(Scientific Reason Behind Diwali)ಭಾರತೀಯರು ಆಚರಿಸುವ ಪ್ರತೀ ಹಬ್ಬದ ಆಚರಣೆಯ ಹಿಂದೆ ವೈಜ್ಞಾನಿಕ ಕಾರಣವಿರುತ್ತದೆ. ಅಂತಹ ಕಾರಣವನ್ನು ತಿಳಿಯುವ ಪ್ರಯತ್ನವನ್ನೂ ಯಾರೂ ಮಾಡುವುದಿಲ್ಲ. ಪೂರ್ವಜರು ನಡೆಸಿಕೊಂಡು ಬಂದ ಸಂಪ್ರದಾಯ ಅನ್ನುವ ಕಾರಣಕ್ಕೆ ನಾವೂ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಇದೀಗ ದೀಪಾವಳಿ ಸಮೀಪಿಸಿದೆ. ಎಲ್ಲೆಡೆ ದೀಪಾವಳಿ ಹಬ್ಬದ ಆಚರಣೆಗೆ ಸಿದ್ದತೆ ನಡೆಯುತ್ತಿದೆ. ಆದರೆ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ವೈಜ್ಞಾನಿಕ ಕಾರಣವಿದೆ. ದೀಪಾವಳಿಯನ್ನು ಯಾವ ಕಾರಣಕ್ಕೆ ಆಚರಿಸುತ್ತಾರೆ. ಆಚರಣೆಯ ಹಿಂದಿರುವ ಕಾರಣವನ್ನು ತಿಳಿದುಕೊಳ್ಳೋಣಾ.
ದೀಪಾವಳಿ ಹಬ್ಬ ಬೆಳಕಿನ ಹಬ್ಬ ಎಲ್ಲರ ಜೀವನದಲ್ಲಿ ಸುಖ ಶಾಂತಿ ನೀಡುತ್ತದೆ ಎಂಬುದು ಜನರ ನಂಬಿಕೆ. ಈ ಬೆಳಕಿನ ಹಬ್ಬವು ದೂರದಲ್ಲಿರುವ ಕುಟುಂಬದ ಸದಸ್ಯರನ್ನು ಒಂದೆಡೆ ಸೇರಿಸುತ್ತದೆ. ಹೀಗೆ ಕುಟುಂಬದ ಎಲ್ಲಾ ಸದಸ್ಯರು ಸೇರುವುದರಿಂದ ಮನೆಯಲ್ಲಿ ಖುಷಿಯ ವಾತಾವರಣ ನಿರ್ಮಾಣವಾಗುತ್ತದೆ. ಇಷ್ಟೇ ಅಲ್ಲದೆ ಮನೆಯನ್ನು ಸ್ವಚ್ಚಗೊಳಿಸುವಂತಹ ಕಾರ್ಯದಲ್ಲಿ ಎಲ್ಲರೂ ಕೂಡ ತೊಡಗುತ್ತಾರೆ.ಮನೆಯಲ್ಲಿ ಮಹಿಳೆಯರು ಒಂದು ವಾರದ ಮುಂಚೆಯೆ ಮನೆಯ ಮೂಲೆ ಮೂಲೆ ಬಿಡದೆ ಸ್ವಚ್ಚ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ದೀಪಾವಳಿಯ ಆಚರಣೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ದೀಪಾವಳಿ ಆಚರಣೆಯಿಂದಾಗಿ ಮನೆಯು ಪೂರ್ಣ ಸ್ವಚ್ಚವಾಗುವುದಕ್ಕೆ ಸಹಾಯವಾಗುತ್ತದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಲವಾರು ಜನರ ಮನೆಯ ಮುಂದೆ ದೀಪದ ಹಣತೆಗಳು ಬೆಳಗುತ್ತ ಇರುತ್ತದೆ. ಇದರ ಹಿಂದೆ ಕೂಡ ಒಂದು ಕಾರಣ ಅಡಗಿದೆ. ದೀಪಾವಳಿ ಹಬ್ಬ ಸಮೀಪಿಸುತ್ತಿದ್ದ ಹಾಗೆ ಹಗಲು ಕಡಿಮೆ ಇರುತ್ತದೆ, ಕತ್ತಲು ಬೇಗ ಆಗುತ್ತದೆ. ಇದರಿಂದಾಗಿ ರಾತ್ರಿ ಒಡಾಡುವಂತಹ ಜನರಿಗೆ ದಾರಿಯು ಕಾಣದಂತೆ ಆಗುತ್ತದೆ. ಹಾಗಾಗಿ ಆಗಿನ ಜನರು ಮನೆಯ ಮುಂದೆ ದೀಪದ ಹಣತೆಯನ್ನು ಹಚ್ಚಿಡುವಂತಹ ಅಭ್ಯಾಸವನ್ನು ಮಾಡಿಕೊಂಡರು ಆಗಿನಿಂದ ಇದನ್ನು ಆಚರಿಸುತ್ತಾ ಬಂದಿದ್ದಾರೆ. ಈ ದೀಪವನ್ನು ಹಚ್ಚಿಡುವುದಕ್ಕೆ ಇನ್ನೊಂದು ನಂಬಿಕೆ ಕೂಡ ಇದೆ ಆಗ ದಟ್ಟ ಕಾಡಿನ ಮಧ್ಯೆ ಜನರ ಮನೆಗಳು ಇರುತ್ತಿದ್ದವು ಹೀಗಾಗಿ ಕಾಡು ಪ್ರಾಣಿಗಳು ಮನೆಯ ಹತ್ತಿರ ಸುಳಿಯಬಾರದೆಂಬ ಕಾರಣಕ್ಕೆ ಮನೆಯ ಮುಂದೆ ದೀಪವನ್ನು ಹಚ್ಚಿಡುವುದನ್ನು ರೂಢಿಸಿಕೊಂಡರು ಎಂಬುದು ಹಿರಿಯರ ನಂಬಿಕೆ.
ಇದನ್ನೂ ಓದಿ:Namma Metro 12 years : 5 ರಿಂದ 8 ಲಕ್ಷಕ್ಕೆ ಪ್ರಯಾಣಿಕರ ಸಂಖ್ಯೆ ಏರಿಕೆ: 12 ವರ್ಷಕ್ಕೆ ನಮ್ಮ ಮೆಟ್ರೋ ಗುರಿ
ಇದನ್ನೂ ಓದಿ:108 employees warn strike : ದಸರಾ ಆಯ್ತು ದೀಪಾವಳಿ ಬಂದ್ರೂ ಸಂಬಳವಿಲ್ಲ: ಮುಷ್ಕರದ ಎಚ್ಚರಿಕೆ ಕೊಟ್ಟ 108 ಸಿಬ್ಬಂದಿ
ದೀಪಾವಳಿಯ ದಿನದಂದು ಎಲ್ಲರೂ ಎಣ್ಣೆ ಸ್ನಾನವನ್ನು ಮಾಡುವುದರಿಂದ ಚರ್ಮಗಳು ಒಡೆಯುವುದರಿಂದ ನಮ್ಮನ್ನು ರಕ್ಷಿಸುತ್ತದೆ. ಚಳಿಗಾಲದಲ್ಲಿ ನಮ್ಮ ಸ್ಕಿನ್ ಹೆಚ್ಚಾಗಿ ಒಡೆಯುತ್ತದೆ ಹಾಗಾಗಿ ಎಣ್ಣೆಯನ್ನು ಹಚ್ಚಿಕೊಂಡು ಸ್ನಾನವನ್ನು ಮಾಡಿದರೆ ಚರ್ಮಗಳು ಒಡೆಯದಂತೆ ಕಾಪಾಡುತ್ತದೆ. ದೀಪಾವಳಿ ಹಬ್ಬದ ಹಿಂದಿನ ದಿನ ಹಂಡೆಗೆ ನೀರನ್ನು ತುಂಬಿ ಪೂಜೆಯನ್ನು ಮಾಡಲಾಗುತ್ತದೆ ಇದರ ಹಿಂದೆಯೂ ಕೂಡ ಒಂದು ಕಾರಣವಿದೆ ವರ್ಷವಿಡಿ ಜನರು ಕೆಲಸಗಳಲ್ಲಿ ತೊಡಗಿಕೊಂಡಿರುವುದರಿಂದ ಹಂಡೆಯನ್ನು ಸ್ವಚ್ಚಗೊಳಿಸಲು ಸಮಯವಿರುವುದಿಲ್ಲ ಹಾಗಾಗಿ ಈ ಆಚರಣೆ ಒಂದು ರೀತಿಯಾಗಿ ಸಹಾಯವಾಗುತ್ತದೆ ಎನ್ನಬಹುದು. ಎಲ್ಲಾ ಹಬ್ಬಗಳ ಆಚರಣೆಗಳಲ್ಲೂ ಕೂಡ ಒಂದೊಂದು ಕಾರಣಗಳು ಅಡಗಿರುತ್ತವೆ ಅದನ್ನು ತಿಳಿದುಕೊಳ್ಳುವಂತಹ ಪ್ರಯತ್ನಕ್ಕೆ ನಾವು ಕೈ ಹಾಕುವುದಿಲ್ಲ. ಆಚರಣೆಗಳ ಹಿಂದಿನ ಕಾರಣಗಳನ್ನು ಅರಿತಾಗ ನಮ್ಮ ಆಚರಣೆಗಳ ಹಿಂದಿನ ಕಾರಣ ಎಷ್ಟು ಅರ್ಥಗರ್ಭಿತವಾಗಿದೆ ಎಂದು ಮನಸ್ಸಿನ ಮೂಲೆಯಲ್ಲಿ ಭಾವನೆ ಮೂಡುತ್ತದೆ.
Scientific Reason Behind Diwali Celebration: Did You Know?
Comments are closed.