಲ ನೂರು ಪ್ರತಿಶತಃ ಸಿಗುತ್ತದೆ.
ಈ ಕಾಲಾವಧಿಯಲ್ಲಿ ವಿಶ್ವದ ತಮೋಗುಣವನ್ನು ಶಿವತತ್ವ ಸ್ವೀಕರಿಸುವುದಿಲ್ಲ. ಆದ್ದರಿಂದ ವಿಶ್ವದಲ್ಲಿ ತಮೋಗುಣ ಬಹಳ ಹೆಚ್ಚಾಗುತ್ತದೆ. ಅದರ ಪರಿಣಾಮ ನಮ್ಮ ಮೇಲೆ ಬೀರಬಾರದೆಂಬ ಕಾರಣದಿಂದ ಮಹಾಶಿವರಾತ್ರಿಯ ವ್ರತವನ್ನು ಕೈಗೊಂಡು ಶಿವತತ್ವವನ್ನು ಆಕರ್ಷಿಸುವ ಸಲುವಾಗಿ ಶಿವರಾತ್ರಿಯ ರಾತ್ರಿ ಉಪವಾಸ, ಪೂಜೆ ಹಾಗೂ ಜಾಗರಣೆ ವ್ರತವನ್ನು ಮಾಡಲಾಗುತ್ತದೆ. ಶಿವರಾತ್ರಿಯ ಜಾಗರಣೆ, ಪೂಜೆ ಹಾಗೂ ಉಪವಾಸದ ಸಮಯದಲ್ಲಿ ಶಿವನಿಗೆ ಯಾಮಪೂಜೆ ಮಾಡಬೇಕೆಂಬ ವಿಧಾನವಿದೆ. ಹಾಗಿದ್ದರೆ ಈ ಯಾಮಪೋಜೆ ಎಂದರೇನು? ಇದರ ವಿಧಿವಿಧಾನಗಳೇನು? ಎಂದು ತಿಳಿಯೋಣ
ಯಾಮಪೂಜೆ ಎಂದರೇನು?
ಶಿವರಾತ್ರಿಯ ದಿನ ರಾತ್ರಿ ಸಮಯದಲ್ಲಿ ಜಾಗರಣೆ ಹಾಗೂ ಉಪವಾಸ ಮಾಡಲಾಗುತ್ತದೆ. ಈ ಸಮಯದಲ್ಲಿ ನಾಲ್ಕು ಪ್ರಹರಗಳಲ್ಲಿ ನಾಲ್ಕು ಪೂಜೆಗಳನ್ನು ಮಾಡಬೇಕೆಂಬ ವಿಧಾನವಿದೆ. ಇದನ್ನೇ ಯಾಮಪೂಜೆ ಎಂದು ಹೇಳಲಾಗುತ್ತದೆ.
ಯಾಮಪೂಜೆಯ ವಿಧಿವಿಧಾನಗಳು:
ಶಿವರಾತ್ರಿಯಂದು ಮಾಡುವ ಈ ಪ್ರತಿಯೊಂದು ಯಾಮಪೂಜೆಯಲ್ಲೂ ದೇವರಿಗೆ ಅಭ್ಯಂಗಸ್ನಾನ ಮಾಡಿಸಬೇಕು. ಇದಾದ ನಂತರ ಅನುಲೇಪನ ಅಮಡಿ ಧೋತ್ರಾ, ಮಾವಿನ ಹಾಗೂ ಬಿಲ್ವದ ಎಲೆಗಳನ್ನು ಶಿವನಿಗೆ ಅರ್ಪಿಸಬೇಕು. ಬಿಲ್ವಾರ್ಪಣೆಯಾದ ನಂತರ ಅಕ್ಕಿಯ ಹಿಟ್ಟಿನಿಂದ ಇಪ್ಪತ್ತಾರು ದೀಪಗಳನ್ನು ಮಾಡಿ ಅವುಗಳನ್ನು ದೇವರಿಗೆ ಬೆಳಗಬೇಕು. ಪೂಜೆಯ ನಂತರ ನೂರ ಎಂಟು ದೀಪಗಳನ್ನು ದಾನ ಮಾಡಬೇಕು.
ಪ್ರತಿಯೊಂದು ಪೂಜೆಯ ಮಂತ್ರಗಳು ಬೇರೆ ಬೇರೆಯಾಗಿದ್ದು, ಅವುಗಳಿಂದ ಅರ್ಘ್ಯವನ್ನು ನೀಡಬೇಕು. ನೃತ್ಯ, ಗೀತೆ, ಕಥಾಶ್ರವಣ ಮುಂತಾದ ವಿಷಯಗಳಿಂದ ಜಾಗರಣೆಯನ್ನು ಮಾಡಬೇಕು. ಇದಾದ ಬಳಿಕ ಬೆಳಿಗ್ಗೆ ಸ್ನಾನ ಮಾಡಿ ಮತ್ತೊಮ್ಮೆ ಶಿವ ಪೂಜೆ ಮಾಡಬೇಕು. ಉಪವಾಸವನ್ನು ಬಿಡುವಾಗ ಬ್ರಾಹ್ಮಣಭೋಜನ ನೀಡಬೇಕು. ಕೊನೆಯಲ್ಲಿ ಬ್ರಾಹ್ಮಣರಿಂದ ಆಶೀರ್ವಾದ ಪಡೆದುಕೊಂಡು ವ್ರತದ ಸಮಾಪ್ತಿ ಮಾಡಬೇಕಾಗುತ್ತದೆ.
ಇದನ್ನೂ ಓದಿ : Mahashivratri jagarane: ಆಧ್ಯಾತ್ಮದ ಜೊತೆಗೆ ವೈಜ್ಞಾನಿಕ ಕಾರಣವನ್ನು ಹೊಂದಿರುವ ಪುಣ್ಯ ಆಚರಣೆ ಈ ಮಹಾಶಿವರಾತ್ರಿ ಜಾಗರಣೆ
ಹನ್ನೆರಡು, ಹದಿನಾಲ್ಕು ಅಥವಾ ಇಪ್ಪತ್ತನಾಲ್ಕು ವರ್ಷಗಳ ಕಾಲ ಈ ವೃತವನ್ನು ಆಚರಿಸಿದರೆ ನಂತರದಲ್ಲಿ ಈ ವ್ರತದ ಪರಿಹಾರ (ಉದ್ಯಾಪನೆ) ವನ್ನು ಮಾಡಬೇಕು ಎಂದು ಹೇಳಲಾಗುತ್ತದೆ.
Maha shivaratri- Yamapooje: What is Yamapooje?: Do you know its rituals?
Comments are closed.